logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ನಲವತ್ತು ಮೂರನೆಯ ಅಕ್ಷರ. 2. ಮೂರು ಎಂಬ ಸಂಖ್ಯೆಯ ಸಂಕೇತ.

ಲಂ(ಲಾಂ)ಟಾನ
ನೀರಿನ ಸೌಕರ್ಯ ವಿಲ್ಲದಿದ್ದರೂ ಪೊದೆಪೊದೆಯಾಗಿ ಬೆಳೆಯುವ, ಸಣ್ಣ ಹೂವುಗಳನ್ನು ಬಿಡುವ ಒಂದು ಬಗೆಯ ಸಸ್ಯ.

ಲಕಲಕಿಸು
ಥಳಥಳಿಸು.

ಲಂಕಿಣಿ
1. ಲಂಕೆಯ ಕಾವಲಿನ ರಾಕ್ಷಸಿ. 2. ದುಷ್ಟಹೆಂಗಸು.

ಲಕುಚ
1. ಗಜನಿಂಬೆ. 2. ಬೇಲ. 3. ಒಂದು ಬಗೆಯ ಕಾಡುಹಲಸು.

ಲಕುಟ
ಬಡಿಗೆ.

ಲಕೋಟೆ
1. ಪತ್ರವನ್ನು ಇಟ್ಟು (ಅಂಟಿಸಿ) ಕಳುಹಿಸುವ ಕಾಗದದ ಸಣ್ಣ ಚೀಲ. 2. ಅಂಟಿಸಿದ ಅಥವಾ ಅಂಟಿಸದೆ ಮುಚ್ಚಿರುವ ಅಂಚೆಯ ಪತ್ರ. 3. ಒಂದುಬಗೆಯ ಹಣ್ಣು.

ಲಕೋಟೆಹೋಳಿಗೆ
ಲಕೋಟೆಯ ಆಕಾರ ದಲ್ಲಿ ಮಡಿಸಿ ಮಾಡಿದ ಒಂದು ಬಗೆಯ ಹೋಳಿಗೆ.

ಲಕ್ಕ
1. ಒಂದು ಸಂಖ್ಯೆ. 2. ಗಮನ. 3. ದೃಷ್ಟಾಂತ. 4. ಅರಗು. 5. ಸುಂದರವಾದುದು.

ಲಕ್ಕಣ
1. ಗುರುತು. 2. ವ್ಯಾಖ್ಯೆ.


logo