logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಅಂಜುಬುರುಕ
ಅಂಜುಕುಳಿ.

ಅಂಜುಬುರುಕಿ
ಹೆದರುವವಳು.

ಅಂಜುಮೆ
ಅಂಜುವಿಕೆ.

ಅಂಜುಲಿ(ಳಿ)
ಅಂಜಲಿ.

ಅಂಜೂರ
ಅತ್ತಿಯ ಜಾತಿಗೆ ಸೇರಿದ ಒಂದು ಬಗೆಯ ಮರ ಮತ್ತು ಅದರ ಹಣ್ಣು.

ಅಂಟಿಕ್ಕು
ನಾಟಿ ಹಾಕು.

ಅಂಟಿಗೆ ಪಂಟಿಗೆ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಮನೆಗೆ ಹೋಗಿ ದೀಪ ಹಚ್ಚುವ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಹಾಡು.

ಅಂಟಿಸು
1. ಹತ್ತಿಸು. 2. ಬೆಂಕಿ ದೀಪ ಮುಂತಾದುವನ್ನು ಹಚ್ಚು.

ಅಂಟು
1. ಮುಟ್ಟಿದರೆ ಹತ್ತಿಕೊಳ್ಳುವ ಸ್ವಭಾವ. 2. ಗೋಂದು. 3. ಕೊಳೆ. 4. ಮುಟ್ಟು. 5. ಕಸಿ ಮಾಡಲು ಉಪಯೋಗಿಸುವ ಸಸ್ಯದ ರೆಂಬೆ.

ಅಂಟು
1. ಮುಟ್ಟು. 2. ಸೇರು. 3. ಉಂಟಾಗು. 4. ಸವರು.


logo