logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Dan
ನಾಮವಾಚಕ ನುಡಿಗಟ್ಟು
ಡ್ಯಾನ್‍: from Dan to Beersheba ಸಂಪೂರ್ಣವಾಗಿ; ವ್ಯಾಪಕವಾಗಿ; ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ; ಆಸೇತುಹಿಮಾಚಲ.
  • ಇಸ್ರೇಲಿನ ಹಲವು ಬುಡಕಟ್ಟುಗಳಲ್ಲಿ ಒಂದು.
  • ಪ್ರಾಚೀನ ಪ್ಯಾಲಿಸ್ಟೈನಿನ ಅತ್ಯಂತ ಉತ್ತರಕ್ಕಿರುವ ನಗರ.

  • dan buoy
    ನಾಮವಾಚಕ
    = 1dan.

    dan-layer
    ನಾಮವಾಚಕ
    ಡ್ಯಾನ್‍ ಹಡಗು; ಡ್ಯಾನ್‍ ತೇಲುವೆಯನ್ನು ನೆಡುವ ಯಾ ತೇಲಿ ಬಿಡುವ ಹಡಗು.

    Dan.
    ಸಂಕ್ಷಿಪ್ತ
    (ಬೈಬಲಿನ ಹಳೆ ಒಡಂಬಡಿಕೆಯ) Daniel.

    dance
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
  • ಕುಣಿ; ನರ್ತಿಸು; ನರ್ತನ ಮಾಡು; ನಾಟ್ಯಮಾಡು: she danced the title role in the ballet ಬ್ಯಾಲೆಯಲ್ಲಿ ಆಕೆ ಪ್ರಧಾನ ಪಾತ್ರ ನರ್ತಿಸಿದಳು.
  • ಕುಣಿಸು; ಕುಣಿಯಿಸು; ನರ್ತನ ಮಾಡಿಸು; ನಾಟ್ಯವಾಡಿಸು; ನರ್ತನ ಮಾಡುವಂತೆ ಮಾಡು.
  • ಕುಣಿಸು; ಕುಣಿಯಿಸು; ಆಡಿಸು; ಮೇಲಕ್ಕೂ ಕೆಳಕ್ಕೂ ತೂಗಾಡಿಸು: he danced the baby on his knee ಅವನು ಮಂಡಿಯ ಮೇಲೆ ಮಗುವನ್ನು ಕುಣಿಸಿದ.

  • dance
    ನಾಮವಾಚಕ ಪದಗುಚ್ಛ ನುಡಿಗಟ್ಟು
    St. vitus’s dance ಕಂಪವಾತ; ಕುಣಿಬೇನೆ; ಅದುರುವಾಯು; ಮಕ್ಕಳಿಗೆ ಬರುವ ಒಂದು ಬಗೆಯ ಸೆಳವು. lead (person) a dance
  • ಕುಣಿಯುವ ಚಲನೆ; ನರ್ತನ.
  • ತಾಪೆ; ಕುಣಿತ; ನಾಟ್ಯ; ನೃತ್ಯ; ನರ್ತನ.
  • ನರ್ತನದ ಒಂದು – ಅವರ್ತ, ಸುತ್ತು, ವರಿಸೆ.
  • ನೃತ್ಯ ಸಂಗೀತ; ನಾಟ್ಯಸಂಗೀತ; ನರ್ತನಕ್ಕೆ ಅಳವಡಿಸಿರುವ ಗೀತ, ಸಂಗೀತ.
  • ನರ್ತಕ ತಂಡ; ನೃತ್ಯತಂಡ; ನಾಟ್ಯವೃಂದ.

  • Dance of Death
    ನಾಮವಾಚಕ
    ಸಾವಿನ ಕುಣಿತ; ಮೃತ್ಯುನೃತ್ಯ; ಮೃತ್ಯು ನರ್ತನ; ಅಸ್ಥಿಪಂಜರ ರೂಪದಲ್ಲಿರುವ ಮೃತ್ಯು ಇತರ ಅಸ್ಥಿಪಂಜರಗಳನ್ನು ಯಾ ವ್ಯಕ್ತಿಗಳನ್ನು ಗೋರಿಗೆ ಯಾ ಸ್ಮಶಾನಕ್ಕೆ ಕರೆದೊಯ್ಯುತ್ತಿರುವಂತೆ ತೋರಿಸುವ ಮಧ್ಯಯುಗದ ನೃತ್ಯ ಯಾ ಚಿತ್ರ.

    dance-drama
    ನಾಮವಾಚಕ
    ನೃತ್ಯನಾಟಕ; ನೃತ್ಯರೂಪಕ.

    dance-hall
    ನಾಮವಾಚಕ
    ನೃತ್ಯಮಂದಿರ; ನರ್ತನಕ್ಕೆ ಯೋಗ್ಯವಾದ ಸಾರ್ವಜನಿಕ ಸಭಾಂಗಣ.

    dancer
    ನಾಮವಾಚಕ ಪದಗುಚ್ಛ
    ನರ್ತಕ ಯಾ ನರ್ತಕಿ; ನೃತ್ಯಗಾರ ಯಾ ನೃತ್ಯಗಾರ್ತಿ. merry dancers (ಬ್ರಿಟಿಷ್‍ ಪ್ರಯೋಗ) = aurora borealis.


    logo