logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

background projection
ನಾಮವಾಚಕ
(ಛಾಯಾಚಿತ್ರಣ) ಹಿನ್ನೆಲೆ ಪ್ರಕ್ಷೇಪಣ; ದೂರದರ್ಶನ ಯಾ ಚಲನಚಿತ್ರಗಳ ಸಕ್ರಿಯ ಛಾಯಾಚಿತ್ರಗಳಿಗೆ ಹಿನ್ನೆಲೆಯಾಗಿ ಬಳಸುವ, ಮೊದಲೇ ಹೋಟೋ ತೆಗೆದ ಸ್ತಬ್ಧ ಯಾ ಚಲನಚಿತ್ರಗಳನ್ನು ಅರೆಪಾರದರ್ಶಕ ಪರದೆಯ ಮೇಲೆ ಬಿಡುವುದು.

backhand
ನಾಮವಾಚಕ
  • (ಟೆನಿಸ್‍ ಮೊದಲಾದ ಆಟದಲ್ಲಿ, ಎದುರಾಳಿಯ ದಿಕ್ಕಿನಲ್ಲಿ ಹೊಡೆಯುವ) ಹಿಂಗೈಹೊಡೆತ; ಹೆಡಗೈಯೇಟು. Figure: backhand
  • ಹೆಡಗೈ; ಹಿಂಗೈ.
  • ಎಡಬಾಗು, ಹಿಂಬಾಗು – ಬರವಣಿಗೆ.

  • backhand
    ಗುಣವಾಚಕ
    (ಟೆನಿಸ್‍ ಮೊದಲಾದ ಆಟದಲ್ಲಿ) ಹಿಂಗೈ ಹೊಡೆತದ; ಹಿಂಗೈಯಿಂದ ಹೊಡೆದ.

    backhanded
    ಗುಣವಾಚಕ
  • ಹಿಂಗೈ ಹೊಡೆತದ; ಹಿಂಗೈಯಿಂದ ಹೊಡೆದ.
  • ನೇರವಲ್ಲದ; ಸುತ್ತು ಬಳಸಿನ; ಪರೋಕ್ಷ ಯಾ ಸಂದಿಗ್ಧ: backhanded methods ನೇರವಲ್ಲದ, ಸಂದಿಗ್ಧ ವಿಧಾನಗಳು.

  • backhander
    ನಾಮವಾಚಕ
  • ಹಿಂಗೈಏಟು.
  • ನೇರವಲ್ಲದ ದಾಳಿ; ಪರೋಕ್ಷ ದಾಳಿ.
  • ಹೆಚ್ಚುವರಿ ಗುಟುಕು; ಅದೃಷ್ಟಪಾನ; ಸರದಿತಪ್ಪಿ ಮದ್ಯಪಾತ್ರೆ ಪುನಃ ಬಂದಾಗ ಲಭ್ಯವಾಗುವ ಗುಟುಕು.
  • (ಅಶಿಷ್ಟ) ಲಂಚ.

  • backing
    ನಾಮವಾಚಕ
  • (ಯಾವುದೇ ಬಗೆಯ) ನೆರವು; ಸಹಾಯ; ಬೆಂಬಲ.
  • ಸಹಾಯಕರು; ಬೆಂಬಲಿಗರು.
  • ಬೆನ್ನೂರೆ; ಬೆನ್ನಾಧಾರ; ವಸ್ತುವಿಗೆ ಆಧಾರವಾಗಿ ಯಾ ಅದನ್ನು ರಕ್ಷಿಸಲು ಯಾ ಬಲಪಡಿಸಲು, ವಸ್ತುವಿನ ಬೆನ್ನಿಗಾಗಲೀ ಯಾ ಅದರ ಆಧಾರಕ್ಕಾಗಲೀ ಬಳಸುವ ಪದಾರ್ಥ.
  • (ಸಂಗೀತ) ಹಿಮ್ಮೇಳ; ಪಕ್ಕವಾದ್ಯ.

  • backlash
    ನಾಮವಾಚಕ
  • (ಯಂತ್ರದ ಭಾಗಗಳ ನ್ಯೂನತೆ ಯಾ ಆಕಸ್ಮಿಕ ಒತ್ತಡದಿಂದಾಗುವ ಚಕ್ರ ಮೊದಲಾದವುಗಳ) ಹಿನ್ನುರುಳು; ಹಿಂಬಡಿತ.
  • (ಬಲವಾದ ಯಾ ಹಠಾತ್ತಾಗಿ ಆಗುವ, ಮುಖ್ಯವಾಗಿ ರಾಜಕೀಯ ಯಾ ಸಾಮಾಜಿಕ) ಪ್ರತಿಕ್ರಿಯೆ.
  • (ಮೀನು ಹಿಡಿಯುವಾಗ ಆಗುವ) ಗಾಳದ ದಾರದ – ಗಂಟು, ಸಿಕ್ಕು.
  • (ಸಡಿಲವಾದ ಯಾ ಸವೆದುಹೋದ ಯಂತ್ರಭಾಗಗಳಲ್ಲಿನ) ಅತಿಯಾದ ಚಲನೆ.

  • backlashing
    ನಾಮವಾಚಕ
    = backlash(1,4).

    backless
    ಗುಣವಾಚಕ
    (ಉಡುಪಿನ ವಿಷಯದಲ್ಲಿ) ಬೆನ್ನಿಲ್ಲದ; ಬೆನ್ನಿನ ಕಡೆ (ಬೆನ್ನು ಕಾಣುವಂತೆ) ಕೆಳಗಿನವರೆಗೂ ಕತ್ತರಿಸಿದ.

    backlight
    ನಾಮವಾಚಕ
    ಹಿಂಬೆಳಕು; ವಸ್ತು, ವ್ಯಕ್ತಿ, ದೃಶ್ಯ, ಮೊದಲಾದವುಗಳ ಮೇಲೆ ಹಿಂಭಾಗದಿಂದ ಯಾ ಲಂಬಕೋನದಲ್ಲಿ ಬೀಳುವ ಬೆಳಕು.


    logo