logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಅಂಗಚೇಷ್ಟೆ
ದೇಹದ ಚಲನೆ.

ಅಂಗಜ
ಮನ್ಮಥ.

ಅಂಗಜಾವ
ದೇಹ ರಕ್ಷಣೆಗಾಗಿ ಏರ್ಪಡಿಸಿದ ಸರದಿಯ ಕಾವಲು.

ಅಂಗಡಿ
1. ಪದಾರ್ಥಗಳನ್ನು ಮಾರುವ ಸ್ಥಳ. 2. ಆಡಂಬರ. 3. ಒರಳಿನ ಕುಳಿಯ ಸುತ್ತಲೂ ಇರುವ ಜಾಗ.

ಅಂಗಡಿಗೇರಿ
ಅಂಗಡಿಗಳು ಇರುವ ಬೀದಿ.

ಅಂಗಣ
ಮನೆಗೆ ಸೇರಿರುವ ಆವರಣದ ಬಯಲು - ಮುಂಭಾಗ.

ಅಂಗದ
1. ತೋಳಿನ ಬಳೆ. 2. ವಾಲಿಯ ಮಗ.

ಅಂಗನವಾಡಿ
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಯಡಿಯಲ್ಲಿ ನಡೆಸಲಾಗುವ ಶಿಶು ಸಂರಕ್ಷಣಾ ಕೇಂದ್ರ.

ಅಂಗನೆ
ಹೆಂಗಸು.

ಅಂಗಪ್ರದಕ್ಷಿಣ
ಉರುಳು ಸೇವೆ.


logo