(ತಂ) ಪ್ರವಾಹವು ವಿದ್ಯುತ್ ಸಲಕರಣೆಯನ್ನು ಪ್ರವೇಶಿಸುವ ಅಥವಾ ಅದರಿಂದ ನಿರ್ಗಮಿಸುವ ತುದಿ
terminal
ಅಂತಿಮ ಪೀಡನ
(ತಂ) ವಸ್ತುವನ್ನು ಮುರಿಯಲು ಅದರ ಮೇಲೆ ಏಕಮಾನ ವಿಸ್ತಾರದಲ್ಲಿ ಹೇರ ಬೇಕಾದ ಕನಿಷ್ಠ ಬಲ ಮತ್ತು ಬಿರಿತ ಬಿಂದುವಿನಲ್ಲಿ ವಸ್ತುವಿನ ಅಡ್ಡಕೊಯ್ತದ ಮೂಲ ವಿಸ್ತೀರ್ಣ ಇವುಗಳ ದಾಮಾಷಾ. ಬಿಗಿತ
ultimate stress
ಅಂತಿಮ ಭಾರ
(ತಂ) ಪ್ರೇಷಣಮಾರ್ಗಕ್ಕೆ ಅಥವಾ ಇತರ ಸಲಕರಣೆಗೆ ತರಂಗ ಪ್ರತಿಫಲನಗಳನ್ನು ನಿವಾರಿಸುವ ಸಲುವಾಗಿ ಸಂಯೋಜಿಸಿದ ಹೊರೆ. ಇದು ಆ ಮಾರ್ಗದ ಅಥವಾ ಸಲಕರಣೆಯ ವೈಲಕ್ಷಣ್ಯಕ್ಕೆ ಹೊಂದುವಂತಿರಬೇಕು
termination
ಅಂತಿಮ ವೇಗ
(ಭೌ) ೧. ವಿಮಾನ ಗಳಿಸ ಬಹುದಾದ ಗರಿಷ್ಠ ವೇಗ. ಇದನ್ನು ನಿರ್ಧರಿಸುವುದು ವಿಮಾನದ ಮೇಲೆ ವರ್ತಿಸುವ ಜಗ್ಗು ಬಲ ಮತ್ತು ನೂಕು ಬಲ. ೨. ಯಾವುದೇ ಮಾಧ್ಯಮದಲ್ಲಿ ಮುಕ್ತವಾಗಿ ಬೀಳುತ್ತಿರುವ ವಸ್ತು ತಳೆಯುವ ಗರಿಷ್ಠ ಸ್ಥಿರ ವೇಗ
terminal velocity
ಅಂತಿಮ ಹಂತ
(ರ) ರಾಸಾಯನಿಕ ಕ್ರಿಯೆ ಸರಪಳಿಯಾಗಿ ಮುಂದುವರಿಯುವಾಗ ಆ ಸರಪಳಿ ಕ್ರಿಯೆ ಮುಕ್ತಾಯಗೊಳ್ಳುವ ಹಂತ
termination
ಅಂತ್ರಛೇದನ
(ವೈ) ಕರುಳಿನ ಒಂದು ಭಾಗವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದುಹಾಕುವುದು
enterectomy
ಅಂತ್ರಪುಚ್ಛ
(ವೈ) ದೊಡ್ಡ ಕರುಳಿನ ಅಂತ್ಯಭಾಗದಲ್ಲಿ ಜೋತು ಬಿದ್ದಿರುವ ಹುಳುರೂಪದ ಕರುಳಿನ ಭಾಗ. ಹುಳು ಗರುಳು. ಕರುಳು ಬಾಲ. ಹೊರಬೆಳೆತ. ಅನುಬಂಧ. ಅಪೆಂಡಿಕ್ಸ್
appendix
ಅಂತ್ರಪುಚ್ಛ ಉರಿಯೂತ
(ವೈ) ಅಪೆಂಡಿಸೈಟಿಸ್. ಕರುಳಬಾಲದ ಉರಿಯೂತ. ಉರಿಯೂತವು ತೀವ್ರವಾಗಿ ತಲೆದೋರಬಹುದು. ತೀವ್ರ ಅಂತ್ರಪುಚ್ಛ ಉರಿಯೂತಕ್ಕೆ (ಕರುಳಬಾಲ ರೋಗಕ್ಕೆ) ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದ್ದು, ಅದರ ನಾಳದಲ್ಲಿ ಸಿಕ್ಕಿ ಹಾಕಿಕೊಂಡ ಮಲವು ಕಲ್ಲು ಉರಿಯೂತವನ್ನು ತ್ವರಿತ ಗೊಳಿಸುತ್ತದೆ
appendicitis
ಅಂತ್ರಪುಚ್ಛ ಛೇದನ
(ವೈ) ಶಸ್ತ್ರಕ್ರಿಯೆ ಮೂಲಕ ಅಂತ್ರಪುಚ್ಛವನ್ನು ಕತ್ತರಿಸಿ ತೆಗೆಯುವುದು
appendectomy
ಅಂತ್ರವ್ಯಾಧಿ
(ವೈ) ಗೋಧಿಯಲ್ಲಿರುವ ಗ್ಲೂಟೆನ್ ಎಂಬ ಪ್ರೋಟೀನು ಕೆಲವರ ಕರುಳಿನಲ್ಲಿ ಅಸಹಜ ಬದಲಾವಣೆ ಗಳನ್ನು ಉಂಟುಮಾಡಿ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಯನ್ನು ಉಂಟುಮಾಡಿ ಸಾವಿಗೂ ಕಾರಣವಾಗಬಹುದು. ಗ್ಲೂಟೆನ್ಮುಕ್ತ ಆಹಾರವನ್ನು ನೀಡುವುದರಿಂದ ಈ ಮಾರಕರೋಗವನ್ನು ತಡೆಗಟ್ಟಬಹುದು. ಸೀಲಿಯಾಕ್ ರೋಗ. ಅರೆಜೀರ್ಣಕ ರೋಗ