logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Dalmatian
ನಾಮವಾಚಕ
ಡ್ಯಾಲ್ಮೇಷನ್‍; ಮಚ್ಚೆನಾಯಿ; ಗಾಡಿಯ ಜತೆಗೆ ಓಡಲು ಇಟ್ಟಿರುವ, ಮೋಟು ಕೂದಲಿನ, ಕಪ್ಪು ಚುಕ್ಕೆಗಳಿರುವ, ಬಿಳಿಯ ಬಣ್ಣದ ದೊಡ್ಡನಾಯಿ.

dalmatic
ನಾಮವಾಚಕ
(ಕೆಲವು ಸಂದರ್ಭಗಳಲ್ಲಿ ಡೀಕನ್ನರು, ಬಿಷಪ್ಪುಗಳು ಮತ್ತು ಕಿರೀಟಧಾರಣ ಕಾಲದಲ್ಲಿ ರಾಜರು, ಸಾಮ್ರಾಟರು ಧರಿಸುವ) ಒಂದು ತೆರನ ಅಗಲ ತೋಳಿನ, ಸೀಳು ಪಕ್ಕದ ದೊಗಳೆ ನಿಲುವಂಗಿ.

Dalton plan
ನಾಮವಾಚಕ
ಡಾಲ್ಟನ್‍ – ಯೋಜನೆ, ಪದ್ಧತಿ; ಸ್ವಶಿಕ್ಷಣ ಪದ್ಧತಿ; ವರ್ಷದ ಪಾಠಕ್ರಮವನ್ನು ಎಲ್ಲ ತಿಂಗಳುಗಳಿಗೂ ಹಂಚಿ ವಿದ್ಯಾರ್ಥಿಗಳೇ ಕೆಲವು ವ್ಯಾಸಂಗ ಗೈಡುಗಳ ನೆರವಿನಿಂದ ಅಭ್ಯಾಸ ಮಾಡುವ ಹೊಣೆಯುಳ್ಳ ಒಂದು ವಿದ್ಯಾಭ್ಯಾಸ ಕ್ರಮ.

Dalton system
ನಾಮವಾಚಕ
= Dalton plan.

Daltonian
ಗುಣವಾಚಕ
  • (ಇಂಗ್ಲಿಷ್‍ ರಸಾಯನಶಾಸ್ತ್ರಜ್ಞ) ಡಾಲ್ಟನ್ನನ ಯಾ ಆತನ ಪರಮಾಣು ವಾದಕ್ಕೆ ಸಂಬಂಧಿಸಿದ.
  • ಬಣ್ಣಗುರುಡಿನ; ವರ್ಣಾಂಧತೆಗೆ ಸಂಬಂಧಿಸಿದ.

  • daltonism
    ನಾಮವಾಚಕ
    (ಕೆಲವುವೇಳೆ Daltonism) (ರೋಗಶಾಸ್ತ್ರ) ಬಣ್ಣಗುರುಡು; ವರ್ಣಾಂಧತೆ; ಮುಖ್ಯವಾಗಿ ಆನುವಂಶಿಕವಾಗಿ ಬರುವ, ಹಸಿರು ಮತ್ತು ಕೆಂಪು ಬಣ್ಣಗಳ ಭೇದವನ್ನು ಗುರುತಿಸಲಾಗದ ವ್ಯಾಧಿ.

    Daltonize
    ಸಕರ್ಮಕ ಕ್ರಿಯಾಪದ
    ಡಾಲ್ಟನ್‍ ವಿದ್ಯಾಭಾಸ ಪದ್ಧತಿಗೆ, ಕ್ರಮಕ್ಕೆ ಪರಿವರ್ತಿಸು.

    dam
    ನಾಮವಾಚಕ
  • (ಜಲಾಶಯ ನಿರ್ಮಿಸಲು ಯಾ ಪ್ರವಾಹ ತಪ್ಪಿಸಲು ಹಾಕುವ) ಅಣೆಕಟ್ಟು; ಕಟ್ಟೆ; ಒಡ್ಡು; ಏರಿ.
  • (ಜೌಗುಪ್ರದೇಶ ಯಾ ನೀರು ನಿಂತಿರುವ ಜಾಗ ಮೊದಲಾದವುಗಳಲ್ಲಿ ಕಲ್ಲು, ಗುಂಡು, ಮರದ ದಿಮ್ಮಿ, ಮೊದಲಾದವುಗಳಿಂದ ಮಾಡಿದ) ಎತ್ತರದ ಹಾದಿ; ಹುದಿಹಾದಿ.
  • (ಹೊಳೆ ಮೊದಲಾದವಲ್ಲಿ ಕರಡಿ ಯಾ ಬೀವರ್‍ ಕಟ್ಟುವ) ತಡೆ; ಒಡ್ಡು.
  • (ಅಮೆರಿಕನ್‍ ಪ್ರಯೋಗ) (ದಂತವೈದ್ಯ) ರಬ್ಬರ್‍ ತಡೆ; ಶಸ್ತ್ರಚಿಕಿತ್ಸೆಯಲ್ಲಿ ಹಲ್ಲಿನ ಹತ್ತಿರ ಲಾಲಾರಸ ಬರದಂತೆ ತಡೆಯಲು ಇಡುವ ರಬ್ಬರ್‍ ಹಾಳೆ ಯಾ ರಟ್ಟು.

  • dam
    ಸಕರ್ಮಕ ಕ್ರಿಯಾಪದ
  • ಏರಿ ಹಾಕು; ಕಟ್ಟೆ ಕಟ್ಟು; ಒಡ್ಡು ಹಾಕು.
  • ಅಣೆಕಟ್ಟು ಕಟ್ಟಿ ನೀರು ನಿಲ್ಲಿಸು, ಕೆರೆ ನಿರ್ಮಿಸು.
  • (ರೂಪಕವಾಗಿ ಸಹ) ಅಡ್ಡಗಟ್ಟು; ತಡೆಹಾಕು; ಅಡ್ಡಿಮಾಡು; ಅಡಚಣೆಗಳನ್ನು ಒಡ್ಡು.

  • dam
    ನಾಮವಾಚಕ ನುಡಿಗಟ್ಟು
    (ಸಾಮಾನ್ಯವಾಗಿ ಪ್ರಾಣಿಯ) ತಾಯಿ. the devil and his dam ದುಷ್ಟಶಕ್ತಿಗಳು; ಪೀಡೆಗಳು.


    logo