1. ಕನ್ನಡ ವರ್ಣಮಾಲೆಯ ನಲವತ್ತ ನಾಲ್ಕನೆಯ ಅಕ್ಷರ.
2. ನಾಲ್ಕು ಎಂಬ ಸಂಖ್ಯೆಯ ಸಂಕೇತ.
ವ
1. ಅಥವಾ.
2. ಮತ್ತು.
ವಂಕ
1. ಡೊಂಕು.
2. ಅಗಸೆ ಬಾಗಿಲು.
3. ದಾರಿ.
4. ಕುದುರೆಯನ್ನು ಏರುವಾಗ ಮತ್ತು ಸವಾರಿ ಮಾಡುವಾಗ ಕಾಲನ್ನಿಡಲು ಜೀನಿಗೆ ಅಳವಡಿಸಿರುವ ಬಳೆ.
5. ನೀರಿನ ಹರಿವು.
6. ಬದಿ.
ವಂಕದ(ದಾ,ಬಾ)ರ
(ಕೋಟೆ ಮುಂತಾದುವು ಗಳ ಸಮೀಪದಲ್ಲಿ ಮಾಡಿರುವ) ಚಿಕ್ಕ ಬಾಗಿಲು.
ವಕಾಲತ್ತು
1. ನ್ಯಾಯಾಸ್ಥಾನದಲ್ಲಿ ನ್ಯಾಯಕ್ಕಾಗಿ ವಾದ ಮಾಡುವ ಉದ್ಯೋಗ.
2. ಇನ್ನೊಬ್ಬರ ಪರವಾಗಿ ವಾದಿಸು ವುದು.
ವಂಕಿ
1. (ವಸ್ತ್ರ, ವಸ್ತು ಮುಂತಾದುವನ್ನು) ತೂಗುಹಾಕಲು ಅನುಕೂಲವಾಗಿರುವಂತಹ ಒಂದು ಬಗೆಯ ಕೊಕ್ಕೆ,- ಕೊಂಡಿ.
2. ಒಂದು ಬಗೆಯ ಆಭರಣ.
3. ಭರಣಿ.
4. ಬಾಗಿರುವ ಒಂದು ಬಗೆಯ ಆಯುಧ.
5. (ಹೆಂಗಸರು ಬಳಸುವ) ಸಂತಾನನಿರೋಧದ ಒಂದು ಸಾಧನ.