logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಮೂವತ್ತೊಂಭತ್ತನೆಯ ಅಕ್ಷರ. 2. (ಛಂದಸ್ಸಿ ನಲ್ಲಿ) ಮೂರು ಗುರುಗಳನ್ನು ಒಳಗೊಂಡಿರುವ ಒಂದು ಅಕ್ಷರ ಗಣ. 3. (ಸಂಗೀತದಲ್ಲಿ) ಸರಿಗಮಪಧನಿ ಎಂಬ ಸಪ್ತಸ್ವರಗಳಲ್ಲಿ ನಾಲ್ಕನೆಯದು. 4. ಐದು ಎಂಬ ಸಂಖ್ಯೆಯ ಸಂಕೇತ.

ಮ(ಮಾ)ಹಳ
ಭಾದ್ರಪದ ಕೃಷ್ಣ ಅಮಾವಾಸ್ಯೆ ಮತ್ತು ಅಂದು ಸರ್ವಪಿತೃಗಳಿಗೆ ಮಾಡುವ ಶ್ರಾದ್ಧ.

ಮಂಕ
1. ಕಳೆಗುಂದಿದವನು. 2. ದಡ್ಡ.

ಮಕ(ಖ)ಮಲ್ಲು
ನಯವಾದ ಹೊರ ಮೈಯುಳ್ಳ ಒಂದು ಬಗೆಯ ದಪ್ಪಬಟ್ಟೆ.

ಮಂಕಡ
1. ಕೋತಿ. 2. ಮಲ್ಲ ಯುದ್ಧದ ಒಂದು ಪಟ್ಟು,- ವರಸೆ.

ಮಂಕಣಿ
1. ಬಿದಿರಿನ ಸಾಧನ. 2. ಎತ್ತು, ಕತ್ತೆ ಮೊದಲಾದ ಪ್ರಾಣಿಗಳು ಸಾಮಾನುಗಳನ್ನು ಹೊರಲು ಅನುಕೂಲ ವಾಗುವಂತೆ ಬೆನ್ನಿನ ಎರಡು ಕಡೆಗೂ ಬರುವ ಹಾಗೆ ಬಿದಿರು, ಮರ ಕುಕ್ಕೆಯಂತಹ ಸಾಧನ.

ಮಕಮಕ
(ದೀಪ ಮೊದಲಾದುವು) ಮಂಕಾಗಿರುವುದನ್ನು ಸೂಚಿಸುವ ಒಂದು ಅನುಕರಣ ಶಬ್ದ.

ಮಕಮಕಿಸು
(ಬೆಳಕಿಲ್ಲದೆ) ಮಂಕಾಗು.

ಮಕರ
1. ಮೊಸಳೆ. 2. ಒಂದು ಜಾತಿಯ ಮೀನು. 3. ಕುಬೇರನ ನವನಿಧಿ ಗಳಲ್ಲಿ ಒಂದು. 4. ಮೀನಿನ ಗುರುತುಳ್ಳ ಧ್ವಜ. 5. ಜ್ಯೋತಿಷ್ಯದ ಹನ್ನೆರಡು ರಾಶಿಗಳಲ್ಲಿ ಒಂದು. 6. ದೇವತಾಮೂರ್ತಿ, ನವದಂಪತಿ ಗಳು, ಮೈನೆರೆದ ಹುಡುಗಿ ಮುಂತಾದವರನ್ನು ಕುಳ್ಳಿರಿಸಿ ಆರತಿಯೆತ್ತಲು ರಚಿಸಿದ ಮಂಟಪ

ಮಕರಕುಂಡಲ
ಮೊಸಳೆ ಅಥವಾ ಮೀನಿನ ಆಕಾರದ ಒಂದು ಬಗೆಯ ಕಿವಿಯ ಆಭರಣ.


logo