logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಅಂಕಲಿಪಿ
1. ಅಂಕಿಗಳನ್ನೂ ಅಕ್ಷರಗಳನ್ನೂ ಕಲಿಸುವ ಪುಸ್ತಕ. 2. ಅಂಕೆಗಳನ್ನು ಬಳಸಿ ಬರೆಯುವ ಬರಹ.

ಅಂಕವಣಿ(ಣೆ)
ಅಂಕಣಿ.

ಅಂಕವಾತು
1. ಯುದ್ಧದ ಮಾತು. 2. ವೀರವಚನ.

ಅಂಕಿ
ಸಂಖ್ಯೆಯನ್ನು ಬರಹರೂಪದಲ್ಲಿ ತೋರಿಸುವ ಚಿಹ್ನೆ.

ಅಂಕಿತ
ಗುರುತು ಮಾಡಿದ.

ಅಂಕಿತ
1. ಗುರುತು. 2. ರುಜು. 3. ಅರ್ಪಣೆ.

ಅಂಕಿತನಾಮ
(ವ್ಯಕ್ತಿ ಅಥವಾ ಸ್ಥಳಗಳಿಗೆ) ಇಟ್ಟಿರುವ ಹೆಸರು.

ಅಂಕಿಸು
1. ಬಳಿ. 2. ವಶಪಡಿಸಿಕೊಳ್ಳು. 3. ಎಣಿಸು. 4. ಲಕ್ಷಿಸು. 5. ಗುರುತುಮಾಡು.

ಅಂಕು
ಸೊಟ್ಟು.

ಅಂಕು
ಸೊಟ್ಟಾಗು.


logo