logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

facula
ನಾಮವಾಚಕ
(ಖಗೋಳ ವಿಜ್ಞಾನ) ಅತಿಭೆ; ಸಾಮಾನ್ಯವಾಗಿ ಸೂರ್ಯನ ಒಡಲಲ್ಲಿ ಕಾಣಬರುವ ಹೆಚ್ಚು ಪ್ರಕಾಶಮಯ ಪ್ರದೇಶ.

facular
ಗುಣವಾಚಕ
(ಖಗೋಳ ವಿಜ್ಞಾನ) ಅತಿಭೆಯ ಯಾ ಅದಕ್ಕೆ ಸಂಬಂಧಿಸಿದ.

faculous
ಗುಣವಾಚಕ
(ಖಗೋಳ ವಿಜ್ಞಾನ) ಅತಿಭಾಯುತ; ಅತಿಭೆಯಿಂದ ಕೂಡಿದ.

facultative
ಗುಣವಾಚಕ
  • ಅನುಮೋದಕ; ಅನುಜ್ಞಾತ್ಮಕ; ಅನುಮತಿ ಕೊಡುವ; ಯಾವುದನ್ನೇ ಮಾಡಲು ಯಾ ಮಾಡದಿರಲು ಅನುಜ್ಞೆ, ಅವಕಾಶ ಯಾ ಅಧಿಕಾರ ಕೊಡುವ.
  • ಐಚ್ಛಿಕ; ಆಯ್ದುಕೊಳ್ಳಬಹುದಾದ; ಇಚ್ಛೆಗೆ ಯಾ ಇಷ್ಟಕ್ಕೆ ಬಿಟ್ಟ.
  • ಆಗಂತುಕ; ಅನಿಶ್ಚಿತ; ಸಂದರ್ಭವನ್ನು ಅವಲಂಬಿಸುವ.
  • (ದೈಹಿಕ ಯಾ ಮಾನಸಿಕ) ಶಕ್ತಿಯ ಯಾ ಅದಕ್ಕೆ ಸಂಬಂಧಿಸಿದ.
  • (ಜೀವವಿಜ್ಞಾನ) ಐಚ್ಛಿಕ; ನಿರ್ದಿಷ್ಟ ಕ್ರಿಯೆ ಜೀವನದ ರೀತಿ, ಮೊದಲಾದವುಗಳಿಗೆ ಸೀಮಿತವಾಗಿಲ್ಲದ.

  • faculty
    ನಾಮವಾಚಕ ಪದಗುಚ್ಛ
  • (ಯಾವುದೇ ವಿಶೇಷ ಕಾ ಮಾಡಲು ಒಬ್ಬನಿಗಿರುವ) ಸಹಜ ಶಕ್ತಿ; ಯೋಗ್ಯತೆ; ಸಾಮರ್ಥ್ಯ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಕಾರ್ಯನಿರ್ವಾಹಕ ಶಕ್ತಿ; ಆಡಳಿತಸಾಮರ್ಥ್ಯ.
  • (ದೇಹದ ಯಾ ಅವಯವದ) ಸಹಜಶಕ್ತಿ; ಸ್ವಾಭಾವಿಕ ಶಕ್ತಿ.
  • (ಸಂಕಲ್ಪ, ನೆನಪು, ವಿವೇಚನೆ, ಮೊದಲಾದ) ಮನಶ್ಶಕ್ತಿ.
  • (ಮಾನವಿಕ, ಕಲೆ, ಯಾ ವಿಜ್ಞಾನದ ಯಾವುದೇ) ಶಾಖೆ.
  • (ವಿಶ್ವವಿದ್ಯಾನಿಲಯದ ಯಾವುದೇ) ಬೋಧನಾಂಗ; ಬೋಧನ ವಿಭಾಗ.
  • (ಅಮೆರಿಕನ್‍ ಪ್ರಯೋಗ) ಒಂದು ವಿಶ್ವವಿದ್ಯಾನಿಲಯದ ಯಾ ಕಾಲೇಜಿನ ಅಧ್ಯಾಪಕವರ್ಗ; ಶಿಕ್ಷಕವರ್ಗ.
  • (ಮುಖ್ಯವಾಗಿ ಕ್ರೈಸ್ತಮಠಕ್ಕೆ ಸಂಬಂಧಪಟ್ಟಂತೆ) (ಯಾವುದೇ ಕೆಲಸ ಮಾಡಲು ಕಾಯಿದೆಯಿಂದಲೋ ಮೇಲಧಿಕಾರಿಯಿಂದಲೋ ಕೊಡಲಾದ) ಸ್ವಾತಂತ್ರ್ಯ , ಅಧಿಕಾರ, ಯಾ ಅಪ್ಪಣೆ.
  • ವೃತ್ತಿಬಾಂಧವರು; ವೃತ್ತಿಗರು; ವೃತ್ತಿಗವರ್ಗ; ಒಂದು ವೃತ್ತಿಯವರು ಯಾ ವೃತ್ತಿಗೆ (ಮುಖ್ಯವಾಗಿ ವೈದ್ಯವೃತ್ತಿಗೆ) ಸೇರಿದವರು.

  • fad
    ನಾಮವಾಚಕ
  • ಖಯಾಲು; ಗೀಳು; ಚಟ; ಹುಚ್ಚು:
    1. ಯಾವುದೇ ವಿಷಯ, ಭಾವನೆ, ಕಾರ್ಯನೀತಿ, ಮೊದಲಾದವುಗಳ ಬಗ್ಗೆ ವಿಶೇಷ ಒಲವು.
    2. ಅಂತಹ ಒಲವಿನ ವಿಷಯ, ಭಾವನೆ, ಇತ್ಯಾದಿ.
  • ವಿಚಿತ್ರ ಭಾವನೆ; ವಿಲಕ್ಷಣ ಅಭಿಪ್ರಾಯ.
  • ವಿಚಿತ್ರವರ್ತನೆ; ವಿಲಕ್ಷಣ ನಡೆನುಡಿ.

  • faddish
    ಗುಣವಾಚಕ
  • ಗೀಳಿನ; ಚಟದ; ಖಯಾಲಿನ; ಗೀಳಿನಂಥ.
  • ವಿಚಿತ್ರ ಅಭಿಪ್ರಾಯದ ಯಾ ವರ್ತನೆಯ.

  • faddishness
    ನಾಮವಾಚಕ
    ಖಯಾಲಿ ಪ್ರವೃತ್ತಿ; ಗೀಳಿನ ಸ್ವಭಾವ; ಯಾವುದೇ ವಸ್ತು ಯಾ ವಿಷಯದಲ್ಲಿ ಹೆಚ್ಚು ಆಸಕ್ತಿ ತಳೆಯುವ ಸ್ವಭಾವ.

    faddism
    ನಾಮವಾಚಕ
    ಗೀಳುಪ್ರಿಯತೆ; ಚಟದ ಮೋಹ:
  • ಯಾವುದೇ ಗೀಳು, ಚಟ ಯಾ ಚಪಲದ ವಿಷಯದಲ್ಲಿ ಮೋಹ.
  • ಅತಿ ಮೆಚ್ಚಿನ ಹವ್ಯಾಸ ಯಾ ಅಭಿರುಚಿಯನ್ನು ಅನುಸರಿಸುವ ಮನೋವೃತ್ತಿ.

  • faddist
    ನಾಮವಾಚಕ
  • ಗೀಳಿಗ; ಖಯಾಲುಗಾರ; ಯಾವುದೇ ವಿಷಯದಲ್ಲಿ ಹುಚ್ಚಾಗುವವನು.
  • ಮೆಚ್ಚಿನ ಹವ್ಯಾಸ, ಗೀಳು ಯಾ ಚಪಲವನ್ನು ಅನುಸರಿಸುವವನು.


  • logo