logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

faggoty
ಗುಣವಾಚಕ
  • ಕಂತೆಕಂತೆಯಾಗಿರುವ; ಕಟ್ಟುಕಟ್ಟಾಗಿರುವ.
  • (ಹೆಂಗಸಿನ ವಿಷಯದಲ್ಲಿ) ಅಹಿತಳಾದ.
  • (ಸಾಮಾನ್ಯವಾಗಿ ಗಂಡಸಿನ ವಿಷಯದಲ್ಲಿ) ಸಲಿಂಗಕಾಮಿಯ.

  • Fagin
    ನಾಮವಾಚಕ
    ಕಳ್ಳವ್ಯಾಪಾರಿ ಯಾ ಕಳ್ಳಗುರು; ಕದ್ದ ಮಾಲನ್ನು ಸ್ವೀಕರಿಸುವವನು ಯಾ ಕಳ್ಳರಿಗೆ ತರಪೇತು ಕೊಡುವವನು.

    fagot
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = 1faggot.

    fagot
    ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ) = 2faggot.

    fah
    ನಾಮವಾಚಕ
    (ಸಂಗೀತ) (ಒಂದು ಸ್ವರಶ್ರೇಣಿಯ ಯಾವುದೇ ಸ್ವರವನ್ನು ಒಂದು ಉಚ್ಚಾರಾಂಶದಿಂದ ಹೆಸರಿಸುವ ಪದ್ಧತಿಯಲ್ಲಿ) ಸ್ವರಾಷ್ಟಕದ ನಾಲ್ಕನೆಯ ಸ್ವರ.

    Fahr.
    ಸಂಕ್ಷಿಪ್ತ
    Fahrenheit.

    Fahrenheit
    ಗುಣವಾಚಕ
    (ಭೌತವಿಜ್ಞಾನ) (ಜರ್ಮನ್‍ ಭೌತವಿಜ್ಞಾನಿ) ಹ್ಯಾರನ್‍ಹೈಟ್‍ನ; (ಮುಖ್ಯವಾಗಿ ಆತ ನಿರ್ಮಿಸಿದ) ಹ್ಯಾರನ್‍ಹೈಟ್‍ ತಾಪಮಾಪನಪದ್ಧತಿಯ, ಯಾ ಆ ಪದ್ಧತಿಗೆ ಸಂಬಂಧಿಸಿದ.

    Fahrenheit scale
    ನಾಮವಾಚಕ
    ಹ್ಯಾರನ್‍ಹೈಟ್‍ ಮಾನ; ನೀರಿನ ಘನೀಕರಣ ಬಿಂದುವನ್ನು $+32^\circ$ ಎಂದೂ ನೀರಿನ ಕುದಿಬಿಂದುವನ್ನು $+ 212^\circ$ ಎಂದೂ ಪರಿಗಣಿಸಿ ಅವೆರಡರ ಅಂತರವನ್ನು 180 ಡಿಗ್ರಿಗಳಾಗಿ ವಿಭಾಗಿಸಿದ ತಾಪಮಾನ ಪದ್ಧತಿ.

    Fahrenheit thermometer
    ನಾಮವಾಚಕ
    ಹ್ಯಾರನ್‍ಹೈಟ್‍ ತಾಪಮಾಪಕ; ಹ್ಯಾರನ್‍ಹೈಟ್‍ ಪದ್ಧತಿಯಲ್ಲಿ ತಾಪವನ್ನು ಗುರುತಿಸಿರುವ ಥರ್ಮಾಈಟರು.

    faience
    ನಾಮವಾಚಕ
    ನಕಾಸೆ ಪಿಂಗಾಣಿ; ಮಣ್ಣಿನ ಯಾ ಪಿಂಗಾಣಿಯ ಚಿತ್ರಿತ ಸಾಮಾನುಗಳು.


    logo