(ಸ) ಅಮರಾಂತೇಸೀ ಕುಟುಂಬದ, ಕೆಂಪು/ಹಳದಿ ಹೂ ಬಿಡುವ ಸಸ್ಯ. ಸಿಲೋಸಿಯ ಅರ್ಜೇಂಟಿಯ ಇದರ ವೈಜ್ಞಾನಿಕ ನಾಮ. ಇದರ ಹೂಗಳ ಗೊಂಚಲು ಹುಂಜಕ್ಕಿರುವ ಜುಟ್ಟನ್ನು ಹೋಲುವಂತೆ ಇರುತ್ತದೆ. ಹೊಲ ತೋಟಗಳಲ್ಲಿ ಕಳೆಯಾಗಿ ಬೆಳೆಯುತ್ತದೆ. ಎಳೆಯ ಗಿಡ ತರಕಾರಿಯಾಗಿ ಬಳಕೆ. ಅಣ್ಣೆಸೊಪ್ಪು
cockscomb
ಅತಪನ
(ಭೌ) ಸೂರ್ಯನಿಂದ ಬರುವ ವಿಕಿರಣ. ಇದು ಕಕ್ಷೆಯಲ್ಲಿ ಭೂಮಿಯ ಸ್ಥಾನ, ವಾತಾವರಣದ ದಟ್ಟಣೆ ಮತ್ತು ಪಾರಕತೆ, ಸೂರ್ಯನ ಕಿರಣಗಳು ಬೀಳುವ ಭೂಮಿಯ ಮೇಲ್ಮೈಯ ಓರೆ ಇವನ್ನು ಅವಲಂಬಿಸಿದೆ. (ವೈ) ಅಧಿಕ ಸೂರ್ಯ ಝಳದಿಂದ ಬರುವ ಮೂರ್ಛಾವಸ್ಥೆ. ಸೂರ್ಯಾಘಾತ
insolation
ಅತಲ ರೇಖೆಗಳು
(ಗ) ಯೂಕ್ಲಿಡಿಯನ್ ಮೂರು ಆಯಾಮಗಳ ಆಕಾಶದಲ್ಲಿ (ಸ್ಪೇಸ್) ಏಕತಲೀಯವಾಗಿರದ ಸರಳರೇಖೆಗಳು. ಇವು ಎಲ್ಲಿಯೂ ಪರಸ್ಪರ ಸಂಧಿಸವು. ಆಕಾಶದಲ್ಲಿಯ ಅಛೇದಕ ಮತ್ತು ಅಸಮಾಂತರ ಸರಳ ರೇಖೆಗಳು. ಉಭಯ ರೇಖೆಗಳಿಗೂ ಲಂಬವಾಗಿರುವ ರೇಖೆ ಅವುಗಳ ನಡುವಿನ ಕನಿಷ್ಠ ಅಂತರವೂ ಹೌದು
skew lines
ಅತಿಉಬ್ಬರ
(ಭೂ) ಸಮುದ್ರದ ಯಾವುದೇ ಸ್ಥಳದಲ್ಲಿ ಸಾಮಾನ್ಯವಾಗಿ ಎರಡು ಉಬ್ಬರಗಳ ಜೊತೆಗೆ ಸಂಭವಿಸುವ ಹೆಚ್ಚಿನ ಉಬ್ಬರ
overtide
ಅತಿಋತುಸ್ರಾವ
(ವೈ) ಋತು ಸಂದರ್ಭದಲ್ಲಿ ಅಧಿಕ ರಕ್ತನಷ್ಟ
menorrhagia
ಅತಿಕ್ರಮಣ
(ಭೂವಿ) ಕಡಲಿನಿಂದ ನೆಲದ ಕಬಳಿಕೆ. ಸಮುದ್ರದ ಜಲಮಟ್ಟ ಏರುವುದರಿಂದ ಇಲ್ಲವೇ ತೀರಪ್ರದೇಶ ಕುಸಿಯುವುದರಿಂದ ಇದು ಸಂಭವಿಸುತ್ತದೆ
transgression
ಅತಿದಾಹ
(ವೈ) ಕಡು ಅಥವಾ ಅಸಹಜ ಪ್ರಮಾಣದ ಬಾಯಾರಿಕೆ; ಇಲ್ಲವೇ ಕೆಲವು ಅಸಹಜ ಸ್ವರೂಪದ ಪಾನೀಯಗಳಿಗಾಗಿ ಹಂಬಲಿಸುವಿಕೆ
dipsosis
ಅತಿನಿದ್ರಾರೋಗ
(ವೈ) ಕಾಲದೇಶಗಳ ಪರಿಗಣನೆ ಇಲ್ಲದೆ ಎಲ್ಲೆಂದರಲ್ಲಿ ಹಠಾತ್ತನೆ ತಡೆಯಲಸಾಧ್ಯವಾದ ನಿದ್ರೆಗೆ ತುತ್ತಾಗುವಿಕೆ. ನಿದ್ರೆಯು ಹಲವು ಸಲ ಬಂದೆರಗಬಹುದು. ಆದರೆ ನಿದ್ರೆಯಿಂದ ವ್ಯಕ್ತಿಯನ್ನು ಎಬ್ಬಿಸಲು ಸಾಧ್ಯವಿದೆ
norcolepsy
ಅತಿನಿಮ್ನ ಆವೃತ್ತಿ
(vlf) (ಭೌ) ೧೦-೩೦ ಕಿಲೋ ಹರ್ಟ್ಸ್ ವ್ಯಾಪ್ತಿಯಲ್ಲಿರುವ ರೇಡಿಯೋ ಆವೃತ್ತಿಗಳು. ಇವುಗಳ ಅಲೆಯುದ್ದಗಳು ೩೦ರಿಂದ ೧೦ ಕಿಲೋಮಿಟರ್ ವ್ಯಾಪ್ತಿಯಲ್ಲಿರುತ್ತವೆ. ನೋಡಿ : ಅತ್ಯುಚ್ಚ ಆವೃತ್ತಿ
very low frequency
ಅತಿನೇರಿಳೆ
(ಭೌ) ವಿದ್ಯುತ್ಕಾಂತ ರೋಹಿತದಲ್ಲಿ ಸ್ಥೂಲವಾಗಿ 4x10–7 – 5x10–9 ಮೀಟರ್ ವ್ಯಾಪ್ತಿಯ, ಅಂದರೆ ಗೋಚರ ಬೆಳಕಿನ (ನೇರಿಳೆ ಬಣ್ಣದ) ಅಲೆಗಳಿಂದ ಎಕ್ಸ್-ಕಿರಣ ಗಳವರೆಗಿನ ಅಗೋಚರ ಭಾಗ