logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಅಂತರ್ಗತ
ಮನಸ್ಸಿನ ಒಳಗಡೆ.

ಅಂತರ್ಗೃಹ
1. ಮನೆಯ ಒಳಭಾಗ. 2. ನೆಲಮಾಳಿಗೆ.

ಅಂತರ್ಜಾತೀಯ
ಬೇರೆ ಬೇರೆ ಜಾತಿಗಳ ನಡುವಣ.

ಅಂತರ್ದೇಶೀಯ ಪತ್ರ
ಒಂದು ದೇಶದ ಎಲ್ಲೆಯೊಳಗಿನ ಸ್ಥಳಗಳಿಗೆ ಮಾತ್ರ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಂಚೆಯ ಮೂಲಕ ಕಳುಹಿಸಬಹುದಾದ ಪತ್ರ.

ಅಂತರ್ಧಾನ
ಮಾಯವಾಗುವಿಕೆ.

ಅಂತರ್ಯಾಮಿ
ಅಂತರಂಗವನ್ನು ನಿಯಾಮಿಸತಕ್ಕವನು.

ಅಂತರ್ರಾಷ್ಟ್ರೀಯ
ಬೇರೆ ಬೇರೆ ರಾಷ್ಟ್ರಗಳಿಗೆ ಪರಸ್ಪರವಾಗಿ ಸಂಬಂಧಿಸಿದ.

ಅಂತರ್ವತ್ನಿ
ಬಸುರಿಯಾದ ಹೆಂಗಸು.

ಅಂತರ್ವಾಣಿ
1. ಶಾಸ್ತ್ರಗಳನ್ನು ಚೆನ್ನಾಗಿ ತಿಳಿದವನು. 2. ಅಂತರಾತ್ಮನ ಧ್ವನಿ.

ಅಂತವುರ
ಅಂತಃಪುರ.


logo