logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಇಪ್ಪತ್ತನೆಯ ಅಕ್ಷರ. 2. ಆರು ಎಂಬ ಸಂಖ್ಯೆಯ ಸಂಕೇತ.

ಚಕಚಕಿಸು
ಹೊಳೆ.

ಚಕಬಂದಿ
ಮನೆ, ಹೊಲ ಮುಂತಾದ ಕ್ಷೇತ್ರಗಳ ಸೀಮಾವಿವರ,- ಗಡಿಗಳ ನಿರ್ದೇಶ.

ಚಕಮಕಿ
1. ಪರಸ್ಪರ ಉಜ್ಜುವುದರಿಂದ ಬೆಂಕಿಯುಂಟಾಗುವ ಒಂದು ಬಗೆಯ ಕಲ್ಲು. 2. ಜಗಳ.

ಚಕಾರ
1. `ಚ' ಎಂಬ ಅಕ್ಷರ. 2. ಒಂದು ಅಕ್ಷರದಷ್ಟು ಮಾತು.

ಚಕಾರವೆತ್ತು
ಒಂದು ಮಾತನ್ನಾದರೂ ಆಡು.

ಚಕಾರಿಸು
ಚಕಾರವೆತ್ತು.

ಚಕಿತ
1. ಬೆರಗುಗೊಂಡ ವ್ಯಕ್ತಿ. 2. ಗಾಬರಿಗೊಂಡವನು.

ಚಕಿತ
1. ಅಸ್ಥಿರವಾದ. 2. ಬೆರಗುಗೊಂಡ. 3. ಗಾಬರಿಗೊಂಡ.

ಚಕೋರ
1. ಬೆಳುದಿಂಗಳನ್ನೇ ಸೇವಿಸಿ ಬದುಕುವುದೆಂದು ನಂಬಲಾದ ಒಂದು ಪಕ್ಷಿ. 2. ಕಪಿಂಜಲಪಕ್ಷಿ.


logo