(ತಂ) ಭೂಮಿಯೊಳಗೆ ಗಣಿಯಲ್ಲಿ ಅದಿರನ್ನು ಶೇಖರಿಸಿ ಇಡಲು ಬಳಸುವ ಉಕ್ಕಿನ ಅಥವಾ ಕಾಂಕ್ರೀಟ್‌ನ ತೊಟ್ಟಿ ಯಿಂದ ಕೂಡಿದ ವ್ಯವಸ್ಥೆ. ಇದರಿಂದ ಅದಿರಿನ ವರ್ಗಾವಣೆಯಲ್ಲಿ ಕಾಲ ಮತ್ತು ಖರ್ಚಿನ ಅಪವ್ಯಯ ಕಡಿಮೆಯಾಗುತ್ತದೆ
ore bin
ಅದಿರು ಜನನ
(ಭೂವಿ) ನಿಸರ್ಗದಲ್ಲಿ ದೊರೆಯುವ ಉಪಯುಕ್ತ ಖನಿಜಗಳ ಸಂಗ್ರಹಣವೇ ಅದಿರು ನಿಕ್ಷೇಪಗಳು. ದೊರೆಯುವ ರೀತಿ ಅನುಸರಿಸಿ ಇವನ್ನು ಸಹಜನ್ಯ (ಸಿಂಜೆನಿಟಿಕ್) ಮತ್ತು ಅಧಿಜನ್ಯ (ಎಪಿಜೆನಿಟಿಕ್) ಎಂದು ವರ್ಗೀಕರಿಸುತ್ತಾರೆ. ಸಹಜನ್ಯ ಅದಿರುಗಳು ತಾವು ಹುದುಗಿರುವ ಶಿಲೆಗಳೊಡನೆ ಏಕಕಾಲದಲ್ಲಿ ಜನಿಸಿದವು. ಮಾತೃಶಿಲಾದ್ರವದಿಂದಾದವು. ಅಧಿಜನ್ಯ ಅದಿರುಗಳು ಕಾವು, ನೀರು ಶಿಥಿಲೀಕರಣ, ನಗ್ನೀಕರಣ ಹಾಗೂ ಸಂಚಯನ, ಅಂತರ್ಜಲ, ಅಗ್ನಿಪರ್ವತದಿಂದ ಹೊರ ಹೊಮ್ಮುವ ಅನೇಕ ಅನಿಲಗಳು ಇವೇ ಮುಂತಾದ ನಾನಾ ಕಾರಣಗಳಿಂದಾಗಿ ರೂಪುಗೊಂಡಂಥವು. ಮಟ್ಟ ಸುರಂಗ, ಅಡ್ಡ ಸುರಂಗಗಳನ್ನಿಟ್ಟು ಅದಿರನ್ನು ಹೊರತೆಗೆಯಲಾಗುತ್ತದೆ
ore genesis
ಅದಿಶ
(ಗ) ದಿಶೆಗೆ ಉಲ್ಲೇಖಿಸದೆ ಸಂಪೂರ್ಣವಾಗಿ ಪರಿಮಾಣದ ಮೂಲಕವಷ್ಟೆ ವ್ಯಕ್ತಗೊಳಿಸುವ ಭೌತ ಪರಿಮಾಣ. ಉದಾ: ಜವ, ಕಾಲ, ಉಷ್ಣತೆ, ರಾಶಿ ಇತ್ಯಾದಿ. ಹೋಲಿಸಿ: ಸದಿಶ
scalar
ಅದಿಶ ಮಾತೃಕೆ
(ಗ) ನೋಡಿ: ಮಾತೃಕೆ
scalar matrix
ಅಧಃಸ್ತರ
(ಭೂವಿ) ಭೂಮಿಯ ನಿಜವಾದ ಮೇಲ್ಪದರದ ಕೆಳಗಿರುವ ಸ್ತರ (ಸ) ಗಿಡಕ್ಕೆ ನೆಲೆ ನಿಲ್ಲಲು ಮತ್ತು ಬೆಳೆಯಲು ಆಧಾರವಾಗಿರುವ ಸಾಮಗ್ರಿ
substratum
ಅಧಶ್ಚರ್ಮ
(ಪ್ರಾ) ಸಂಧಿಪದಿ ಮತ್ತಿತರ ಅಕಶೇರುಕ ಗಳಲ್ಲಿ ಹೊರಚರ್ಮದ ಕೆಳಗಿರುವ ಲಾಲಾ ಚರ್ಮದ ಜೀವಕೋಶಗಳ ಸ್ತರ. ಇದರಿಂದ ಹೊರಚರ್ಮ ಸ್ರವಿಸುತ್ತದೆ
hypodermis
ಅಧಶ್ಚರ್ಮೀಯ
(ವೈ) ಚರ್ಮದ ಕೆಳಭಾಗದಲ್ಲಿ ಕೊಡುವ (ಮದ್ದು). ಚರ್ಮದಡಿಯಲ್ಲಿ ಚುಚ್ಚುಮದ್ದು ಕೊಡಲು ಬಳಸುವ (ಇಂಜೆಕ್ಷನ್ ಸೂಜಿ ಅಥವಾ ಅದನ್ನೊಳಗೊಂಡ ಪಿಚಕಾರಿ). ಅಧಸ್ವ್ತಚೀಯ
hypodermic
ಅಧಿಉಷ್ಣ
(ಪವಿ) ಸುತ್ತಲಿನ ಗಾಳಿಯ ಉಷ್ಣತೆಗೆ ಹೋಲಿಸಿದಂತೆ ಅನಿಲ-ಕೋಶದೊಳಗಿರುವ ಅನಿಲದ ಉಷ್ಣತೆಯ ಹೆಚ್ಚಳ. ಅನಿಲ ಸ್ಥಿತಿಗೆ ಸ್ಥಿತ್ಯಂತರವಾಗಗೊಡದಂತೆ ದ್ರವವನ್ನು ಅದರ ಕುದಿ ಬಿಂದುವಿಗೂ ಹೆಚ್ಚಿನ ಉಷ್ಣತೆಗೆ ಕಾಸುವುದು
superheat
ಅಧಿಕ ಕೋನ
(ಗ) ೯೦0ಗೂ ಜಾಸ್ತಿ ಮತ್ತು ೧೮೦0ಗೂ ಕಡಿಮೆ ಇರುವ ಕೋನ. ೯೦0 < < ೧೮೦0
obtuse angle
ಅಧಿಕ ಕ್ಷೀರಸ್ರಾವ
(ವೈ) ಮೊಲೆಹಾಲು ಅಧಿಕವಾಗಿ ಸ್ರವಿಸಿ, ಮೊಲೆ ತೊಟ್ಟಿನಿಂದ ಹೊರ ಹರಿಯತೊಡಗುವುದು