logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅತಿರಕ್ತ
(ಖ) ನೋಡಿ : ಅವಕೆಂಪು
infrared

ಅತಿರಕ್ತತೆ
(ವೈ) ಶರೀರದ ಒಂದು ಭಾಗದ ಊತಕಗಳಲ್ಲಿ ರಕ್ತ ವಿಪರೀತವಾಗಿ ಸೇರಿರುವುದು
hyperaemia

ಅತಿವಲನ
(ಭೂವಿ) ಮಧ್ಯಭಾಗ ಮೇಲು ಕೆಳಗಾಗುವಷ್ಟು ಮಟ್ಟಿನ ಸ್ತರದ ಸಂಪೂರ್ಣ ಮಡಿಕೆ. ಸ್ತರದ ಎರಡು ಬಾಹುಗಳೂ ಒಂದೇ ಕಡೆಗೆ ವಿಭಿನ್ನ ಕೋನಗಳಲ್ಲಿ ಮಡಿಚಿಕೊಂಡು ಸ್ತರಕ್ಕೆ ಹೆಚ್ಚು ಕಡಿಮೆ S ಆಕಾರ ನೀಡಿರುತ್ತವೆ
overfold

ಅತಿವಿಭವ
(ತಂ) ವಿದ್ಯುದ್ವಿಭಜನ ಕೋಶದ ಎಲೆಕ್ಟ್ರೋಡ್‌ನಲ್ಲಿ ದತ್ತ ವಸ್ತು ವಿಸರ್ಜನೆಗೊಳ್ಳಲು ಸೈದ್ಧಾಂತಿಕವಾಗಿ ಅವಶ್ಯವಾದ ವಿಭವದ ಜೊತೆಗೆ ಹೆಚ್ಚಾಗಿ ಹಾಕಬೇಕಾದ ವಿಭವ. ಈ ಮೌಲ್ಯ ಎಲೆಕ್ಟ್ರೋಡ್‌ನ ವಸ್ತುವನ್ನೂ ವಿದ್ಯುತ್ ಸಾಂದ್ರತೆಯನ್ನೂ ಅವಲಂಬಿಸಿದೆ. ನೋಡಿ: ಅಧಿವೋಲ್ಟೇಜ್
overpotential

ಅತಿವೃದ್ಧಿ
(ವೈ) ಅತಿ ಆಹಾರಪುಷ್ಟಿಯಿಂದ ಯಾವುದೇ ಕೋಶ, ಅಂಗ ಮೊದಲಾದವು ಅಳತೆ ಮೀರಿ ಬೆಳೆಯುವುದು
hypertrophy

ಅತಿವ್ಯಾಪನೆ
(ಭೂವಿ) ೧. ಒಂದಾದನಂತರ ಒಂದರಂತೆ ಕ್ರಮಬದ್ಧವಾಗಿ ರೂಪುಗೊಂಡ ಸ್ತರಗಳ ಗುಂಪಿನಲ್ಲಿ ಒಂದು ಸ್ತರ ಅದರ ಕೆಳಗಿರುವ ಸ್ತರದ ಅಂಚನ್ನೂ ಮೀರಿ ಮುಂದುವರಿದು, ಹಳೆಯ ಗುಂಪಿನ ಸ್ತರಗಳ ಮೇಲೆ ಭಾಗಶಃ ಆಶ್ರಯಿಸಿಕೊಂಡಿರು ವಂತಾಗಿ ಅನನುರೂಪತೆಯನ್ನು ಉಂಟುಮಾಡಿರುವುದು. ೨. ತನ್ನ ಕೆಳಗಿರುವ ಸ್ತರವನ್ನೂ ಮೀರಿ ಇನ್ನೂ ಹಳೆಯ ಸ್ತರಗಳ ಮೇಲಕ್ಕೂ ಮುಂದುವರಿದಿರುವ ಸ್ತರದ ಒಂದು ಭಾಗ
overlap

ಅತಿಶೈತ್ಯದರ್ಶಕ
(ಭೌ) ಬರ್ಫ ಬಿಂದುವನ್ನಾಗಲೀ ದ್ರವನ ಬಿಂದುವನ್ನಾಗಲೀ ಅಳೆಯಲು ಬಳಸುವ ಉಪಕರಣ. ನಿಮ್ನೋಷ್ಣತಾದರ್ಶಕ. ಕ್ರಯೋಮಾಪಕ. ಘನೀಕರಣ ಬಿಂದು ಗಳನ್ನು ಕಂಡುಹಿಡಿಯಲು (ಉದಾ: ಹಾಲಿನ ಘನೀಕರಣ ಬಿಂದುವನ್ನು ಕಂಡುಹಿಡಿದು, ಹಾಲಿಗೆ ಸೇರಿಸಿರುವ ನೀರಿನ ಪ್ರಮಾಣವನ್ನು ಕಂಡುಹಿಡಿಯಲು) ಬಳಸುವ ಉಪಕರಣ
cryoscope

ಅತಿಶೈತ್ಯವಿಜ್ಞಾನ
(ಭೌ) ಅತಿಶೈತ್ಯೋತ್ಪಾದನೆ, ಅದರ ಮಾಪನ, ಆ ಅವಸ್ಥೆಯಲ್ಲಿ ದ್ರವ್ಯದ ವರ್ತನೆ ಮುಂತಾದವುಗಳ ಅಧ್ಯಯನ. ಆಕ್ಸಿಜನ್‌ನ ಕುದಿ ಬಿಂದುವಿಗಿಂತ (-೧೮೩0 ಸೆ.) ಕೆಳಗಿನ ಉಷ್ಣತೆಗಳು ಈ ಅಧ್ಯಯನದ ವಸ್ತು
cryogenics

ಅತಿಶೈತ್ಯಶಸ್ತ್ರಕ್ರಿಯೆ
(ವೈ) ಅತಿಶೈತ್ಯ ವಿಧಾನಗಳನ್ನು ಪ್ರಯೋಗಿಸಿ ಸ್ಥಳೀಯ/ಸಮಗ್ರ ಶಸ್ತ್ರಕ್ರಿಯೆ ನಡೆಸುವುದು
cryosurgery

ಅತಿಶೈತ್ಯಸ್ಥಾಪಿ
(ಭೌ) ನೋಡಿ: ನಿಮ್ನೋಷ್ಣತಾಸ್ಥಾಪಿ
cryostat


logo