logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಣಬೆ
(ಸ) ಬೆಸಿಡಿಯೊಮೈಸಿಟೀಸ್ ವಿಭಾಗದ ಅಗ್ಯಾರಿಕೇಲೀಸ್ ಎಂಬ ಗಣಕ್ಕೆ ಸೇರಿದ ಇದು ಒಂದು ಬಗೆಯ ಶಿಲೀಂಧ್ರ. ಇದರ ಫಲದಾಯಕ ಕಾಯ (ಬೆಸಿಡಿಯೊಕಾರ್ಪ್) ಪೌಷ್ಟಿಕ ಆಹಾರ. ಔಷಧಿ ತಯಾರಿಕೆಯಲ್ಲಿ ಬಳಕೆ. ಶೀಘ್ರ ವಾದ ಬೆಳವಣಿಗೆ. ಅಲ್ಪಾಯು. ನಾಯಿಕೊಡೆ
mushroom

ಅಣಿಮೀನು
(ಪ್ರಾ) ಕ್ಲೇರಿಯಸ್ ಬ್ಯೂಟ್ರಾಕಸ್ (ಚೇಳು ಮೀನು) ವರ್ಗಕ್ಕೆ ಸೇರಿರುವ ಆಹಾರ ಮತ್ಸ್ಯ. ಸುಮಾರು ೩೦ ಸೆಂ.ಮೀ ಉದ್ದ ಬೆಳೆಯುತ್ತದೆ. ಬೆನ್ನಿನ ಈಜುರೆಕ್ಕೆ ಬಲು ಉದ್ದ
clarias

ಅಣು
(ರ-ಭೌ) ಕೆಲವು ರಾಸಾಯನಿಕ ಧಾತುಗಳಲ್ಲಿ ಸಂಯುಕ್ತದ ಅತ್ಯಂತ ಸಣ್ಣ ಘಟಕ. ಧಾತುಗಳ ಪರಮಾಣು ಗುಚ್ಛ ಅಥವಾ (ಕೆಲವು ಧಾತುಗಳ ವಿಷಯದಲ್ಲಿ ಹಾಗೂ ವಿರಳ ಅನಿಲಗಳ ವಿಷಯದಲ್ಲಿ ಇರುವಂತೆ) ಒಂಟಿ ಪರಮಾಣು. ಇದು ಸ್ವತಂತ್ರವಾಗಿ ಅಸ್ತಿತ್ವದಲ್ಲಿರಬಲ್ಲುದು. ಎರಡು ಅಥವಾ ಹೆಚ್ಚು ಪರಮಾಣುಗಳಿಂದ ಕೂಡಿ ಆದುದು. ಅಣುವಿನಲ್ಲಿರುವ ಪರಮಾಣುಗಳು H2,S2 ಹಾಗೂ S8ಗಳಲ್ಲಿ ಇರುವಂತೆ ಸರ್ವ ರೀತಿಯಲ್ಲೂ ಸಮವಾಗಿರಬಹುದು ಅಥವಾ H2O ಹಾಗೂ CO2ಗಳಲ್ಲಿ ಇರುವಂತೆ ಭಿನ್ನಭಿನ್ನವಾಗಿರಬಹುದು. ನೀರು, ಬೆನ್ಝೀನ್ ಅಥವಾ ಹೆಮೊಗ್ಲಾಬಿನ್‌ಗಳಂತೆ ಬಿಡಿಬಿಡಿಯಾದ ಅಣುಗಳನ್ನು ಒಳಗೊಂಡಿರುವಂಥವು ಆಣ್ವಿಕ ವಸ್ತುಗಳು. ವಜ್ರ, ಸೋಡಿಯಮ್ ಕ್ಲೋರೈಡ್ ಹಾಗೂ ಜಿಯೋಲೈಟ್‌ಗಳು ಆಣ್ವಿಕವಲ್ಲದ ವಸ್ತುಗಳಿಗೆ ಉದಾಹರಣೆಗಳು
molecule

ಅಣುಗಾತ್ರ
(ರ) ಅನಿಲ ರೂಪದಲ್ಲಿರುವ ೧ ಮೋಲ್‌ನಷ್ಟು ಧಾತು ಅಥವಾ ಸಂಯುಕ್ತವು ಶಿಷ್ಟ ಉಷ್ಣತೆ ಹಾಗೂ ಒತ್ತಡದಲ್ಲಿ ಆಕ್ರಮಿಸುವ ಗಾತ್ರ. ಇದು ಆ ಪದಾರ್ಥದ ಅಣುತೂಕವನ್ನು ಅದರ ಸಾಂದ್ರತೆಯಿಂದ ವಿಭಾಗಿಸಿದಾಗ ದೊರೆಯುವ ಲಬ್ಧಕ್ಕೆ ಸಮ. ಮೋಲಾರ್ ಗಾತ್ರ
molecular volume

ಅಣುಜೀವ ವಿಜ್ಞಾನ
(ರ) ಜೀವಿಯೊಂದರ ಬೃಹದಣುಗಳ, ಅದರಲ್ಲೂ ನಿರ್ದಿಷ್ಟವಾಗಿ ಪ್ರೋಟೀನ್‌ಗಳ ಹಾಗೂ ನ್ಯೂಕ್ಲಿಯಿಕ್ ಆಮ್ಲಗಳಾದ ಡಿಎನ್‌ಎ ಹಾಗೂ ಆರ್‌ಎನ್‌ಎಗಳ ರಚನೆಯನ್ನೂ ಕ್ರಿಯೆಯನ್ನೂ ಅಧ್ಯಯಿಸುವ ವಿಜ್ಞಾನ ಶಾಖೆ. ಅಣು ತಳಿ ವಿಜ್ಞಾನ ಇದರ ಒಂದು ವಿಶೇಷ ವಿಭಾಗ. ಇದು ಜೀನ್‌ಗಳ (ವಂಶವಾಹಿ) ವಿಶ್ಲೇಷಣೆ ನಡೆಸುತ್ತದೆ
molecular biology

ಅಣುರಾಶಿ
(ರ) ಹಿಂದೆ ಅಣುತೂಕ ಎಂದು ಹೇಳಲಾಗುತ್ತಿತ್ತು. ಅಣುವಿನಲ್ಲಿರುವ ಎಲ್ಲ ಪರಮಾಣುಗಳ ಸಾಪೇಕ್ಷ ತೂಕಗಳ ಮೊತ್ತ. ಸಾಪೇಕ್ಷ ಅಣುರಾಶಿ. ವಸ್ತುವೊಂದರ ವಿಶಿಷ್ಟ ಸಮಸ್ಥಾನೀಯ ಸಂಯೋಜನೆಯ ಒಂದೊಂದೂ ಅಣುವಿನ ಸರಾಸರಿ ರಾಶಿಗೂ 12Cನ ಪರಮಾಣುವೊಂದರ ೧/೧೨ ರಾಶಿಯ ಪಾಲಿಗೂ ನಡುವಿನ ನಿಷ್ಪತ್ತಿ
molar mass

ಅಣುಸೂತ್ರ
(ರ) ಅಣುವೊಂದರಲ್ಲಿ ಯಾವ ಬಗೆಯ ಪರಮಾಣುಗಳಿವೆ ಮತ್ತು ಅವು ಎಷ್ಟು ಸಂಖ್ಯೆಯಲ್ಲಿವೆ ಎಂಬುದನ್ನು ತೋರಿಸುವ ಸೂತ್ರ. ಉದಾ: ಹೈಡ್ರೊಜನ್ ಪೆರಾಕ್ಸೈಡ್‌ನ ಸೂತ್ರ H2O2
molecular formula

ಅಣೆಕಟ್ಟು
(ಸಾ) ಜಲಾಶಯ ನಿರ್ಮಿಸಲು ಹರಿಯುವ ನೀರಿಗೆ ತಡೆಯಾಗಿ ನಿರ್ಮಿಸಿದ ಕಟ್ಟೆ. ನೀರೊಡ್ಡು
dam

ಅಣೆಕಟ್ಟು
(ತಂ) ನಾಲೆಗಳಲ್ಲಿ ಸದಾ ನೀರು ದೊರೆಯುವಂತೆ ಹೊಳೆಯ ಪಾತ್ರವನ್ನು ಎತ್ತರಿಸಲು ಹೊಳೆಗೆ ಅಡ್ಡವಾಗಿ ಕಟ್ಟಿದ ಕಟ್ಟೆ ಅಥವಾ ದಿಬ್ಬ ಅಥವಾ ಗೋಡೆ
anicut

ಅಣೆಕಟ್ಟು
(ತಂ) ನದಿಯ ಪಾತ್ರದಲ್ಲಿ ನೀರಿನ ಮಟ್ಟ ನಿಯಂತ್ರಿಸಲು ಹರಿವಿಗೆ ಅಡ್ಡವಾಗಿ ಕಟ್ಟಿರುವ ಒಡ್ಡು ; ಹೆಚ್ಚಿನ ನೀರು ಇದರ ಮೇಲೆ ಹರಿದುಹೋಗುತ್ತದೆ
weir


logo