logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಜೋ ವರ್ಣದ್ರವ್ಯಗಳು
(ರ) ಅಜೋಬೆನ್ಝೀನ್‌ನ ವ್ಯುತ್ಪನ್ನಗಳು. ಸಾಮಾನ್ಯವಾಗಿ ಹಳದಿ, ಕೆಂಪು ಅಥವಾ ಕಂದು ಬಣ್ಣದವು. ಆಮ್ಲೀಯ/ಪ್ರತ್ಯಾಮ್ಲೀಯ ಗುಣಗಳಿಂದ ಕೂಡಿರುತ್ತವೆ
azo dyes

ಅಜ್ಞೇಯತೆ
(ವೈ) ಸಂವೇದನಾನುಭವ ನಷ್ಟ. ವಸ್ತುವಿನ ಸ್ವರೂಪವನ್ನು ಶರೀರದ ಇಂದ್ರಿಯಗಳ ಮೂಲಕ ಗುರುತು ಹಿಡಿಯುವ ಸಾಮರ್ಥ್ಯ ನಷ್ಟ. ಅನಭಿಜ್ಞತೆ
agnosia

ಅಟ್ರೊಪೀನ್
(ವೈ) ಅಟ್ರೋಪ ಬೆಲ್ಲಡೊನ್ನ ಎಂಬ ಸಸ್ಯದಲ್ಲಿರುವ, ಡಿಎಲ್-ಟ್ರೋಪಿಲ್ ಟ್ರೋಪೇಟ್, ಟ್ರೋಪಿನ್ ಟ್ರೋಪೇಟ್ ಎಂಬ ಪರ್ಯಾಯ ನಾಮಧೇಯವುಳ್ಳ ಆಲ್ಕಲಾಯ್ಡ್. ಇದರ ರಾಸಾಯನಿಕ ಸಂಯೋಜನೆ C17H23NO7. ಇದು ಕಣ್ಣಿನ ಕನೀನಿಕೆಯನ್ನು ಹಿಗ್ಗಿಸಿ, ಕೇಂದ್ರ ನರಮಂಡಲದ ಮೇಲೆ ಶಾಮಕ ಪರಿಣಾಮವನ್ನು ಬೀರಿ, ಶ್ವಾಸನಾಳಗಳಲ್ಲಿನ ಸ್ರಾವವನ್ನು ಕುಗ್ಗಿಸಿ, ಹೃದಯ ಗತಿಯನ್ನು ಹೆಚ್ಚಿಸುವುದರಿಂದ ಶಸ್ತ್ರಕ್ರಿಯೆಯನ್ನು ಮಾಡುವ ಮೊದಲು ಅರಿವಳಿಕೆ ನೀಡುವ ಮುನ್ನ ಇದನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡುತ್ತಾರೆ
atropine

ಅಟ್ಲಾಸ್
(ಪ್ರಾ) ತಲೆಗೆ ಆಧಾರವಾಗಿದ್ದು ಬೆನ್ನುಮೂಳೆಯ ಅಗ್ರದಲ್ಲಿರುವ ಮೂಳೆ. ಕಶೇರುವಿನ ಅಗ್ರಾಸ್ಥಿ. (ಭೂ) ಭೂಪಟ ಗಳನ್ನು ಒಳಗೊಂಡಿರುವ ಪುಸ್ತಕ, ಭೂಪಟ ಪುಸ್ತಕ
atlas

ಅಡಕ
(ಸಾ) ಗಾಢ, ಸಾಂದ್ರ, ನಿಬಿಡ
compact

ಅಡಕೆ
(ಸ) ಅರೆಕ ಕಟಿಚು ಮರದ ಫಲ. ತವರು ಮಲೇಷ್ಯ. ಒಣಗಿದ ಹಣ್ಣಿನ ಸಿಪ್ಪೆ ಸುಲಿದಾಗ ದೊರೆಯುವ ಗಟ್ಟಿ ತಿರುಳು. ಹೋಳುಗಳಾಗಿ, ಚೂರುಗಳಾಗಿ ಮತ್ತು ಪುಡಿಯಾಗಿ ವೀಳ್ಯದೆಲೆ ಜೊತೆ ಮೆಲ್ಲಲು ಉಪಯೋಗ. ತಾಂಬೂಲದ ಅವಶ್ಯ ಅಂಗ
betelnut

ಅಡಲು
(ಭೂ) ಕಡಲಿನಲ್ಲಿ ತೆಟ್ಟೆ ನೀರಿನ ಹರವನ್ನು (ಲಗೂನ್) ಸುತ್ತುವರಿದು ಬೆಳೆದಿರುವ ಹವಳದ ದಿಬ್ಬ
atoll

ಅಡಾಪ್ಟರ್
(ತಂ) ವಿಶಿಷ್ಟ ನಮೂನೆಯ ಅಥವಾ ಅಳತೆಯ ಕೊನೆಗಳಿರುವ ವಿದ್ಯುತ್ ಸಲಕರಣೆಯನ್ನು ಇನ್ನೊಂದು ನಮೂನೆಯ ಅಥವಾ ಅಳತೆಯ ವಿದ್ಯುತ್ಪೂರಣ ಬಿಂದುವಿಗೆ ಜೋಡಿಸಲು ಬಳಸುವ ಸಹಾಯಕ ಉಪಕರಣ
adapter

ಅಡಿ
(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ=೧/೩ ಗಜ=೧೨ ಇಂಚುಗಳು = ೦.೩೦೪೮ ಮೀ. ಆರಂಭದಲ್ಲಿ ಮನುಷ್ಯ ಪಾದದ ಅಳತೆಯನ್ನು ಆಧಾರವಾಗಿ ಇಟ್ಟುಕೊಂಡಿದ್ದುದರಿಂದ ಈ ಹೆಸರು
foot

ಅಡಿಗಟ್ಟು
(ತಂ) ಹಡಗಿನ ಅಥವಾ ದೋಣಿಯ ಕಟ್ಟಣೆಗೆ ಆಧಾರವಾಗಿ, ತಳಭಾಗದಲ್ಲಿ ಉದ್ದಕ್ಕೂ ಹಾಕಿರುವ ಮರದ ದಿಮ್ಮಿ
keel


logo