logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಮೂವತ್ತನೆಯ ಅಕ್ಷರ. 2. ಆರು ಎಂಬ ಸಂಖ್ಯೆಯ ಸಂಕೇತ. 3. (ಛಂದಸ್ಸಿನ) ಅಕ್ಷರಗಣಗಳಲ್ಲಿ ಒಂದು.

ತಂ
(ಸಂಗೀತದಲ್ಲಿ) ಒಂದು ಗೀತಾಕ್ಷರ.

ತಂ
ತಂಪಾದ.

ತಕತ್ತು
ರಾಜ್ಯ.

ತಕರಾರು
1. ಆಕ್ಷೇಪಣೆ. 2. ಅಡ್ಡಿ.

ತಕರಾರುಅರ್ಜಿ
1. ಕೆಳಗಿನ ಕೋರ್ಟಿನ ತೀರ್ಪನ್ನು ಪ್ರತಿಭಟಿಸಿ ಸಲ್ಲಿಸಿದ ಅರ್ಜಿ,- ಮೇಲರ್ಜಿ. 2. (ನ್ಯಾಯಾಲಯಕ್ಕೆ) ಒಬ್ಬನು ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿದ ಅರ್ಜಿ.

ತಕಲಿ
ನೂಲನ್ನು ತೆಗೆಯುವ ಒಂದು ಉಪಕರಣ.

ತಕಾವಿ
ಸರ್ಕಾರವು ರೈತರಿಗೆ ಕೊಡುವ ಸಾಲದ ಹಣ,- ಮುಂಗಡ ಹಣ.

ತಕ್ಕ
1. ಯೋಗ್ಯನಾದವನು. 2. ಒಳ್ಳೆಯವನು. 3. ಹಿತೈಷಿ. 4. ಊರಿನ ಮುಖ್ಯಸ್ಥ.

ತಕ್ಕಡಿ
1. ವಸ್ತುಗಳ ಭಾರವನ್ನು ತೂಗುವ ಸಾಧನ. 2. ಮೋಸ.


logo