logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ರಂಗಕಾಱ
ಬಟ್ಟೆಗಳನ್ನು ಶುಭ್ರಮಾಡುವವನು.

ರಣಗೞ್ತಲೆ
ಯುದ್ಧಭೂಮಿಯಲ್ಲಿ ಧೂಳು, ಬಾಣಸಮುದಾಯ, ಧ್ವಜ ಮೊದಲಾದುವು ಗಳಿಂದ ಉಂಟಾಗುವ ಕತ್ತಲೆ.

ರನ್ನವೆಸ
ರತ್ನವನ್ನು ಕುಂದಣಿಸುವಿಕೆ.

ರನ್ನೆ
ಶ್ರೇಷ್ಠಳಾದವಳು.

ರಪಣ
1. ಆಸ್ತಿ. 2. ರಕ್ಷಿಸುವ ಸಾಧನ.

ರಪಾಟ
ವೇಗವಾದ ಓಟ.

ರಪ್ಪು
ಬಟ್ಟೆಯಲ್ಲಿ ತೂತುಬಿದ್ದ ಭಾಗವನ್ನು ದಾರದಿಂದ ಹೊಲಿದು ಜೋಡಿಸುವುದು.

ರಫ್ತು
ಒಂದು ದೇಶದಿಂದ ಪರದೇಶಕ್ಕೆ ಸರಕನ್ನು ಕಳುಹಿಸುವುದು.

ರಬಟಿ
ಅನಾವಶ್ಯಕವಾದ ಆಯಾಸ ವಾದ.

ರಬ್ಬಳಿಗೆ
ಜೋಳದ ಹಿಟ್ಟಿನಿಂದ ಮಾಡಿದ ಗಂಜಿ,- ಅಂಬಲಿ.


logo