logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅತಿನೇರಿಳೆ ಕಿರಣಗಳು
(ಭೌ) ವಿದ್ಯುತ್ಕಾಂತೀಯ ವಿಕಿರಣದಲ್ಲಿ ನೇರಿಳೆ ಬಣ್ಣದಿಂದ ಎಕ್ಸ್-ಕಿರಣಗಳವರೆಗಿನ ಅಗೋಚರ ವ್ಯಾಪ್ತಿ. ಛಾಯಾಚಿತ್ರ ಫಿಲ್ಮ್‌ಗಳ ಮೇಲೆ ಇವುಗಳ ಪರಿಣಾಮವನ್ನು ಗುರುತಿಸಬಹುದು. ಮನುಷ್ಯ ದೇಹದಲ್ಲಿ ಇರುವ ಎರ್ಗೊಸ್ಟಿರಾಲ್ ಮೇಲೆ ವರ್ತಿಸಿ ವೈಟಮಿನ್ ‘ಡಿ’ಯನ್ನು ಉತ್ಪಾದಿಸುತ್ತವೆ. ಸೌರವಿಕಿರಣದಲ್ಲಿ ಇವು ಸಮೃದ್ಧವಾಗಿದ್ದರೂ ಹೆಚ್ಚಿನ ಅಂಶವನ್ನು ಓಜೋನ್ ಪದರ ಹೀರಿಕೊಂಡು ಅತ್ಯಲ್ಪಾಂಶ ವನ್ನು ಮಾತ್ರ ಭೂಮಿಗೆ ತೂರಿಕೊಂಡು ಬರಲು ಬಿಡುತ್ತದೆ
ultraviolet rays

ಅತಿನೇರಿಳೆ ಚಿಕಿತ್ಸೆ
(ವೈ) ಅತಿನೇರಿಳೆ ಕಿರಣಗಳ ಪ್ರಯೋಗದಿಂದ ರೋಗ ಶುಶ್ರೂಷೆ. ಈ ಅತಿನೇರಿಳೆ ಕಿರಣಗಳನ್ನು ಸಾಮಾನ್ಯವಾಗಿ ಕ್ವಾರ್ಟ್ಸ್ ಪಾದರಸ-ಆವಿ ದೀಪಗಳಿಂದ ಉತ್ಪಾದಿಸಲಾಗುತ್ತದೆ. ಹೆಚ್ಚಿನ ಡೋಸೇಜಿನಿಂದ ಅನಾಹುತ. ಕಡಿಮೆ ಡೋಸೇಜ್ ಹೆಚ್ಚು ಅನುಕೂಲ
ultraviolet therapy

ಅತಿನೇರಿಳೆ ದ್ಯುತಿಎಲೆಕ್ಟ್ರಾನ್ ರೋಹಿತದರ್ಶನ
(ತಂ) ಮೇಲ್ಮೈ ಸಂವೇದಿ ವಸ್ತು ರೋಹಿತದರ್ಶನ ತಂತ್ರ. ಅತ್ಯಧಿಕ ನಿರ್ವಾತದಲ್ಲಿ ಮಾದರಿ ವಸ್ತುವಿನ ಮೇಲ್ಮೈಯನ್ನು ಅತಿ ನೇರಿಳೆ ಕಿರಣ ದೂಲದ ದ್ಯುತಿಕಣ ಗಳಿಂದ ತಾಡಿಸಲಾಗುವುದು. ೧೦-೫೦ ev ಶಕ್ತಿ ಹೊಂದಿರುವ ಈ ದ್ಯುತಿಕಣಗಳು, ಮಾದರಿ ವಸ್ತುವಿನ ಮೇಲ್ಭಾಗದ ಮೊದಲ ಒಂದು ನ್ಯಾನೊಮೀಟರ್‌ವರೆಗಿನ ಪದಾರ್ಥದ ಪರಮಾಣುಗಳ ಜೊತೆ ಅಂತರಕ್ರಿಯೆ ನಡೆಸಿ ದ್ಯುತಿಎಲೆಕ್ಟ್ರಾನ್‌ಗಳನ್ನು ಬಿಡುಗಡೆ ಗೊಳಿಸುವುದು. ಈ ದ್ಯುತಿಎಲೆಕ್ಟ್ರಾನ್‌ಗಳ ಚಾಲನಶಕ್ತಿಯನ್ನು ಅಳತೆಮಾಡಿ, ಮಾದರಿ ವಸ್ತುವಿನ ಅಣ್ವಿಕ ಶಕ್ತಿ ಮಟ್ಟವನ್ನು ಕಂಡುಹಿಡಿಯಲಾಗುವುದು. ಇಲ್ಲಿ ಪರೀಕ್ಷೆಗೊಳಪಡಿಸುವ ಮಾದರಿ ವಸ್ತುಗಳು ಕ್ಷಾರ ಲೋಹಗಳಾಗಿರುತ್ತವೆ
ultraviolet photoelectron spectroscopy

ಅತಿಪರವಲಯ
(ಗ) ಲಂಬವೃತ್ತೀಯ ಶಂಕುವನ್ನು ಸಮತಲ ಛೇದಿಸಿದಾಗ (ವೃತ್ತ ವಲ್ಲದೇ) ದೊರೆಯುವ ಮೂರು ಬಗೆ ವಕ್ರರೇಖೆಗಳ ಪೈಕಿ ಒಂದು. ಉಳಿದ ಎರಡು ದೀರ್ಘವೃತ್ತ (ellipse) ಮತ್ತು ಪರವಲಯ (parabola). ಅತಿಪರವಲಯ ಎರಡು ಹಾಲೆಗಳು ಇರುವ ವಿವೃತ ವಕ್ರರೇಖೆ. ಇದರ ಉತ್ಕೇಂದ್ರತೆ (eccentricity) ೧ಕ್ಕಿಂತ ಅಧಿಕ. ನೋಡಿ: ನಾಭಿನಿಯತಾ ಗುಣ
hyperbola

ಅತಿಪರವಲಯಜ
(ಗ) ರೂಪದ ಸಮೀಕರಣಗಳು ನೀಡುವ ದ್ವಿಘಾತೀಯ ಮೇಲ್ಮೈಗಳು. ಕೆಲವು ಸಂದರ್ಭಗಳಲ್ಲಿ ಅತಿಪರವಲಯದ ತುಣುಕನ್ನು ಯುಕ್ತ ಅಕ್ಷದ ಸುತ್ತ ಆವರ್ತಿಸುವ ಮೂಲಕ ಇದನ್ನು ಪಡೆಯಬಹುದು
hyperboloid

ಅತಿಪೌಷ್ಟೀಕರಣ
(ಪವಿ) ಸರೋವರ ಮೊದಲಾದವುಗಳಲ್ಲಿ ಜಲಚರಗಳು ಆಕ್ಸಿಜನ್ ಕೊರತೆಯಿಂದ ಸಾಯುವಷ್ಟು ಮಟ್ಟಿಗೆ ಸಸ್ಯಗಳು ಬೆಳೆಯುವಂತೆ ಮಾಧ್ಯಮ ವಿಪರೀತವಾಗಿ ಫಲವತ್ತಾಗಿರುವಿಕೆ
eutrophication

ಅತಿಪ್ರತ್ಯಾಮ್ಲೀಯ ಶಿಲೆ
(ಭೂವಿ) ಶೇ. ೪೫ ಕ್ಕಿಂತಲೂ ಕಡಿಮೆ ಸಿಲಿಕವಿರುವ ಅಗ್ನಿಶಿಲೆ
ultrabasic rock

ಅತಿಮರೆವು
(ವೈ) ಅತಿಮರೆವಿನ ರೋಗ. ಅತ್ಯಂತ ಹಿಂದೆ ಜರಗಿದ ಘಟನೆಗಳನ್ನು ಬಿಟ್ಟು ಬೇರಾವುದರ ನೆನಪೂ ಇರದಂಥ ವ್ಯಕ್ತಿಯ ಮನೋಸ್ಥಿತಿ
hyperamnesia

ಅತಿಮಾನಸ ಕ್ರಿಯೆ
(ಸಾ) ಸಂಕಲ್ಪ ಮಾತ್ರದಿಂದ ವಸ್ತುವನ್ನು ಬದಲಿಸಬಹುದೆನ್ನುವ, ಉದಾ: ಕಂಬಿಯನ್ನು ಮುಟ್ಟದೆಯೇ ಬಾಗಿಸಬಹುದೆನ್ನುವಂತಹ ಕ್ರಿಯೆ. ಮನಶ್ಚಾಲನೆ
psychokinesis

ಅತಿಮೂತ್ರ
(ವೈ) ಪಿಟ್ಯುಟರಿ ಗ್ರಂಥಿಯ ಹಿಂಭಾಗದ ಹಾಲೆಗೆ ರೋಗ ತಟ್ಟಿದುದರ ಇಲ್ಲವೇ ಗಾಸಿ ಯಾದುದರ ಪರಿಣಾಮವಾಗಿ ಮೂತ್ರಸ್ರಾವವನ್ನು ನಿರುತ್ತೇಜನ ಗೊಳಿಸುವ ಹಾರ್ಮೋನ್‌ನ ಉತ್‌ಸ್ರವನ ಕುಂಠಿತಗೊಂಡು ಮೂತ್ರ ವಿಸರ್ಜನೆಯಲ್ಲಿ ಹಾಗೂ ಬಾಯಾರಿಕೆಯಲ್ಲಿ ಅತಿ ಹೆಚ್ಚಳ ಕಂಡುಬರುವ ಒಂದು ರೋಗ ಸ್ಥಿತಿ. ಬಹುಮೂತ್ರ
diabetes insipidus


logo