logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

damaskeen
ಸಕರ್ಮಕ ಕ್ರಿಯಾಪದ
= damascene.

dame
ನಾಮವಾಚಕ
  • (ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ ಹಾಸ್ಯ ಪ್ರಯೋಗ ಯಾ ಅಮೆರಿಕನ್‍ ಪ್ರಯೋಗ, ಅಶಿಷ್ಟ) ಹೆಂಗಸು; ಮಹಿಳೆ; ವನಿತೆ.
  • (ಪ್ರಾಚೀನ ಪ್ರಯೋಗ) ಗೃಹಿಣಿ; ಮನೆಯ ಯಜಮಾನಿ; ಮನೆವಾರ್ತೆ ನಡೆಸುವವಳು.
  • ಡೇಮ್‍; ಅಧುನಿಕ ಮೂಕಾಭಿನಯದಲ್ಲಿ ಮಧ್ಯ ವಯಸ್ಸಿನ ಹೆಂಗಸಿನ ಹಾಸ್ಯಪಾತ್ರ ಮಾಡುವ ಗಂಡಸು.
  • ಶ್ರೀಮತಿ; ಘನವಂತೆ; ಆರ್ಯೆ; ವರಿಷ್ಠವರ್ಗದ ಮಹಿಳೆಯ ಯಾ ಸ್ತ್ರೀರೂಪದಲ್ಲಿ ವ್ಯಕ್ತೀಕರಿಸಿದ ವಸ್ತುವಿನ ಬಿರುದು: Dame Nature ಪ್ರಕೃತಿ ಮಾತೆ.
  • ನಿರ್ವಾಹಕಿ; ಈಟನ್ನಿನ – ಅನ್ನ ವಸತಿ ಗೃಹದ ಆಡಳಿತಾಧಿಕಾರಣಿ ಯಾ ಯಜಮಾನಿ.
  • ಸರ್‍ ಎಂಬುದರ ಸ್ತ್ರೀಲಿಂಗವಾಚಕ.
  • ‘ಆರ್ಡರ್‍ ಆಹ್‍ ಬ್ರಿಟಿಷ್‍ ಎಂಪೈರ್‍’ ಎಂಬ ಗೌರವಾನ್ವಿತ ಶ್ರೇಣಿಗೆ ಸೇರಿದ ಮಹಿಳೆ.
  • ಪ್ರಿಮ್‍ ರೋಸ್‍ ಲೀಗಿನ ಸದಸ್ಯೆಯ ಬಿರುದು.
  • ಮಹಿಳಾ ನೈಟ್‍ ಕಮಾಂಡರ್‍ ಯಾ ಗ್ರ್ಯಾಂಡ್‍ ಕ್ರಾಸ್‍ ಇನ್‍ ಆರ್ಡರ್‍ ಆಹ್‍ ದಿ ಬಾತ್‍, ಆರ್ಡರ್‍ ಆಹ್‍ ದಿ ಬ್ರಿಟಿಷ್‍ ಎಂಪೈರ್‍, ರಾಯಲ್‍ ವಿಕ್ಟೋರಿಯನ್‍ ಆರ್ಡರ್‍, ಯಾ ಆರ್ಡರ್‍ ಆಹ್‍ ಸೇಂಟ್‍ ಮೈಕೇಲ್‍ ಮತ್ತು ಸೇಂಟ್‍ ಜಾರ್ಜ್‍ ಬಿರುದುಗಳನ್ನು ಹೊಂದಿರುವ ಮಹಿಳೆ ಯಾ ಈ ಬಿರುದುಗಳು.
  • (ನ್ಯಾಯಶಾಸ್ತ್ರ) (ಬ್ರಿಟಿಷ್‍ ಪ್ರಯೋಗ) ನೈಟ್‍ ಯಾ ಬಾರೊನೆಟ್‍ ಪದವಿಯವನ ಹೆಂಡತಿಯ ಹೆಸರಿನ ಹಿಂದೆ ಸೇರಿಸುವ ಬಿರುದು.

  • Dame Fortune
    ನಾಮವಾಚಕ
    ಭಾಗ್ಯದೇವತೆ; ಅದೃಷ್ಟ ದೇವತೆ; ಭಾಗ್ಯಮಾತೆ.

    Dame Nature
    ನಾಮವಾಚಕ
    ಪ್ರಕೃತಿಮಾತೆ; ನಿಸರ್ಗದೇವತೆ.

    dame's violet
    ನಾಮವಾಚಕ
    ಸಂಜೆಯವರೆಗೂ ವಾಸನೆಯಿರದೆ ಆಮೇಲೆ ಸುಗಂಧ ಬೀರುವ, ನಸುನೇರಳೆ ಯಾ ನಸು ಊದಾ ಬಣ್ಣದ ಹೂಗಳನ್ನು ಬಿಡುವ, ಶಿಲುಬೆಯಾಕಾರದ ವಿನ್ಯಾಸವಿರುವ ಗಿಡ.

    dame-school
    ನಾಮವಾಚಕ
    (ಚರಿತ್ರೆ) ಅಜ್ಜಿಶಾಲೆ; ಮಹಿಳಾಶಾಲೆ; ಹಿಂದೆ ಇಂಗ್ಲೆಂಡಿನಲ್ಲಿ ಹಿರಿಯ ಹೆಂಗಸರು ನಡೆಸುತ್ತಿದ್ದ ಪ್ರಾಥಮಿಕ ಪಾಠಶಾಲೆ.

    damfool
    ಗುಣವಾಚಕ
    (ಆಡುಮಾತು) ದಡ್ಡ; ಮೂಢ; ಮೂರ್ಖ; ಮಂದ ಬುದ್ಧಿಯ.

    damfool
    ನಾಮವಾಚಕ
    (ಆಡುಮಾತು) ದಡ್ಡ; ಮೂಢ; ಪೆದ್ದ; ಮೂರ್ಖ; ಮುಠ್ಠಾಳ.

    dammar
    ನಾಮವಾಚಕ
  • ಡ್ಯಾಮರ್‍; ಮುಖ್ಯವಾಗಿ ಅಗತಿಸ್‍ ಯಾ ಶೋರಿಯ ಕುಲಕ್ಕೆ ಸೇರಿದ, ಶಂಕು ವಿನಾಕಾರದ ಕಾಯಿಬಿಡುವ, ನಿತ್ಯಹರಿದ್ವರ್ಣದ ಪೂರ್ವ ಏಷ್ಯಾದ ಮರ.
  • ಮೆರುಗೆಣ್ಣೆಯ (ವಾರ್ನಿಷ್‍) ತಯಾರಿಕೆಯಲ್ಲಿ ಬಳಸುವ ಈ ಮರದ ರಾಳ ಯಾ ಅಂಟು.

  • dammit
    ಭಾವಸೂಚಕ ಅವ್ಯಯ
    = 1damn ನುಡಿಗಟ್ಟು \((2)\).


    logo