logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Dadaist
ನಾಮವಾಚಕ
ಡಾಡಾ ವಾದಿ; ಡಾಡಾ ಚಳುವಳಿಯಲ್ಲಿ ನಂಬಿಕೆಯಿಟ್ಟವನು.

daddy
ನಾಮವಾಚಕ
(ಆಡುಮಾತು)
  • (ಮುಖ್ಯವಾಗಿ ಸಂಬೋಧನೆಯಲ್ಲಿ) ಅಪ್ಪ; ಅಯ್ಯ; ತಂದೆ.
  • ಹಿರಿಯ; ಮುಖಂಡ; ಪ್ರಮುಖ; ಪ್ರಧಾನ; ಬಹಳ ಹಿರಿಯನಾದ ಯಾ ಅತ್ಯಂತ ಮುಖ್ಯವಾದ ವ್ಯಕ್ತಿ ಯಾ ವಸ್ತು.
  • ವ್ಯಕ್ತಿ; ಮನುಷ್ಯ; ಆಸಾಮಿ.

  • daddy-longlegs
    ನಾಮವಾಚಕ
  • ಉದ್ದಗಾಲಿನ ಜೇಡ, ಸೊಳ್ಳೆ, ನೊಣ, ಮೊದಲಾದವುಗಳ ಜನಪ್ರಿಯ ಹೆಸರು.
  • (ಅಮೆರಿಕನ್‍ ಪ್ರಯೋಗ) = harvestman.

  • dado
    ನಾಮವಾಚಕ
  • (ವಾಸ್ತುಶಿಲ್ಪ) ನಡುದಿಂಡು; ಸುಣ್ಣಪಾದದ ಅಡಿಗೂ ಕಾರ್ನೀಸಿಗೂ ನಡುವಣ ಘನಾಕೃತಿಯ ಭಾಗ. Figure: dado 1
  • (ಗೋಡೆಯ) ಮೇಜುಕಟ್ಟು; ಕಾರಣೆಪಟ್ಟಿ; ಹಲಗೆ ಸೇರುವೆಯಿರುವ ಯಾ ಮೇಲಿನ ಗೋಡೆಯದಕ್ಕಿಂತ ಬೇರೆ ಬಣ್ಣ ಹಾಕಿ ಬೇರ್ಪಡಿಸಿರುವ ಗೋಡೆಯ ಅಡಿಭಾಗ ಯಾ ಗೋಡೆಯ ತಳದಿಂದ ಸ್ವಲ್ಪ ಎತ್ತರದವರೆಗಿನ ಭಾಗ; ಸ್ಕರ್ಟಿಂಗು.

  • dado
    ಸಕರ್ಮಕ ಕ್ರಿಯಾಪದ
  • ನಡುದಿಂಡು ಮಾಡು.
  • ಮೇಜುಕಟ್ಟು ಮಾಡು; ಕಾರಣೆಪಟ್ಟಿ ಕಟ್ಟು.
  • (ಹಲಗೆ ಮೊದಲಾದವುಗಳಲ್ಲಿ) ಆಯಾಕಾರದ ಗುಳಿ – ಮಾಡು, ಕೊರೆ.

  • dadoed
    ಸಕರ್ಮಕ ಕ್ರಿಯಾಪದ
  • ನಡುದಿಂಡುಳ್ಳ.
  • ಮೇಜುಕಟ್ಟಿರುವ; ಕಾರಣೆಪಟ್ಟಿಯುಳ್ಳ.

  • daedal
    ಗುಣವಾಚಕ
  • (ಸಾಹಿತ್ಯಕ) ಚತುರ; ಕುಶಲ; ನಿಪುಣ.
  • ಕಲ್ಪನಾ ಚತುರ.
  • (ಶಿಲ್ಪ, ಕಲೆ, ದಾರಿ, ಮೊದಲಾದವುಗಳ ವಿಷಯದಲ್ಲಿ) ತೊಡಕಾದ; ಜಟಿಲ; ಸಂಕೀರ್ಣ.
  • ಗೂಢ; ರಹಸ್ಯಮಯ.
  • (ಭೂಮಿ ಮೊದಲಾದವುಗಳ ವಿಷಯದಲ್ಲಿ)ವಿಚಿತ್ರ ರಚನೆಯ; ಪ್ರಾಕೃತಿಯ ಅದ್ಭುತಗಳಿಂದ ಕೂಡಿದ.

  • Daedalean
    ಗುಣವಾಚಕ
  • ಡಯಿಡಲಸ್‍ ಎಂಬ ಗ್ರೀಕ್‍ ಕುಶಲಕರ್ಮಿಯ ಯಾ ಅವನ ರೀತಿಯ.
  • (ವಾಸ್ತುಶಿಲ್ಪ ಮೊದಲಾದವುಗಳ ವಿಷಯದಲ್ಲಿ) ಹೆಣೆದುಕೊಂಡಿರುವ; ತೊಡಕಾದ; ಜಟಿಲ(ವಾದ).
  • (ದಾರಿ ಮೊದಲಾದವುಗಳ ವಿಷಯದಲ್ಲಿ) ಸುತ್ತುಬಳಸಿನ; ತೊಳಸುಬಳಸಿನ.

  • Daedalian
    ಗುಣವಾಚಕ
    = Daedalean.

    daemon
    ನಾಮವಾಚಕ
    = demon(1 & 4).


    logo