logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

damn
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
(ಅಸಮಾಧಾನ, ಜುಗುಪ್ಸೆ, ಆಶ್ಚರ್ಯಗಳನ್ನು ಸೂಚಿಸಲು ಸಾಮಾನ್ಯವಾಗಿ ಭಾವಸೂಚಕ ಅವ್ಯಯವಾಗಿ ಬಳಸುವ ಪದ) ಹಾಳಾಗ!
  • (ವ್ಯಕ್ತಿ ಯಾ ವಸ್ತುವನ್ನು) ಹಾಳುಗೆಡೆ; (ವ್ಯಕ್ತಿ ಯಾ ವಸ್ತುವಿಗೆ) ಕಳಂಕ ಹಚ್ಚು; ತಲೆಯೆತ್ತದಂತೆ ತಪ್ಪು ಹೊರಿಸು.
  • ನರಕಕ್ಕೆ ನೂಕು; ಶಪಿಸು.
  • (ಪ್ರೇಕ್ಷಕರ ವಿಷಯದಲ್ಲಿ) (ನಾಟಕವನ್ನು) ಅನಾದರದಿಂದ ಕಾಣು; ಪುನಃ ಆಡದಂತೆ ಮಾಡು.
  • (ದೋಷವನ್ನು ಬಹಿರಂಗವಾಗಿ ಹೇಳಿ) ಖಂಡಿಸು; ತೆಗಳು; ನಿಂದಿಸು; ದೂಷಿಸು; ತಪ್ಪು ಹೊರಿಸು; ದೋಷಾರೋಪಣೆ ಮಾಡು: the book was damned by the critics ವಿಮರ್ಶಕರು ಪುಸ್ತಕವನ್ನು ಖಂಡಿಸಿದರು.
  • ಹಾನಿ ತರು; ನಾಶ ತರು; ಕಳಂಕ, ಭಂಗ – ತರು: a democracy is damned when its leaders are slaves ನಾಯಕರು ದಾಸರಾಗಿದ್ದರೆ ಆ ಗಣತಂತ್ರ ನಾಶವಾಗುತ್ತದೆ.
  • (ಆಡುಮಾತು) (ಕೋಪ, ಕಿರಿಕಿರಿ, ಮೊದಲಾದವನ್ನು ಸೂಚಿಸುವಾಗ) ಶಪಿಸು; ‘ಹಾಳಾಗು’ ಎನ್ನು:damn your eyes ನಿನ್ನ ಕಣ್ಣು ಇಂಗಿ ಹೋಗ.

  • damn
    ನಾಮವಾಚಕ
  • ಶಾಪ.
  • ಅತ್ಯಲ್ಪ; ಲವ; ಲೇಶ; ಬಹಳ ಸ್ವಲ್ಪ; ಒಂದಿಷ್ಟು; ರವಷ್ಟು: don’t care a damn ಏನೂ ಬೆಲೆಯಿಲ್ಲ.

  • damn
    ಗುಣವಾಚಕ
    (ಆಡುಮಾತು) = 1damned(2).

    damn
    ಕ್ರಿಯಾವಿಶೇಷಣ
    (ಆಡುಮಾತು) = 2damned.

    damnable
    ಗುಣವಾಚಕ
  • ನರಕಕ್ಕೆ – ಯೋಗ್ಯವಾದ, ಈಡಾದ.
  • ನಿಂದಾರ್ಹ; ದಂಡಾರ್ಹ; ಶಿಕ್ಷಾರ್ಹ.
  • ಹಾಳಾದ; ಅನಿಷ್ಟ; ದರಿದ್ರ.
  • ಅಸಹ್ಯ ಹುಟ್ಟಿಸುವ; ಕಿರಿಕಿರಿ ಉಂಟುಮಾಡುವ.

  • damnably
    ಕ್ರಿಯಾವಿಶೇಷಣ
  • ನಾಶವಾಗುವಂತೆ; ಹಾಳಾಗುವಂತೆ.
  • ಜುಗುಪ್ಸೆ, ಅಸಹ್ಯ – ಹುಟ್ಟಿಸುವ ರೀತಿಯಲ್ಲಿ.

  • damnation
    ನಾಮವಾಚಕ
  • (ನಾಟಕ ಮೊದಲಾದವುಗಳ) ದೊಷಣೆ; ಖಂಡನೆ; ನಿಂದೆ.
  • ಶಾಶ್ವತನರಕಕ್ಕೆ ತಳ್ಳಿಬಿಡುವುದು; ನಿತ್ಯನಾರಕಿಯ ಸ್ಥಿತಿಗೆ ಗುರಿಪಡಿಸುವುದು.
  • ಶಾಶ್ವತ ನರಕಶಿಕ್ಷೆ; ನಿತ್ಯನರಕವಾಸ.

  • damnation
    ಭಾವಸೂಚಕ ಅವ್ಯಯ
    (ವ್ಯಕ್ತಿಯು ವಸ್ತುವನ್ನು ಕುರಿತು ಹೇಳುವ ಪದ) ನಾಶವಾಗಿ ಹೋಗಲಿ! ಹಾಳಾಗ! ನರಕಕ್ಕೆ ಬೀಳ!

    damnatory
    ಗುಣವಾಚಕ
  • ನಿಂದಾತ್ಮಕ; ಖಂಡಾನಾತ್ಮಕ.
  • ಭಂಗ ತರುವ; ನಾಶ ತರುವ; ಹಾಳುಮಾಡುವ; ವಿನಾಶಕ.
  • (ದೇವತಾಶಾಸ್ತ್ರ) ಶಪಿಸುವ; ಶಾಪಯುಕ್ತ; ನರಕಕ್ಕೆ ತಳ್ಳುವ.

  • damned
    ಗುಣವಾಚಕ ಪದಗುಚ್ಛ ನುಡಿಗಟ್ಟು
    the damned ನರಕವಾಸಿಗಳು; ನಾರಕಿಗಳು; ಪಾಪಾತ್ಮರು. do one’s damnedest ಕೈಲಾದಷ್ಟೂ ಮಾಡು; ತನ್ನ ಕೈಲಾಗುವಷ್ಟನ್ನೂ ಮಾಡು.
  • ಶಪ್ತ; ಶಾಪಗ್ರಸ್ತ; ನಾರಕ; ಪಾಪಿಷ್ಠ; ಮುಖ್ಯವಾಗಿ ನಿತ್ಯನರಕಶಿಕ್ಷೆಗೆ ಗುರಿಯಾದ: damned souls ನಾರಕಿಗಳು; ಶಪ್ತಾತ್ಮರು.
  • ಹೇಸಿಕೆಯ; ಜುಗುಪ್ಸೆ ಹುಟ್ಟಿಸುವ; ಅಸಹ್ಯದ; ಹಾಳು; ದರಿದ್ರ; ಅನಿಷ್ಟದ: damned dog ದರಿದ್ರನಾಯಿ.
  • (ಸಾಮಾನ್ಯವಾಗಿ ಒತ್ತುಕೊಡುವಾಗ ಬಳಸುವ) ಸಂಪೂರ್ಣ; ಶುದ್ಧ; ತೀರ; ಅತಿ; ಬಹಳ: damned nonsense ತೀರ ಅಸಂಬದ್ಧ. damned fool ಅತಿದಡ್ಡ.
  • ಕ್ರೂರ; ಸಹಿಸಲಾಗದ.


  • logo