logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅತಿಸಂವೇದೀ
(ವೈ) ೧. ಅಸಹಜ ಪ್ರಮಾಣದ ಸಂವೇದನೆಯನ್ನು ತೋರಿಸುವಿಕೆ. ಒಂದು ಪ್ರಚೋದನೆಗೆ (ಉದಾ: ಬೆಳಕು, ಶಬ್ದ, ರಾಸಾಯನಿಕ ವಸ್ತುಗಳು ಇತ್ಯಾದಿ) ಅನಗತ್ಯ ಮಟ್ಟದಲ್ಲಿ ಪ್ರತಿಕ್ರಿಯೆಯನ್ನು ತೋರಿಸುವಿಕೆ. ೨. ಅಲರ್ಜಿ ಜನಕಗಳಿಗೆ ಮಿತಿಮೀರಿದ ಪ್ರತಿಕ್ರಿಯೆಯನ್ನು ತೋರಿಸುವ
hypersensitive

ಅತಿಸಾರ
(ವೈ) ಜಲರೂಪದ ಮಲ ಆಗಾಗ್ಗೆ ವಿಸರ್ಜನೆಯಾಗುವಂಥ ಅನಾರೋಗ್ಯ ಸ್ಥಿತಿ. ಭೇದಿ
diarrhoea

ಅತಿಸೂಕ್ಷ್ಮದರ್ಶಕ
(ಭೌ) ಸಾಮಾನ್ಯ ಸೂಕ್ಷ್ಮ ದರ್ಶಕದ ಮೂಲಕ ಕಾಣಲಾಗದಂಥ ಅತಿಸೂಕ್ಷ್ಮ ಕಣಗಳನ್ನು, ಟಿಂಡಾಲ್ ಪರಿಣಾಮದ ಮೂಲಕ ತೋರಿಸಿಕೊಡುವ ವಿಶೇಷ ರೀತಿಯ ಸೂಕ್ಷ್ಮದರ್ಶಕ. ಪರಿಶೀಲಿಸಲಾಗುತ್ತಿರುವ ದ್ರವ/ಅನಿಲದ ಒಳಕ್ಕೆ ಪ್ರಬಲ ಕಾಂತಿ ದೂಲವನ್ನು ಬೀರಿ ನಾಭೀಕರಿಸಲಾಗುತ್ತದೆ. ಆಗ ದ್ರವ/ಅನಿಲದಲ್ಲಿ ತೇಲುತ್ತಿರುವ (ಕಲಿಲ) ಕಣಗಳು ಬೆಳಕಿನ ಚದರಿಕೆ ಯಿಂದಾಗಿ ಉಜ್ವಲ ಚುಕ್ಕೆಗಳಾಗಿ ಕಪ್ಪು ಹಿನ್ನೆಲೆಯಲ್ಲಿ ಕಾಣುವಂತೆ ಇದರಲ್ಲಿ ವ್ಯವಸ್ಥೆ ಉಂಟು. ಪರಮಸೂಕ್ಷ್ಮದರ್ಶಕ
ultramicroscope

ಅತಿಸೂಕ್ಷ್ಮವೇದಿತ್ವ
(ವೈ) ಯಾವುದೇ ಉದ್ದೀಪನೆಗೆ ನರಗಳು ಮಿತಿ ಮೀರಿದ ಸೂಕ್ಷ್ಮ ಅನುಕ್ರಿಯೆ ತೋರುವ ವ್ಯಾಧಿಸ್ಥಿತಿ
hyperaesthesia

ಅತಿಸೂಕ್ಷ್ಮಶೋಧಕ
(ರ) ಅತ್ಯಂತ ಸೂಕ್ಷ್ಮ ರಂಧ್ರಗಳಿರುವ ಶೋಧಕ. ಕಲಿಲ ದ್ರಾವಣವನ್ನು ಇದರ ಮೂಲಕ ಸೋಸಿದಾಗ ದ್ರಾವಣದ ಘನ ರೂಪದ ಭಾಗ ಹಿಂದೆಯೇ ಉಳಿಯುತ್ತದೆ
ultrafilter

ಅತಿಸ್ವೇದನ
(ವೈ) ಅತಿಯಾಗಿ ಬೆವರು ಹರಿಸುವಿಕೆ. ಚಿಕಿತ್ಸೋದ್ದೇಶಕ್ಕಾಗಿ ಯಾವುದಾದರೂ ವಸ್ತುವಿನ ನೆರವಿನಿಂದ ಅತಿಯಾಗಿ ಬೆವರುವಂತೆ ಮಾಡುವಿಕೆ
diaphoresis

ಅತಿಹೊರೆ
(ತಂ) ಯಂತ್ರಕ್ರಿಯೆ ತೃಪ್ತಿಕರವಾಗಿ ಅನಿರ್ದಿಷ್ಟ ಕಾಲ ಮುಂದುವರಿಯುವಂತೆ ಮಾಡಲು ನಿಗದಿಯಾದ ಹೊರೆಯ ಮಟ್ಟವನ್ನು ಏರಿಸುವುದು. ಆದರೆ, ಈ ಅತಿ ಹೊರೆಯ ಕಾರಣವಾಗಿ ಯಂತ್ರದಲ್ಲಿ ವಿರೂಪಣೆ, ಕಾವೇರಿಕೆ/ಗಾಸಿ ಉಂಟಾಗಬಹುದು
overload

ಅತೀಂದ್ರಿಯ ಪ್ರಜ್ಞೆ
(ಮ) ಇಂದ್ರಿಯ ಸಂವೇದ್ಯ ವಲ್ಲದ ಭೂತ ಅಥವಾ ಭವಿಷ್ಯ ಅಥವಾ ಸುದೂರ ವಿದ್ಯಮಾನಗಳನ್ನು ಗ್ರಹಿಸಬಲ್ಲ ದೃಷ್ಟಿ ಅಥವಾ ಸಾಮರ್ಥ್ಯ
clairvoyance

ಅತ್ಯಧಿವ್ಯಾಪನೆ
(ಭೂವಿ) ಅನನುರೂಪ್ಯ ಸ್ತರಕ್ಕೂ ಶಿಲೆಗಳ ತಳದಲ್ಲಿ ಅತ್ಯಂತ ಆಳವಾದ ಸ್ತರದಿಂದ (ಗರ್ಭದಿಂದ) ಮೇಲೆದ್ದು ಕಾಣಿಸಿಕೊಂಡ ಸ್ತರಕ್ಕೂ ನಡುವಿನ ರಾಚನಿಕ ಸಂಬಂಧ. ಗರ್ಭದಿಂದ ಮೇಲೆದ್ದು ಕಾಣಿಸಿಕೊಂಡ ಸ್ತರದ ಮೇಲೆ ಅನನುರೂಪ್ಯ ಸ್ತರ ಅತಿಕ್ರಮಿಸುತ್ತದೆ
overstep

ಅತ್ಯವರ್ಣೀಯ ಮಸೂರ
(ಭೌ) ಬೆಳಕಿನ ಮೂರು ಅಲೆಯುದ್ದ ಕುರಿತಂತೆ ವರ್ಣವಿಪಥನ ಇರದ ಹಾಗೆ ಎರಡು ವಿಭಿನ್ನ (ಕ್ರೌನ್ ಹಾಗೂ ಫ್ಲಿಂಟ್) ಮಾದರಿಯ ಗಾಜುಗಳಿಂದ ರಚಿಸಿದ ಮಸೂರ
apochromatic lens


logo