logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dampness
ನಾಮವಾಚಕ
ತೇವವಾಗಿರುವಿಕೆ; ಒದ್ದೆಯಾಗಿರುವಿಕೆ; ಆರ್ದತೆ.

damsel
ನಾಮವಾಚಕ ಪದಗುಚ್ಛ
(ಪ್ರಾಚೀನ ಪ್ರಯೋಗ ಯಾ ಸಾಹಿತ್ಯ) ಕುಮಾರಿ; ಕನ್ಯೆ; ಮದುವೆಯಿಲ್ಲದ ಹುಡುಗಿ; ಅವಿವಾಹಿತ ತರುಣಿ. celestial damsel ಅಪ್ಸರಸ್ತ್ರೀ; ಅಪ್ಸರೆ.

damselfish
ನಾಮವಾಚಕ
ಡ್ಯಾಮ್ಸಲ್‍ ಮೀನು; ಕನ್ಯೆಮೀನು; ಹವಳದ ದಿಬ್ಬಗಳಲ್ಲಿನ, ಪ್ರಕಾಶವಾದ ಬಣ್ಣಗಳುಳ್ಳ ಚಿಕ್ಕ ಮೀನು.

damselfly
ನಾಮವಾಚಕ
ಡ್ಯಾಮ್ಸಲ್‍ ನೊಣ; ಕನ್ನೆನೊಣ; ಕೊಡತಿ ಹುಳುವಿನಂಥ, ಕುಳಿತಿರುವಾಗ ರೆಕ್ಕೆಗಳು ಮೈಮೇಲೆ ಮಡಿಚಿಕೊಂಡಿರುವ, ಓಡೊನ್ಯಾಟ ಗಣದ ಒಂದು ಕೀಟ.

damson
ನಾಮವಾಚಕ
  • ಡ್ಯಾಮ್ಸನ್‍; ಕಡು ಕೆನ್ನೀಲಿ ಬಣ್ಣದ ಚಿಕ್ಕ ಪ್ಲಮ್‍ (ಹಣ್ಣು)
  • ಆ ಹಣ್ಣನ್ನು ಬಿಡುವ, ಪ್ರೂನಸ್‍ ಇನ್ಸಿಟಿಷಿಯ ಕುಲಕ್ಕೆ ಸೇರಿದ ಮರ.

  • damson
    ಗುಣವಾಚಕ
  • ಡ್ಯಾಮ್ಸನ್‍ ಹಣ್ಣಿನಂಥ.
  • ಕಡು ಕೆನ್ನೀಲಿ ಬಣ್ಣದ.

  • damson cheese
    ನಾಮವಾಚಕ
    ಡ್ಯಾಮ್ಸನ್‍ ಹಣ್ಣಿನ ಮೊರಬ್ಬ.

    damson plum
    ನಾಮವಾಚಕ
    ಡ್ಯಾಮ್ಸನ್‍ ಪ್ಲಮ್‍ (ಹಣ್ಣು); ಡ್ಯಾಂಸನ್‍ ಹಣ್ಣನ್ನು ಹೋಲುವ ದೊಡ್ಡ ಪ್ಲಮ್‍.

    dan
    ನಾಮವಾಚಕ
    ಡ್ಯಾನ್‍ (ತೇಲುವೆ):
  • ಪುಟ್ಟತೇಲುವೆ; ಆಳವಾದ ಕಡಲುಗಳಲ್ಲಿ ಮೀನುಗಾರರ ಗುರುತಿಗಾಗಿ ತೇಲಿಬಿಟ್ಟಿರುವ ಸಣ್ಣ ತೇಲುಬುರುಡೆ.
  • ಸಮುದ್ರದಲ್ಲಿ ಹೂಳಿದ್ದ ಸಿಡಿಮದ್ದನ್ನು ತೆಗೆದುಹಾಕಿರುವ ಜಾಗದ ಸರಹದ್ದುಗಳನ್ನು ಗುರುತಿಸಲು ಉದ್ದನೆಯ ಕೋಲಿಗೆ ಸಿಕ್ಕಿಸಿರುವ ತಗಡುಡಬ್ಬಿ.

  • dan
    ನಾಮವಾಚಕ
    ಡ್ಯಾನ್‍:
  • ಜೂಡೋ ಮೊದಲಾದವುಗಳಲ್ಲಿ ಪ್ರವೀಣನಾದವನಿಗೆ ಕೊಡುವ ಪದವಿ.
  • ಈ ಪದವಿಯನ್ನು ಪಡೆದಿರುವವನು.


  • logo