(ರ) ರಾಸಾಯನಿಕ ಕ್ರಿಯೆಯ ಅಥವಾ ಸ್ಥಿತಿ ಪರಿವರ್ತನೆಯ ಪರಿಣಾಮವಾಗಿ ಒತ್ತಡ ಕಡಿಮೆಯಾಗಿ ಹಠಾತ್ತನೆ ಸಂಭವಿಸುವ ಹೊರ ಆವರಣದ ಒಳಕುಸಿತ (ನಿಪತನ)
implosion
ಅಂತರ
(ಗ) ದತ್ತವಾಗಿರುವ ಎರಡು ನೈಜ ಸಂಖ್ಯೆಗಳ ನಡುವಿನ ಸಮಸ್ತ ಸಂಖ್ಯೆಗಳ ಗಣ. ದತ್ತ ಸಂಖ್ಯೆಗಳಿಗೆ ಅಂತಿಮ ಬಿಂದುಗಳೆಂದು ಹೆಸರು. ಅವು a ಮತ್ತು b ಆಗಿದ್ದರೆ (a < b) ಅವೆರಡನ್ನೂ ಒಳಗೊಂಡಿರುವ ಅಂತರಕ್ಕೆ ಸಂವೃತಾಂತರವೆಂದೂ ಒಳಗೊಂಡಿರದ ಅಂತರಕ್ಕೆ ವಿವೃತಾಂತರವೆಂದೂ ಹೆಸರು. ಇವನ್ನು ಅನುಕ್ರಮವಾಗಿ [a, b]={x | a ≤ x ≤ b}, [a,b] ={x | a < x ≤ b}, ಎಡ ವಿವೃತವಾಗಿದ್ದರೆ [a, b]={x | a ≤ x < b}. ಬಲ ವಿವೃತವಾಗಿದ್ದರೆ [a, b] = {x | a ≤ x < b} ಎಂದು ಬರೆಯುತ್ತೇವೆ
interval
ಅಂತರಕೀಲಕ
(ಕಂ) ಕಂಪ್ಯೂಟರ್ನ ಯಂತ್ರಾಂಶ (ಹಾರ್ಡ್ವೇರ್) ಹಾಗೂ ತಂತ್ರಾಂಶ (ಸಾಫ್ಟ್ವೇರ್)ಗಳಲ್ಲಿ ಎರಡು ಅಥವಾ ಹೆಚ್ಚು ಪ್ರಕ್ರಿಯೆಗಳನ್ನು ಅನ್ಯೋನ್ಯಗೊಳಿಸಲು ಮತ್ತು ಒಂದು ಪ್ರಕ್ರಿಯೆ ಯುಕ್ತ ಸ್ಥಿತಿ ತಲುಪಿದ ನಂತರ
interlocking
ಅಂತರಕ್ರಿಯೆ
(ಭೌ) ೧. ಎರಡು ಕಣಗಳ ನಡುವೆ ಶಕ್ತಿ ವರ್ಗಾವಣೆ. ೨. ಕಣಗಳಿಗೂ ತರಂಗ ಚಲನೆಗೂ ನಡುವೆ ಶಕ್ತಿ ವಿನಿಮಯ. ೩. ಅಲೆಗಳ ನಡುವೆ ಶಕ್ತಿ ವರ್ಗಾವಣೆ. ೪. ಅನೇಕ ಕಣ, ಕಾಯ ಅಥವಾ ವ್ಯವಸ್ಥೆಗಳ ನಡುವೆ ಜರಗುವ ಕ್ರಿಯೆ. ಫಲವಾಗಿ ಅವುಗಳಲ್ಲೊಂದರಲ್ಲೋ ಹೆಚ್ಚಿನವಲ್ಲೋ ಕೆಲವು ಭೌತಿಕ ಅಥವಾ ರಾಸಾಯನಿಕ ವ್ಯತ್ಯಯಗಳು ಉಂಟಾಗುತ್ತವೆ. ಅಂತರ್ವರ್ತನ
interaction
ಅಂತರಗಂಗೆ
(ಸ) ಏರೇಸೀ ಕುಟುಂಬಕ್ಕೆ ಸೇರಿದ ಮತ್ತು ನೀರ ಮೇಲೆ ತೇಲುತ್ತ ಜೀವಿಸುವ ಜಲಸಸ್ಯ. ಉಷ್ಣವಲಯವಾಸಿ
pistia
ಅಂತರಗ್ನಿ ಶಿಲೆಗಳು
(ಭೂವಿ) ಭೂಮಿಯ ಅತ್ಯಂತ ಆಳದಲ್ಲಿ ಘನೀಭವಿಸಿದ ಅಗ್ನಿಶಿಲೆಗಳು. ಇವು ಅಂತಸ್ಸರಣಗಳಾಗಿ ಕಂಡುಬರುತ್ತವೆ. ಪ್ಲೂಟೋನಿಕ್ ಶಿಲೆಗಳು
plutonic rocks
ಅಂತರಗ್ರಹ ಯಾನ
(ಖ) ರಾಕೆಟ್, ಗಗನ ನೌಕೆ ಮತ್ತು ಉಪಗ್ರಹಗಳ ನೆರವಿನಿಂದ ಗ್ರಹದಿಂದ ಗ್ರಹಕ್ಕೆ ಮಾಡುವ ಪ್ರಯಾಣ
interplanetary travel
ಅಂತರಗ್ರೀವಾಸ್ಥಿ
(ಪ್ರಾ) ಕಶೇರುಕಗಳಲ್ಲಿ ಕೊರಳಿನ ಎಲುಬುಗಳ ಮಧ್ಯೆ ಇರುವ ಹಾಗೂ ಎದೆ ಅಸ್ಥಿಚಕ್ರ ರೂಪಿಸುವ ಒಂದು ಮೂಳೆ. ಅಂತರಜತ್ರು
interclavicle
ಅಂತರಪ್ರವರ್ಧ
(ಪ್ರಾ) ಸಂಧಿಪದಿಗಳಲ್ಲಿ ಹೊರ ಪೊರೆಯ ಒಳ ಬೆಳೆತ; ಇದು ರೂಪಿಸುವ ಆಂತರಿಕ ಅಸ್ಥಿಪಂಜರದ ಚೌಕಟ್ಟಿಗೆ ಸ್ನಾಯುಗಳು ಬಂಧಿತವಾಗಿರುವುವು