(ತಂ) ತರಲ ಪ್ರವಾಹವನ್ನು ನಿರೋಧಿಸುವ, ಅದರ ದಿಶೆ ಬದಲಿಸುವ ಅಥವಾ ವಿಭಾಗಿಸುವ ಯಾವುದೇ ಸಲಕರಣೆ
baffle
ಅಡ್ಡ ತರಂಗ
(ಭೌ) ಈ ತರಂಗ ಚಲನೆಯಲ್ಲಿ ಮಾಧ್ಯಮದ ಕ್ಷೋಭೆಯು ತರಂಗ ಸಂಚರಣೆಯ ದಿಶೆಗೆ ಲಂಬ ದಿಶೆಯಲ್ಲಿ ಸಂಭವಿಸುತ್ತದೆ. ಉದಾ: ವಿದ್ಯುತ್ಕಾಂತ ತರಂಗಗಳು
transverse wave
ಅಡ್ಡ ತೊಲೆ
(ತಂ) ಮರದ ಪಟ್ಟಿಗಳನ್ನೂ ಗಾರೆಯನ್ನೂ ಉಪಯೋಗಿಸಿ ತಡಕೆ ಗೋಡೆ ಕಟ್ಟುವಲ್ಲಿ ಮರದ ಪಟ್ಟಿಗಳನ್ನು ಹೊಡೆಯುವ ಚೌಕಟ್ಟಿನ ನಿಲುಮರ
stud
ಅಡ್ಡದಿಮ್ಮಿ
(ತಂ) ರೈಲ್ವೇ ಕಂಬಿಗಳ ನಡುವಿನ ಅಂತರ ಸರಿಯಾಗಿ ಒಂದೇ ಇರುವಂತೆ ಹಿಡಿದಿರಿಸಲೋಸುಗ ಮತ್ತು ಕಂಪನವನ್ನು ಸರಾಗಗೊಳಿಸಲು ಕಂಬಿಗಳ ಕೆಳಗೆ ಅಳವಡಿಸುವ ಮರದ, ಉಕ್ಕಿನ ಅಥವಾ ಕಾಂಕ್ರಿಟ್ ಫಲಕ
sleeper
ಅಡ್ಡಸಾಲು
(ಗ) ಒಂದು ಮಾತೃಕೆ (ಮ್ಯಾಟ್ರಿಕ್ಸ್) ಅಥವಾ ನಿರ್ಧಾರಕ (ಡಿಟರ್ಮಿನೆಂಟ್) ಇವುಗಳಲ್ಲಿ ಎಡದಿಂದ ಬಲಕ್ಕೆ ಜೋಡಿಸಲಾದ ಸಂಖ್ಯಾಗಣ. ಉದಾ: ಎಂಬ ಎರಡನೇ ದರ್ಜೆಯ ಮಾತೃಕೆಯಲ್ಲಿ ೧,೨ ಹಾಗೂ ೩, ೪ ಎಂಬುವು ಕ್ರಮವಾಗಿ ಮೊದಲನೇ ಮತ್ತು ಎರಡನೇ ಅಡ್ಡಸಾಲುಗಳು
row
ಅಡ್ಡಹಾಯಿಸು
(ಜೀ) ಮಿಶ್ರತಳಿಯೆಬ್ಬಿಸು, ಸಂಕರ ತಳಿ ಮಾಡು, ಭಿನ್ನ ತಳಿಗಳನ್ನು ಸೇರಿಸಿ ಬೇರೊಂದು ಜೀವಿಯನ್ನು ಸೃಷ್ಟಿಸು
cross
ಅಡ್ಡೆಲುಬು
(ಪ್ರಾ) ಕಶೇರುಕಗಳಲ್ಲಿ ಕಣ್ಣೆವೆಗೆ ಆಧಾರವಾಗಿ ಇರುವ ಸಾಂದ್ರ ಸಂಬಂಧಕ ಊತಕದ ನೀಳ ಫಲಕ
tarsus
ಅಡ್ರೀನಲ್
(ಪ್ರಾ) ಮೂತ್ರಪಿಂಡ ಸಮೀಪದ ಅಡ್ರೀನಲ್ ಗ್ರಂಥಿಗೆ ಸಂಬಂಧಿಸಿದ
adrenal
ಅಡ್ರೀನಲ್ ಗ್ರಂಥಿಗಳು
(ಪ್ರಾ) ಹೊಟ್ಟೆಯಲ್ಲಿ ಬೆನ್ನಿಗಂಟಿಕೊಂಡಿರುವ ಎರಡೂ ಮೂತ್ರಪಿಂಡಗಳ ಮೇಲೆ ಕುಲಾವಿ ಗಳಂತಿರುವ ಎರಡು ಸಣ್ಣ ಗ್ರಂಥಿಗಳು. ಜೀವಿಗೆ ಅತ್ಯವಶ್ಯವಾದ ಪ್ರೊಜೆಸ್ಟಿರೋನ್ ಸ್ಟಿರಾಯ್ಡ್‌ಗಳನ್ನೂ ಹಾರ್ಮೋನ್‌ಗಳನ್ನೂ ಉತ್ಪಾದಿಸುತ್ತವೆ. ಕಲಿಜೊತ್ತು ಗ್ರಂಥಿ
adrenal glands
ಅಡ್ರೀನಲಿನ್
(ಜೀ) ಅಡ್ರೀನಲ್ (ಅಧಿಮೂತ್ರ ಪಿಂಡಕ) ಗ್ರಂಥಿಗಳ ಒಳಭಾಗದಲ್ಲಿ ಉತ್ಪಾದನೆಯಾಗುವ ಹಾರ್ಮೋನು. C9H13NO3. ಇದು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಇರುವಾಗ ಗುಂಡಿಗೆ ಬಡಿತವನ್ನು ತ್ವರೆಗೊಳಿಸುತ್ತದೆ. ರಕ್ತದೊತ್ತಡವನ್ನು ವರ್ಧಿಸುತ್ತದೆ. ಉದ್ರೇಕ ಭಾವವನ್ನು ಹೆಚ್ಚಿಸುತ್ತದೆ. ಎಪಿನೆಫ್ರೀನ್