logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

fail
ನಾಮವಾಚಕ ನುಡಿಗಟ್ಟು
without fail (ಆಜ್ಞೆಯನ್ನೋ ವಾಗ್ದಾನವನ್ನೋ ಒತ್ತಾಯಮಾಡಿ ಹೇಳುವಲ್ಲಿ) ತಪ್ಪದೆ; ಬಿಡದೆ; ಖಂಡಿತವಾಗಿ; ನಿಸ್ಸಂಶಯವಾಗಿ; ಅಡ್ಡಿ ಅಡಚಣೆಗಳು ಬಂದರೂ ಲೆಕ್ಕಿಸದೆ.
  • ವಿಫಲತೆ; ಸೋಲು; ನಪಾಸು; ತೇರ್ಗಡೆಯಾಗದಿರುವುದು; ಅನುತ್ತೀರ್ಣತೆ; ಉತ್ತೀರ್ಣನಾಗದಿರುವುದು.
  • (ಪರೀಕ್ಷೆಯಲ್ಲಿ) ನಪಾಸಾದವನು; ತೇರ್ಗಡೆಯಾಗದವನು; ಉತ್ತೀರ್ಣನಾಗದವನು.

  • fail
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    fail safe ನಿರಪಾಯಸ್ಥಿತಿಗೆ ಮರಳು; ಸುರಕ್ಷಿತಸ್ಥಿತಿಗೆ ಮತ್ತೆ ಬರು; ವಿದ್ಯುತ್‍, ಯಂತ್ರ, ಮೊದಲಾದವು ಕೆಟ್ಟುಹೋದರೆ ಯಾ ಯಾವುದೇ ತಪ್ಪು ಘಟಿಸಿದರೆ ಅಪಾಯದಿಂದ ಪಾರುಮಾಡುವ ಸಾಧನವನ್ನು ಹೊಂದಿರು ಯಾ ಅಪಾಯವಾಗದ ಸ್ಥಿತಿಗೆ ಬರು. words fail me ನನಗೆ ಪದಗಳು ಸಿಗುತ್ತಿಲ್ಲ; ಹೇಳಲು ಯಾ ವರ್ಣಿಸಲು ಮಾತುಗಳು ಸಾಲವು; ಸರಿಯಾಗಿ ವರ್ಣಿಸಲು ನಾನು ಅಸಮರ್ಥ.
  • (ಮಾಡಲು) ತಪ್ಪು; (ತಾತ್ಸಾರದಿಂದಲೋ, ಮರೆವಿನಿಂದಲೋ, ಆಗದಿರುವುದರಿಂದಲೋ, ಮನಸ್ಸಿಲ್ಲದಿರುವುದರಿಂದಲೋ) ಮಾಡದಿರು; ಮಾಡದೆ ಬಿಡು: he failed to come ಅವನು ಬರಲು ತಪ್ಪಿದ.
  • ನಿರೀಕ್ಷೆಗೆಡಿಸು; ಆಶಾಭಂಗ ಉಂಟುಮಾಡು: the wind failed us ಗಾಳಿ ನಮಗೆ ಆಶಾಭಂಗವುಂಟುಮಾಡಿತು. his friends failed him ಅವನ ಸ್ನೇಹಿತರು ಅವನ ನಿರೀಕ್ಷೆ ಕೆಡಿಸಿದರು.
  • (ಹಣ) ಸಲ್ಲಿಸುವುದನ್ನು ನಿಲ್ಲಿಸು, ತಪ್ಪಿಸು; ಪಾವತಿ ಮಾಡದಿರು.
  • ಅಭ್ಯರ್ಥಿಯಾಗಿ ಆಯ್ಕೆಮಾಡದಿರು.
  • (ಪರೀಕ್ಷೆಯಲ್ಲಿ ಯಾ ವಿಷಯದಲ್ಲಿ) ನಪಾಸಾಗು; ಹೇಲಾಗು; ಅನುತ್ತೀರ್ಣನಾಗು; ತೇರ್ಗಡೆಯಾಗದಿರು; ನಿಗದಿಯಾಗಿರುವುದಕ್ಕಿಂತ ಕಡಮೆ ಅಂಕಪಡೆ: he failed in history ಅವನು ಚರಿತ್ರೆಯಲ್ಲಿ ಹೇಲಾದ.
  • (ಪರೀಕ್ಷೆಯಲ್ಲಿ) ಹೇಲಾಗಿಸು; ನಪಾಸಾಗಿಸು; ಅನುತ್ತೀರ್ಣವಾಗಿಸು; ತೇರ್ಗಡೆ ಮಾಡಿಸದಿರು; ಅಗತ್ಯವಾಗಿರುವುದಕ್ಕಿಂತ ಕಡಮೆ ಅಂಕ ಕೊಡು.
  • (ಯಾವುದನ್ನೇ ಮಾಡುವುದರಲ್ಲಿ ಯಾ ಸಾಧಿಸುವುದರಲ್ಲಿ) ವಿಫಲವಾಗು; ಅಯಶಸ್ವಿಯಾಗು.

  • failed
    ಗುಣವಾಚಕ
    ಹೇಲಾದ; ವಿಫಲನಾದ; ಅಯಶಸ್ವಿಯಾದ.

    failing
    ನಾಮವಾಚಕ
  • ಅಭಾವ; ಅಭಾವವಾಗುವುದು.
  • ಕೊರೆ; ಕೊರತೆ; ಸಾಕಾಗದಿರುವುದು; ಕಡಮೆ ಬೀಳುವುದು.
  • (ಮಾಡಲು) ತಪ್ಪುವುದು; ಉದಾಸೀನದಿಂದಲೋ, ಮರೆವಿನಿಂದಲೋ, ಮನಸ್ಸಿಲ್ಲದಿರುವುದರಿಂದಲೋ ಮಾಡದಿರುವುದು.
  • ನಾಶವಾಗಿ ಹೋಗುವುದು; ಅಳಿದುಹೋಗುವುದು; ನಷ್ಟವಾಗಿ ಹೋಗುವುದು.
  • ಕುಗ್ಗುವುದು; ಕುಸಿಯುವುದು; ಭಗ್ನವಾಗುವುದು.
  • ಬಲಗುಂದುವುದು; ಸಾಮರ್ಥ್ಯಗುಂದುವುದು.
  • ಎಣಿಸಿದಂತಾಗದಿರುವುದು; ಆಶಾಭಂಗ.
  • ಸಾಕಷ್ಟು ಸನ್ನದ್ಧವಾಗಿಲ್ಲದಿರುವುದು.
  • ಪಡೆಯಲು ವಿಫಲವಾಗುವುದು; ಅಯಶಸ್ವಿಯಾಗುವುದು; ಸೋಲುವುದು.
  • ಹೇಲು; ನಪಾಸು; ತೇರ್ಗಡೆಯಾಗದಿರುವುದು.
  • ಮಾಡಲಾರದೆ ಹೋಗುವುದು; ಮಾಡುವುದರಲ್ಲಿ ಜಯಶೀಲನಾಗದಿರುವುದು.
  • ಗುರಿತಪ್ಪುವುದು; ವ್ಯರ್ಥವಾಗುವುದು; ನಿಷ್ಫಲವಾಗುವುದು.
  • (ಹಣ ಸಲ್ಲಿಸುವುದನ್ನು) ತಪ್ಪಿಸುವುದು; ನಿಲ್ಲಿಸುವುದು; ಪಾವತಿಮಾಡದಿರುವುದು.
  • ದಿವಾಳಿಯಾಗುವುದು; ಪಾಪರ್‍ ಆಗುವುದು.
  • ಅಭ್ಯರ್ಥಿಯಾಗಿ ಆಯ್ಕೆಯಾಗದಿರುವುದು ಯಾ ಆಯ್ಕೆಮಾಡದಿರುವುದು.
  • (ಸ್ವಭಾವದಲ್ಲಿನ) ದೋಷ; ಕುಂದು; ಕೊರತೆ; ನ್ಯೂನತೆ; ದೌರ್ಬಲ್ಯ.

  • failing
    ಉಪಸರ್ಗ ಪದಗುಚ್ಛ
    ಆಗದಿದ್ದರೆ; ಇಲ್ಲದಿದ್ದರೆ; ಮಾಡದೆ ಹೋದರೆ; ತಪ್ಪಿದಲ್ಲಿ: failing this ಇದು ಆಗದಿದ್ದರೆ; ಇದು ತಪ್ಪಿದರೆ. failing an answer ಉತ್ತರ ಬಾರದಿದ್ದಲ್ಲಿ. whom failing or failing whom ಇಲ್ಲದಿದ್ದರೆ; ಅವನ ಗೈರುಹಾಜರಿಯಲ್ಲಿ.

    failure
    ನಾಮವಾಚಕ
  • ಇಲ್ಲದಿರುವುದು; ಸಂಭವಿಸದಿರುವುದು.
  • ಮಾಡದೆ ಹೋಗುವುದು; ಮಾಡಲು ತಪ್ಪುವುದು.
  • ಕೊರೆ; ಅಭಾವ; ಕೊರತೆ; ಕಡಮೆ ಬೀಳುವುದು; ಸಾಲದೆ ಹೋಗುವುದು; ಸಾಲದೆ ಬರುವುದು; ಖೋತಾ ಬೀಳುವುದು.
  • ಮುರಿದುಬೀಳುವುದು; ಭಂಗವಾಗುವುದು.
  • ಸೋಲು; ಅಪಜಯ; ವಿಫಲತೆ; ವೈಫಲ್ಯ.
  • ಹೇಲು; ತೇರ್ಗಡೆಯಾಗದೆ ಹೋಗುವುದು; ಉತ್ತೀರ್ಣನಾಗದೆ ಹೋಗುವುದು.
  • ಸೋತವನು, ಸೋತದ್ದು, ಯಾ ಸೋತಪ್ರಯತ್ನ.
  • ದಿವಾಳಿ; ಪಾಪರ್‍ತನ.
  • (ವೈದ್ಯಶಾಸ್ತ್ರ) ನಿಲ್ಲುವುದು; ಸ್ತಂಭನ; ಅತಿಮುಖ್ಯವಾದ ಯಾ ಪ್ರಾಣಾಧಾರವಾದ ಶರೀರದ ಕ್ರಿಯೆ ನಿಂತುಹೋಗುವುದು: heart failure ಹೃದಯಸ್ತಂಭನ.
  • ಅಸಾಮರ್ಥ್ಯ; ಮಾಡಲು ಶಕ್ತಿಯಿಲ್ಲದಿರುವುದು: his failure to answer questions ಪ್ರಶ್ನೆಗಳಿಗೆ ಉತ್ತರ ನೀಡಲು ಅವನ ಅಸಾಮರ್ಥ್ಯ.
  • (ಯಂತ್ರ ಮೊದಲಾದವುಗಳ) ನಿಷ್ಕ್ರಿಯತೆ; ಸ್ಥಗಿತ ಸ್ಥಿತಿ; ಕೆಲಸ ನಿಲ್ಲಿಸಿದ ಯಾ ನಿಂತುಹೋದ ಸ್ಥಿತಿ.

  • fain
    ಆಖ್ಯಾತಕ ಗುಣವಾಚಕ
    (ಪ್ರಾಚೀನ ಪ್ರಯೋಗ)
  • (ಇರುವ ಯಾ ಸದ್ಯದ ಪರಿಸ್ಥಿತಿಯಲ್ಲಿ) ಮಾಡಲು ಇಷ್ಟವುಳ್ಳ.
  • ಬೇರೆ ದಾರಿ ಇಲ್ಲದ; ಅನಿವಾರ್ಯವಾದ; ಉಪಾಯಗಾಣದೆ (ಮಾಡಲು) ಒಪ್ಪಬೇಕಾಗಿರುವ.

  • fain
    ಕ್ರಿಯಾವಿಶೇಷಣ ಪದಗುಚ್ಛ
    (ಪ್ರಾಚೀನ ಪ್ರಯೋಗ) ಸಂತೋಷದಿಂದ; ಸಂತೋಷವಾಗಿ. would fain ಸಂತೋಷದಿಂದ; (ಮಾಡಲು) ಇಷ್ಟವುಳ್ಳವನಾಗಿ.

    fain
    ಸಕರ್ಮಕ ಕ್ರಿಯಾಪದ ಪದಗುಚ್ಛ
    (ಬ್ರಿಟಿಷ್‍ ಪ್ರಯೋಗ) ಅಂಬಾಲ್‍; ನಿಲ್ಲಿಸು; ಇಚ್ಛೆಯಿಲ್ಲದಿರು (ಮಾಡಲು ಇಷ್ಟವಿಲ್ಲದ ಕೆಲಸದ ವಿಷಯದಲ್ಲಾಗಲಿ, ಆಟವಾಡುವಾಗ ಆಟವನ್ನು ಕೆಲವು ಕ್ಷಣ ನಿಲ್ಲಿಸುವುದಕ್ಕಾಗಲಿ ಸಾಮಾನ್ಯವಾಗಿ ಮಕ್ಕಳು ಬಳಸುವ ವಿನಾಯತಿ ಸೂತ್ರ). fain I ನಾನೊಲ್ಲೆ; ನನಗಿಷ್ಟವಿಲ್ಲ. fain I wicket-keeping ವಿಕೆಟ್‍ ಕಾಯುವುದನ್ನು ನಾನೊಲ್ಲೆ.

    faineant
    ನಾಮವಾಚಕ
  • ಸೋಮಾರಿ; ಕೆಲಸ ಮಾಡದವ; ಆಲಸಿ; ಜಡ.
  • ಸೋಮಾರಿಯಾದ ಅಧಿಕಾರಿ, ನೌಕರ, ಮೊದಲಾದವರು.


  • logo