logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

back-down
ನಾಮವಾಚಕ
(ಹೊಣೆ, ನಿಲುವು, ಮೊದಲಾದವುಗಳಿಂದ) ಹಿಂತೆಗೆಯುವುದು; ಹಿಮ್ಮೆಟ್ಟುವುದು.

back-fill
ಸಕರ್ಮಕ ಕ್ರಿಯಾಪದ
(ಭೂಶೋಧನೆಯಲ್ಲಿ ಅಗೆದಿರುವ ಕಂದಕ ಮೊದಲಾದವನ್ನು ಯಾ ತಳಪಾಯ ಗೋಡೆಯ ಸುತ್ತಲಿನ ಹಳ್ಳವನ್ನು ಅದೇ ಮಣ್ಣು ಮೊದಲಾದವುಗಳಿಂದ) ಪುನಃ ಮುಚ್ಚು; ಮತ್ತೆ ತುಂಬು.

back-formation
ನಾಮವಾಚಕ
(ಭಾಷಾಶಾಸ್ತ್ರ)
  • ಹಿಂಪದ ರಚನೆ; ಬಳಕೆಯಲ್ಲಿರುವ ಪದದ ಸಾದೃಶ್ಯಬಲದಿಂದ ಹೊಸ ಪದ ನಿರ್ಮಿಸುವಿಕೆ: typewriter ಇಂದ typewrite, lazy ಇಂದ laze.
  • ಹಿಂಪದ; ಹಿಂಪದ ರಚನೆಯಿಂದ ಹುಟ್ಟಿದ ಪದ.

  • back-pedal
    ಅಕರ್ಮಕ ಕ್ರಿಯಾಪದ
  • ಪೆಡಲನ್ನು ಹಿಂತುಳಿ, ಹಿಂದಕ್ಕೆ ಒತ್ತು.
  • (ರೂಪಕವಾಗಿ) (ಒಂದು ಅಭಿಪ್ರಾಯ, ನಿಲುವು, ಎದುರಾಳಿ, ಮೊದಲಾದವುಗಳಿಂದ) ಹಿಮ್ಮೆಟ್ಟು; ಹಿಂದಕ್ಕೆ ಸರಿ ಯಾ ಬದಲಾಯಿಸು.

  • back-projection
    ನಾಮವಾಚಕ
    = background projection.

    back-room
    ನಾಮವಾಚಕ
    ಹಿಂಕೋಣೆ; ಗುಪ್ತಕೋಣೆ; (ಮುಖ್ಯವಾಗಿ ವೈಜ್ಞಾನಿಕ, ತಾಂತ್ರಿಕ) ಗುಪ್ತ ಸಂಶೋಧನೆ ನಡೆಯುವ ಸ್ಥಳ.

    back-room boys
    ನಾಮವಾಚಕ
    (ಆಡುಮಾತು) ಹಿಂಕೋಣೆ ಹೈದರು; (ಮುಖ್ಯವಾಗಿ ವೈಜ್ಞಾನಿಕ, ತಾಂತ್ರಿಕ) ಗುಪ್ತಸಂಶೋಧಕ ತಂಡ; ಯಾವುದೇ ರಹಸ್ಯವಿಚಾರದಲ್ಲಿ ಪರಿಶೋಧನೆ ಕೈಗೊಂಡಿರುವವರು.

    back-scatter
    ನಾಮವಾಚಕ
    = 1back-scattering.

    back-scattering
    ನಾಮವಾಚಕ
    (ಭೌತವಿಜ್ಞಾನ) ಹಿಂಚದುರುವಿಕೆ; ಪಶ್ಚವಿಕಿರಣ; ಚದುರಿಹೋಗುವ ಯಾ ವಿಕ್ಷೇಪನ ಪ್ರಕ್ರಿಯೆಯಲ್ಲಿ ಬೀಜಕಣಗಳು ಯಾ ವಿಕಿರಣವು 90 ಡಿಗ್ರಿ ಕೋನಕ್ಕಿಂತಲೂ ಹೆಚ್ಚು, ಅಂದರೆ ಹಿಂಭಾಗದ ಕಡೆಗೆ, ಬಾಗುವುದು.

    back-scattering
    ಗುಣವಾಚಕ
    (ವಿಕಿರಣದ ವಿಷಯದಲ್ಲಿ) ಹಿಂಚದುರುವ; ಹಿಮ್ಮುಖವಾಗಿ ಚದುರುವ.


    logo