logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Chestnut Soils
ಚೆಸ್ಟ್ ನಟ್ ಮಣ್ಣುಗಳು; ಕಂದು ಮಣ್ಣುಗಳು. ಜೋನಲ್ ವಲಯದ ಪಂಗಡಕ್ಕೆ ಸೇರಿದ ಈ ಮಣ್ಣು ಕಂದು ಬಣ್ಣದ ಮೇಲ್ಪದರವನ್ನು ಹೊಂದಿದ್ದು, ತಳದಲ್ಲಿ ಸಾಧಾರಣವಾದ ಬಣ್ಣದ ಮಣ್ಣಿನಿಂದ ಕೂಡಿರುತ್ತದೆ.

Chlorophyll
ಪತ್ರಹರಿತ್ತು. ಸಸ್ಯದ ಹಸಿರು ಬಣ್ಣಕ್ಕೆ ಮೂಲಕಾರಣವಾದ ಈ ವಸ್ತು, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಸಹಾಯಕವಾಗುತ್ತದೆ.

Chlorosis
ಹರಿತ್ ರೋಗ. ಅವಶ್ಯವಾದಷ್ಟು ಪೋಷಕ ದೊರೆಯದಿರುವ ಕಾರಣ, ಸಸ್ಯಗಳಲ್ಲಿ ಪತ್ರಹರಿತ್ತು ಅಭಿವೃದ್ಧಿಯಾಗದಿರುವ ಸ್ಥಿತಿ. ಎಲೆಗಳು ಹಳದಿಯಾಗುವ ಸ್ಥಿತಿ.

Clay
ಜೇಡಿ. ಮಣ್ಣಿನ ಅತಿ ಸೂಕ್ಷ್ಮ ಕಣ. ಈ ಕಣಗಳ ವ್ಯಾಸ 0.002 ಮಿ. ಮೀ. ಗಿಂತ ಕಡಿಮೆ ಇದ್ದು, ಈ ವಸ್ತು ಅಸ್ಫಟಿಕ ಗುಣಗಳನ್ನು ಪ್ರದರ್ಶಿಸುತ್ತದೆ.

Clay Loam
ಜೇಡಿಗೋಡು. ಶೇಕಡ 27 ರಿಂದ 40 ರಷ್ಟು ಜೇಡಿ ಮತ್ತು 20 ರಿಂದ 40 ರಷ್ಟು ಮರಳನ್ನುಳ್ಳ ಮಣ್ಣು.

Clay Minerals
ಜೇಡಿ ಖನಿಜಗಳು. ಇವು ಹೈಡ್ರಸ್ ಅಲ್ಯೂಮಿನಿಯಂ ಸಿಲಿಕೇಟ್ ಗಳಾಗಿರುತ್ತವೆ. ಸಿಲಿಕಾ ಮತ್ತು ಅಲ್ಯೂಮಿನಗಳು ಇರುವಿಕೆಯ ಆಧಾರದ ಮೇಲೆ, ಜೇಡಿ ಖನಿಜಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ; ಮಾಂಟ್ ಮೊರಿಲ್ಲೊನೈಟ್, ಕೆಯೋಲಿನೈಟ್, ಇಲ್ಲೈಟ್ ಮತ್ತು ವರ್ಮಿಕ್ಕು ಲೈಟ್.

Clay Pan
ಜೇಡಿ ಪದರ. ಗಟ್ಟಿಯಾದ, ಬಿಕ್ಕಟ್ಟಾದ ಮತ್ತು ಸಾಧಾರಣ ಅವ್ಯಾಪ್ಯತೆಯುಳ್ಳ ಜೇಡಿ ಶೇಖರಣೆಯ ಪದರ. ಇದು ಸಾಧಾರಣವಾಗಿ ಉಳುಮೆಯ ಆಳಕ್ಕಿಂತ ಕೆಳಗಡೆ ಕಂಡು ಬರುತ್ತದೆ.

Co-efficient of Viscosity
ಸಿರುಗ್ದತ್ವದ ಗುಣಕ. ದ್ರವದ ಮಾಧ್ಯಮದಲ್ಲಿ ಒಂದು ಸೆಂಟಿಮೀಟರ್ ಅಂತರವಿರುವ ಎರಡು ಸಮಾನಾಂತರ ಸಮತಲಗಳ ಮಧ್ಯೆ ವೇಗ ವ್ಯತ್ಯಾಸದ ಎಕಮಾನತೆಯನ್ನುಳಿಸಿಕೊಂಡು ಬರಲು ಏಕ ಮಾನ ಕ್ಷೇತ್ರಕ್ಕೆ ಬೇಕಾಗುವ ಬಲ.

Co-efficient of Compressibility
ಕುಗ್ಗುವಿಕೆಯ ಗುಣಕ. ಒಂದು ವಸ್ತುವಿನ ಮೇಲೆ ಒಂದು ನಿರ್ದಿಷ್ಟ ಶಕ್ತಿಯ ಒತ್ತಡವನ್ನು ಪ್ರಯೋಗಿಸಿದಾಗ, ಆ ವಸ್ತುವಿನ ಸ್ಥಿತಿಯಲ್ಲಿ ಉಂಟಾಗುವ ಗಾತ್ರ ಬದಲಾವಣೆ.

Co-efficient of Thermal Conductivity
ಉಷ್ಣವಾಹಕತ್ವದ ಗುಣಕ. ಒಂದು ಸೆಕೆಂಡಿಗೆ ಏಕಮಾನ ಪ್ರಮಾಣದಲ್ಲಿ ಏಕಮಾನ ಖಂಡ ವಿಸ್ತಾರದ ಮೂಲಕ ಸಮಸ್ಥಿತಿಯಲ್ಲಿ ಹರಿಯುವ ಉಷ್ಣಕ್ಕೆ, ವಸ್ತುವಿನ ಉಷ್ಣವಾಹಕತ್ವದ ಗುಣಕವೆಂದು ಹೆಸರು.


logo