(ಸಂ) ಸಾಕಷ್ಟು ಪುರಾವೆಯನ್ನು ಆಧರಿಸಿ ಯಾವುದೇ ಗಣಿತ ಪರಿಕಲ್ಪನೆ ಕುರಿತಂತೆ ಮಂಡಿಸುವ ಮೌಲ್ಯ; ವಾಸ್ತವತೆಯ ಸನ್ನಿಹಿತ ಸ್ಥಿತಿ
estimate
ಅಂದಾಜುಪಟ್ಟಿ
(ಎಂ) ಎಂಜಿನಿಯರಿಂಗ್ ನಿರ್ಮಾಣ ಗಳಿಗೆ ತಗಲಬಹುದಾದ ವೆಚ್ಚವನ್ನು ತಿಳಿಯುವುದಕ್ಕೆ ತಯಾರಿಸುವ ವಿವರವಾದ ತಪಶೀಲು; ವಿವಿಧ ಕಾರ್ಯ ಚಟುವಟಿಕೆಗಳ ಪರಿಮಾಣಗಳನ್ನು ತಿಳಿದು ಅವಕ್ಕೆ ಪ್ರಚಲಿತವಿರುವ ದರಗಳನ್ನು ಅಳವಡಿಸಿ, ವೆಚ್ಚ ತಿಳಿಯುವರು
estimate
ಅಂಧಕಾರ ಯುಗ
(ಸಾ) ರೋಮನ್ ಸಾಮ್ರಾಜ್ಯ ಪತನ ಕಾಲದಿಂದ (ಕ್ರಿ.ಶ. ೩೯೫) ಆಧುನಿಕ ಯುಗದ ಸುಮಾರು ೧೪೫೦ರ ವರೆಗಿನ ಅವಧಿ; ಯೂರೋಪ್ ಖಂಡದಲ್ಲಿ ಅಜ್ಞಾನ ಮತ್ತು ಪ್ರಗತಿ ಶೂನ್ಯತೆ ವ್ಯಾಪಕವಾಗಿದ್ದ ಕಾಲ. ಕತ್ತಲೆ ಯುಗ, ಅಜ್ಞಾನ ಯುಗ
dark age
ಅಂಧಾಂತ್ರ ಉರಿಯೂತ
(ವೈ) ದೊಡ್ಡ ಕರುಳಿನ ಆದಿ ಕುರುಡು ಭಾಗದಲ್ಲಿ ಕಂಡುಬರುವ ಉರಿಯೂತ. ಮೊಂಡು ನಾಳದ ಉರಿಯೂತ. ಅಂಧಾಂತ್ರ ಶೋಭೆ. ಟಿಫ್ಲೈಟಿಸ್
typhlitis
ಅಂಬರ್
(ಭೂವಿ) ಕಾವಿಯಂಥ ಆದರೆ ಅದಕ್ಕಿಂತ ಕಪ್ಪು ಕಂದಿನ ಒಂದು ಸ್ವಾಭಾವಿಕ ವರ್ಣದ್ರವ್ಯ. ಕಂದುಕಾವಿ
umber
ಅಂಬರ್ಹಕ್ಕಿ
(ಪ್ರಾ) ಸ್ಟಾರ್ಕ್ ಮತ್ತು ಹೆರನ್ ಜಾತಿಗಳಿಗೆ ಸೇರಿದ ಆಫ್ರಿಕದ ಒಂದು ಪಕ್ಷಿ
umber bird
ಅಂಬಲಿ ಮೀನು
(ಪ್ರಾ) ಸೀಲೆಂಟರೇಟ (ಕುಟುಕು ಕಣವಂತ) ವರ್ಗಕ್ಕೆ ಸೇರಿದ, ತಿಳಿ ನೀಲಿ ಬಣ್ಣದ, ಕೊಡೆ ಆಕಾರದ ಮೀನು. ಪಾರಕ, ಲೋಳೆ ಲೋಳೆಯಾದ ದೇಹ ಸಂಪೂರ್ಣವಾಗಿ ವರ್ತುಲವಾಗಿ ಎಂಟು ಕಚ್ಚುಗಳಿಂದ ಎಂಟು ಭಾಗಗಳಾಗಿ ವಿಭಾಗಿಸ ಲ್ಪಟ್ಟಿದೆ. ಅಂಟುವ ತಂತುಗಳಿರುತ್ತವೆ. ಲೋಳೆ ಮೀನು, ಜೆಲ್ಲಿ ಮೀನು
jelly fish
ಅಂಶ
(ಗ) ಭಿನ್ನರಾಶಿಯಲ್ಲಿ ವಿಭಾಜಕ ರೇಖೆಯ ಮೇಲಿನ ಸಂಖ್ಯೆ. ಕೆಳಗಿನ ಸಂಖ್ಯೆಯ ಹೆಸರು ಛೇದ. ಛೇದದಿಂದ ಸೂಚಿತವಾದ ಭಾಗಗಳಲ್ಲಿ ಎಷ್ಟು ಭಾಗಗಳನ್ನು ತೆಗೆದುಕೊಂಡಿದೆ ಎಂಬುದನ್ನು ಅಂಶ ಸೂಚಿಸುತ್ತದೆ. ಉದಾ : ¾ ರಲ್ಲಿ ಅಂಶ ೩, ಛೇದ ೪. ನೋಡಿ: ಛೇದ