logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Boiling Point
ಕುದಿಯುವ ಬಿಂದು. ದ್ರಾವಣದ ಬಾಷ್ಪ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗಿರುವ ಉಷ್ಣತೆ.

Boyle’s Law
ಬಾಯಲ್ ನ ನಿಯಮ. ಉಷ್ಣವು ನಿಯತವಾಗಿದ್ದಾಗ, ಒಂದು ನಿರ್ದಿಷ್ಟ ಜಡತ್ವದ ಅನಿಲದ ಗಾತ್ರವು ಅದರ ಒತ್ತಡಕ್ಕೆ ವಿಲೋಮಾನುಪಾತವಾಗಿರುತ್ತದೆ. ಸೂತ್ರರೂಪದಲ್ಲಿ ಈ ಕೆಳಗಿನಂತೆ ಹೇಳಬಹುದು. V α 1/p V = ನಿರ್ದಿಷ್ಟ ಜಡತ್ವ ಅನಿಲದ ಗಾತ್ರ. P = ಒತ್ತಡ.

Bog Soil
ಬಾಗ್ ಮಣ್ಣು ; ಕೊಳಚೆ ಮಣ್ಣು. ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು ಮೇಲ್ಭಾಗದಲ್ಲಿ ಕಸ ಅಥವಾ ದರಗು ಮಣ್ಣನ್ನು ಹೊಂದಿದ್ದು, ಕೆಳಭಾಗದಲ್ಲಿ ದರಗು ಮಣ್ಣಿನಿಂದ ಕೂಡಿರುತ್ತದೆ. ಶೀತವಲಯಗಳಲ್ಲಿ, ಜೌಗು ಅಥವಾ ಕೊಳಚೆ ಪ್ರದೇಶಗಳಲ್ಲಿ, ಈ ಮಣ್ಣು ಹೆಚ್ಚಾಗಿ ಕಂಡು ಬರುತ್ತದೆ.

Bone Meal
ಮೂಳೆ ಪುಡಿ.

Bone Meal, Raw
ಕಚ್ಚಾ ಮೂಳೆ ಪುಡಿ. ಕಚ್ಚಾ ಮೂಳೆಗಳನ್ನು ಚೆನ್ನಾಗಿ ಪುಡಿಮಾಡಿ ತಯಾರಿಸಿದ ಗೊಬ್ಬರ.

Bone Meal, Steamed
ಹಬೆ (ಉಗಿ) ಗೊಳಿಸಿದ ಮೂಳೆಪುಡಿ. ಒತ್ತಡ ತುಂಬಿದ ಹಬೆ (ಉಗಿ)ಯಲ್ಲಿ ಸಂಸ್ಕರಿಸಿದ ಮೂಳೆಯನ್ನು ಪುಡಿ ಮಾಡುವುದರಿಂದ ದೊರೆಯುವ ಗೊಬ್ಬರ.

Broad Base Terrace
ವಿಶಾಲತಳಜಗತಿಭೂಮಿ, ಮಣ್ಣು ಕೊಚ್ಚಣೆಯನ್ನು ತಡೆಯಲು ಇಳಿಜಾರಿಗೆ ಅಡ್ಡಲಾಗಿ ಎತ್ತರ ಸ್ವಲ್ಪವೇ ಇದ್ದು ಅಗಲ ಹೆಚ್ಚಿರುವ ಜಗತಿ ಭೂಮಿ.

Brown Soils
ಕಂದುಮಣ್ಣುಗಳು. ಇವುಗಳು ಮೇಲ್ಭಾಗದಲ್ಲಿ ಕಂದುಮಣ್ಣಿನ ತೆಳುವಾದ ಪದರವನ್ನು ಹೊಂದಿದ್ದು, ತಳದಲ್ಲಿ ಕಾರ್ಬೊನೇಟ್ ಶೇಖರವಾಗಿರುವ ಪದರವನ್ನುಳ್ಳದ್ದಾಗಿರುತ್ತವೆ.

Brown Forest Soils
ಕಾಡಿನ ಕಂದುಮಣ್ಣುಗಳು. ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಕಂದು ಬಣ್ಣದ ಮೇಲ್ಮಣ್ಣನ್ನು ಹೊಂದಿದ್ದು, ಹೇರಳವಾಗಿ ಹ್ಯೂಮಸ್ ನಿಂದ ಕೂಡಿರುತ್ತದೆ. ಈ ಮಣ್ಣು ಸ್ವಲ್ಪ ಹುಳಿಯಾಗಿದ್ದು, ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಪ್ರಮಾಣ ಕಡಿಮೆ ಇರುತ್ತದೆ.

Buffer Capacity
ಕಾಪುತಡೆಸಾಮರ್ಥ್ಯ. ಹುಳಿ ಅಥವಾ ಕ್ಷಾರ ಹೆಚ್ಚುವಿಕೆಗೆ ಪ್ರತಿಯಾಗಿ ತೋರುವ, ಕಾಪುತಡೆ ಕ್ರಿಯೆಯ ಸಾಮರ್ಥ್ಯ.


logo