logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

daimonic
ಗುಣವಾಚಕ
= demonic.

daintily
ಕ್ರಿಯಾವಿಶೇಷಣ
  • ಅಚ್ಚುಕಟ್ಟಾಗಿ; ಸುಂದರವಾಗಿ; ಚೊಕ್ಕವಾಗಿ; ಅಂದವಾಗಿ.
  • ನಯವಾಗಿ; ಸೂಕ್ಷ್ಮವಾಗಿ; ನಾಜೂಕಾಗಿ; ಕೋಮಲವಾಗಿ.

  • daintiness
    ನಾಮವಾಚಕ
  • ನಾಜೂಕು; ನಯ; ಸೂಕ್ಷ್ಮತೆ; ಸುಕುಮಾರತೆ; ಕೋಮಲತೆ.
  • ಸುಂದರವಾಗಿರುವಿಕೆ; ಅಚ್ಚುಕಟ್ಟಾಗಿರುವಿಕೆ; ಅಂದವಾಗಿರುವಿಕೆ; ಸೊಬಗು; ಮನೋಹರತೆ.
  • ರಸವಂತಿಕೆ; ಮಧುರವಾಗಿರುವಿಕೆ; ರುಚಿಯಾಗಿರುವಿಕೆ.

  • dainty
    ನಾಮವಾಚಕ
    ರಸಕವಳ; ರುಚಿಯಾದ ಭಕ್ಷ್ಯ; ಸವಿಯುಣಿಸು (ರೂಪಕವಾಗಿಸಹ)

    dainty
    ಗುಣವಾಚಕ
  • ಸೂಕ್ಷ್ಮವಾದ; ನಾಜೂಕಿನ; ನಯವಾದ; ಲಲಿತ; ಕೋಮಲ.
  • ಆಯ್ದ; ಚೊಕ್ಕ; ಅಚ್ಚುಕಟ್ಟಾದ; ಉತ್ತಮವಾದ; ಒಳ್ಳೆಯ: dainty weather ಒಳ್ಳೆಯ ಹವೆ.
  • (ತಿಂಡಿತಿನಿಸು) ಸವಿಯಾದ; ಇನಿದಾದ; ರುಚಿಯಾದ; ಮಧುರ; ರುಚಿಕರ.
  • ಅಂದವಾದ; ಸುಂದರವಾದ; ಲಾವಣ್ಯದ.
  • ಸುಕುಮಾರ; ಸೂಕ್ಷ್ಮಸುಂದರವಾದ; ನಯನಾಜೂಕಿನ: dainty girl ಸುಕುಮಾರಿ. dainty teacups ನಯನಾಜೂಕಾದ ಟೀಬಟ್ಟಲುಗಳು.
  • ಸೂಕ್ಷ್ಮಾಭಿರುಚಿಯ; ಸೂಕ್ಷ್ಮ ಸಂವೇದನೆಯ; ಅತಿ ನಾಜೂಕುಪ್ರಕೃತಿಯ.

  • daiquiri
    ನಾಮವಾಚಕ
    ಡೈಕಿರಿ; ಒಂದು ಬಗೆಯ ಮಿಶ್ರಪಾನೀಯ; ರಮ್‍, ನಿಂಬೆ ಹಣ್ಣಿನ ರಸ ಮತ್ತು ಸಕ್ಕರೆಯನ್ನು ಬೆರೆಸಿ ಮಾಡಿದ ಪಾನೀಯ, ಕಾಕ್‍ಟೇಲು.

    dairy
    ನಾಮವಾಚಕ
  • ಡೈರಿ; ಹಾಲುಮನೆ; ಹೈನಿನ ಮನೆ; ಹಾಲು, ಕೆನೆ ಇಡುವ ಮತ್ತು ಬೆಣ್ಣೆ, ಗಿಣ್ಣು, ಮೊದಲಾದವನ್ನು ಮಾಡುವ ಕೋಣೆ ಯಾ ಕಟ್ಟಡ.
  • (ಆರಂಭದಲ್ಲಿ) ಹೈನಿನ ಶಾಖೆ; ಡೈರಿಯ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯವಸಾಯ ವಿಭಾಗ.
  • ಹೈನಂಗಡಿ; ಹಾಲು ಮೊದಲಾದವನ್ನು ಮಾರುವ ಅಂಗಡಿ.
  • ಡೈರಿಯ ಹಸುಗಳು.
  • = dairy farm.

  • dairy cattle
    ನಾಮವಾಚಕ
    ಹೈನುದನ; ಡೈರಿದನ; ಹಾಲಿನ ಉತ್ಪಾದನೆಗಾಗಿಯೇ ಸಾಕಿದ ಹಸುಗಳು.

    dairy cream
    ನಾಮವಾಚಕ
    ಹೈನುಕೆನೆ; ಡೈರಿ ಕೆನೆ; ಕೃತಕವಲ್ಲದ, ನಿಜವಾದ ಹಾಲಿನಿಂದ ತಯಾರಿಸಿದ ಕೆನೆ.

    dairy factory
    ನಾಮವಾಚಕ
    (ನ್ಯೂಸೀಲಂಡ್‍) ಹೈನುರ್ಕಾಖಾನೆ; ಬೆಣ್ಣೆ ಮತ್ತು ಗಿಣ್ಣುಗಳನ್ನು ತಯಾರಿಸುವ ಕಾರ್ಖಾನೆ.


    logo