(ಜೀ) ಸಹಜ ಉಸಿರಾಟದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತಿತರ ಅವಶ್ಯ ವಸ್ತುಗಳನ್ನು ಗಾಳಿಯಿಂದ ಪಡೆಯಲಾಗದ ಸ್ಥಿತಿಯಲ್ಲಿ ಸಸ್ಯಗಳೂ ಪ್ರಾಣಿಗಳೂ ಅವನ್ನು ಆಂತರಿಕವಾಗಿಯೇ ಉತ್ಪಾದಿಸಿಕೊಳ್ಳುವ ಉಸಿರಾಟ ಪ್ರಕ್ರಿಯೆ
intramolecular respiration
ಅಂತಃಕರ್ಷಿ
(ಪ್ರಾ) ಮತ್ತೊಂದು ಭಾಗವನ್ನು ಒಳಕ್ಕೆಳೆದು ಕೊಂಡು ಅದರ ಮೇಲೆ ಕೊಳವೆಯಂಥ ಆವರಣ ರೂಪಿಸುವ (ಹುಳುವಿನ ಅಥವಾ ಪ್ರಾಣಿಯ) ಶರೀರದ ಯಾವುದೇ ಭಾಗ ಅಥವಾ ರಚನೆ. (ಮವೈ) ಅಂತರ್ಮುಖಿ. ತನ್ನದೇ ಆದ ಆಲೋಚನೆ ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಅಥವಾ ವಸ್ತುಗಳ ಬಗ್ಗೆ ಆಸಕ್ತಿ ಇಲ್ಲದ ವ್ಯಕ್ತಿ
introvert
ಅಂತಃಕೋಶೀಯ
(ಜೀ) ಜೀವಕೋಶದ ಒಳಗೆ ನೆಲೆಯಾಗಿರುವ ಅಥವಾ ನಡೆಯುವ
intracellular
ಅಂತಃಚಕ್ರಜ
(ಗ) ಸ್ಥಿರ ವೃತ್ತದೊಳಗೊಂದು ಚರ ವೃತ್ತ ಉರುಳುವಾಗ ಅದರ ಪರಿಧಿಯಲ್ಲಿಯ ಯಾವುದೇ ಬಿಂದು ರೇಖಿಸುವ ಸಮತಲ ವಕ್ರರೇಖೆ. ಹೈಪೊಸೈಕ್ಲಾಯ್ಡ್
hypocycloid
ಅಂತಃಪರಪುಷ್ಟ
(ಪ್ರಾ) ಆತಿಥೇಯ ಜೀವಿಯ ದೇಹದೊಳಗೆ ಜೀವಿಸುವ ಪರೋಪಜೀವಿ
endoparasite
ಅಂತಃಪ್ರಕಾಶ
(ಭೌ) ಸಾಂದ್ರತೆಯಲ್ಲಿಯ ಯಾವುದೇ ಅಪಸಾಮ್ಯತೆಯನ್ನು ಪತ್ತೆ ಹಚ್ಚುವ ಸಲುವಾಗಿ ಕುಹರ ಭಿತ್ತಿಗಳ ರೂಪರೇಖೆಗಳು ಸ್ಪಷ್ಟವಾಗಿ ಕಾಣುವಂತೆ ಮಾಡಲು ಅವುಗಳ ಒಳಕ್ಕೆ ಪ್ರಬಲ ಬೆಳಕನ್ನು ಹಾಯಿಸುವುದು
transillumination
ಅಂತಃಪ್ರವೇಶ
(ವೈ) ಒಂದು ಶರೀರದ ಒಂದು ಭಾಗ ಮತ್ತೊಂದು ಶರೀರದ ಒಂದು ಭಾಗದೊಳಗೆ, ಮುಖ್ಯವಾಗಿ ಪುರುಷ ಜನನಾಂಗ ಸ್ತ್ರೀ ಜನನಾಂಗದೊಳಗೆ, ತೂರುವುದು. ಒಳತೂರಿಕೆ
intromission
ಅಂತಃಫಲಭಿತ್ತಿ
(ಸ) ಹಣ್ಣಿನ ಬೀಜವನ್ನು ಆವರಿಸಿರುವ ಕವಚದಲ್ಲಿ ಎರಡು ಅಥವಾ ಹೆಚ್ಚು ಪದರಗಳಿದ್ದರೆ ಅವುಗಳಲ್ಲಿ ಒಳಪದರ
endocarp
ಅಂತಃಸರಣ
(ಸ) ಪರಾಸರಣಕ್ಕಿಂತ ಹೆಚ್ಚಾಗಿ ಮ್ಯಾಟ್ರಿಕ್ಸ್ ಪೊಟೆನ್ಷಿಯಲ್ನ ವ್ಯತ್ಯಾಸದ ಪ್ರೇರಣೆಯಿಂದಾಗಿ ಸಸ್ಯಗಳು ನೀರನ್ನು ಹೀರಿಕೊಳ್ಳುವ ಕ್ರಿಯೆ. ಬೀಜಗಳು ನೀರು ಹೀರಿಕೊಂಡು ಉಬ್ಬುವ, ಮೊಳೆಯುವಿಕೆಯ ಮೊದಲ ಹೆಜ್ಜೆ
imbibition
ಅಂತಃಸ್ಪರ್ಶಕ ವೃತ್ತ
(ಗ) ತ್ರಿಭುಜದ ಮೂರು ಭುಜಗಳನ್ನೂ ಆಂತರಿಕವಾಗಿ ಸ್ಪರ್ಶಿಸುವ ವೃತ್ತ. ಇದರ ಕೇಂದ್ರ ಅಂತಃಕೇಂದ್ರ. ಇದು ಕೋನ ಸಮದ್ವಿಭಾಜಕ ಗಳ ಸಂಗಮ ಬಿಂದು. ಅಂತಃ ಕೇಂದ್ರದಿಂದ ಯಾವುದೇ ಭುಜಕ್ಕೆ ಎಳೆದ ಲಂಬ ಈ ವೃತ್ತದ ತ್ರಿಜ್ಯ. ಇದಕ್ಕೆ ಅಂತಃತ್ರಿಜ್ಯವೆಂದು ಹೆಸರು. ನೋಡಿ: ಬಹಿರ್ವೃತ್ತ