logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಕನ್ನಡ ವರ್ಣಮಾಲೆಯ ಹದಿನೆಂಟನೆಯ ಅಕ್ಷರ.

ಘಟ
1. ಮಣ್ಣಿನ ದೊಡ್ಡ ಪಾತ್ರೆ,- ಕೊಡ. 2. ತಾಳವಾದ್ಯಗಳಲ್ಲಿ ಒಂದು. 3. ದೇಹ. 4. ಸೇರಿಕೆ. 5. ನಾಲ್ಕು ಕೊಳಗದಷ್ಟು ಅಳತೆ. 6. ಅಂಚು.

ಘಟಕ
1. (ಸಮಗ್ರವಾದ ಒಂದು ದೇಶ, ವಸ್ತು, ಸಂಸ್ಥೆ ಮೊದಲಾದುವುಗಳ) ಅಂಗ,- ವಿಭಾಗ,- ಪೂರಕಭಾಗ. 2. (ಸಂಘ, ಸಂಸ್ಥೆ ಮೊದಲಾದುವುಗಳ) ವ್ಯವಸ್ಥಾಪಕ. 3. (ಮದುವೆ, ವ್ಯಾಪಾರ ಮೊದಲಾದ ಕಾರ್ಯಗಳಲ್ಲಿ) ಎರಡು ಪಕ್ಷಗಳ ನಡುವೆ ವ್ಯವಹಾರವನ್ನು ಕುದುರಿಸುವವನು. 4.

ಘಟಕ
ಸೇರಿರುವ.

ಘಟಚಕ್ರ
ಬಾವಿಯಿಂದ ನೀರನ್ನು ಮೇಲೆತ್ತುವ ಒಂದು ಬಗೆಯ ಸಾಧನ.

ಘಟಚೇಟಿ
1. ನೀರು ಹೊರುವ ಸೇವಕಿ. 2. ಕುಂಟಣಿ.

ಘಟಚೇಟಿಕೆ
ಘಟಚೇಟಿ.

ಘಟನ(ನೆ)
1. ಸೇರಿಸುವಿಕೆ. 2. ಆಗುವಿಕೆ.

ಘಟಶ್ರಾದ್ಧ
ಬದುಕಿದವರೊಡನೆ ಸಂಬಂಧವನ್ನು ತ್ಯಜಿಸುವುದಕ್ಕಾಗಿ ಮಾಡುವ ಒಂದು ಬಗೆಯ ಶ್ರಾದ್ಧ.

ಘಟಸರ್ಪ
1. ಮಡಕೆಯ ಒಳಗಿರುವ ಸರ್ಪ,- ಹಾವು. 2. ಭಯಂಕರವಾದ ಹಾವು.


logo