logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dag
ಸಕರ್ಮಕ ಕ್ರಿಯಾಪದ
  • (ಹೊಲಿಗೆ) (ಬಟ್ಟೆ, ಉಡುಪು, ಮೊದಲಾದವುಗಳ ಅಂಚನ್ನು ಅಲಂಕಾರಕ್ಕಾಗಿ) ಕುಚ್ಚುಕುಚ್ಚಾಗಿ ಕತ್ತರಿಸು.
  • ಕೆಸರು ಹತ್ತಿಸು; ಕೊಳೆ ಮಾಡು; ಮಲಿನಗೊಳಿಸು.

  • dag
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮಳೆಯ ವಿಷಯದಲ್ಲಿ) ಸೋನೆ ಸುರಿ; ತುಂತುರು ಬೀಳು.
  • ಚಿಮುಕಿಸು; ಸಿಂಪಡಿಸು; ಎರಚು.
  • ಚಿಮುಕಿಸಿ – ತೋಯಿಸು, ನೆನಸು, ಒದ್ದೆ ಮಾಡು.

  • dageraad
    ನಾಮವಾಚಕ
    ಹೊಳೆಯುವ ಬಣ್ಣದ ಒಂದು ಸಮುದ್ರಮೀನು.

    dagga
    ನಾಮವಾಚಕ
    (ದಕ್ಷಿಣ ಆಹ್ರಿಕ)
  • (ಮಾದಕ ವಸ್ತುವಾಗಿ ಬಳಸುವ) ಪುಂಡಿಗಿಡ; ಸಣಬಿನ ಗಿಡ.
  • (ಮಾದಕವಸ್ತುವಾಗಿ ಬಳಸುವ) ಲಿಯೊನೊಟಿಸ್‍ ಕುಲದ ಗಿಡ.

  • dagger
    ನಾಮವಾಚಕ ಪದಗುಚ್ಛ ನುಡಿಗಟ್ಟು
    double dagger = double obelisk.
  • ಬಾಕು; ಕಠಾರಿ; ಸುರಿಗೆ. Figure: daggers-1
  • (ಮುದ್ರಣ) ಕಠಾರಿ ಗುರುತು($dakiSxNagger$).

  • dago
    ನಾಮವಾಚಕ
  • (ಅಶಿಷ್ಟ ತುಚ್ಛಾರ್ಥದಲ್ಲಿ, ಆ ಜನಾಂಗದವರಿಗೆ ಅಪಮಾನಕರವಾದ ಪ್ರಯೋಗ) ಡೇಗೋ; ಸ್ಪೇನ್‍, ಪೋರ್ಚುಗಲ್‍ ಅಥವಾ ಇಟಲಿ ದೇಶದವನು.
  • ವಿದೇಶೀಯ; ಹೊರದೇಶದವನು.

  • daguerreotype
    ನಾಮವಾಚಕ
    (ಛಾಯಾಚಿತ್ರಣ)
  • ಡಗರ್‍ ವಿಧಾನ; ಅಯೊಡಿನ್‍ಗೆ ಸೂಕ್ಷ್ಮತೆ ತೋರುವ ಬೆಳ್ಳಿಯ ತಗಡಿಯ ಮೇಲೆ ಯಾ ಬೆಳ್ಳಿಲೇಪಿಸಿದ ತಾಮ್ರದ ತಗಡಿನ ಮೇಲೆ ಪಾದರಸದ ಅವಿಯನ್ನು ಬಳಸಿಕೊಂಡು ಛಾಯಾಚಿತ್ರ ತೆಗೆಯುವ ಒಂದು ಹಳೆಯ ವಿಧಾನ.
  • ಈ ವಿಧಾನದಿಂದ ತೆಗೆದ ಚಿತ್ರ; ಡಗರ್‍ ಚಿತ್ರ.

  • dah
    ನಾಮವಾಚಕ
    ಡಾ; ಬರ್ಮ ದೇಶದ ಕಿರುಗತ್ತಿ, ದೊಡ್ಡಚಾಕು.

    dahabeeyah
    ನಾಮವಾಚಕ
    ನೈಲ್‍ದೋಣಿ; ನೈಲ್‍ ನದಿಯಲ್ಲಿ, ಮನೆಯಂತೆ ಇರುವ ಯಾ ಪ್ರಯಾಣಿಕರನ್ನು ಸಾಗಿಸಲು ದೊಡ್ಡದೋಣಿ.

    dahabiah
    ನಾಮವಾಚಕ
    = dahabeeyah.


    logo