(ಖ) ವಿಶ್ವದಲ್ಲಿ ಎಲ್ಲ ಕಾಯಗಳನ್ನೂ ಆವರಿಸಿರುವ ಬಲುಮಟ್ಟಿಗೆ ನಿರ್ದ್ರವ್ಯವಾದ ಪ್ರದೇಶ. ಭೂಮಿಯ ವಾತಾವರಣದ ಎಲ್ಲೆಯಾಚೆ ಇರುವ ವಿಶ್ವದ ಭಾಗ. ವ್ಯೋಮ. ಬಾಹ್ಯಾಕಾಶ
space
ಅಂತರಿಕ್ಷ ಉಡುಪು
(ಅಂವಿ) ನಿರ್ವಾತ, ಉಷ್ಣತಾ ವೈಪರೀತ್ಯ ಮುಂತಾದ ಅನಾನು ಕೂಲಗಳಿರುವ ಅಂತರಿಕ್ಷ ಪರಿಸರ ದಲ್ಲಿ ಕಾರ್ಯನಿರ್ವಹಿಸುವ ಗಗನ ಯಾತ್ರಿಯನ್ನು ರಕ್ಷಿಸುವ ವಿಶೇಷ ಉಡುಪು. ಇದರಲ್ಲಿ ಒತ್ತಡಪೂರಿತ ಆಕ್ಸಿಜನ್ ಲಭ್ಯವಿರುತ್ತದೆ. ನಿಶ್ವಸಿತ ಗಾಳಿಯನ್ನು ಶುದ್ಧೀಕರಿಸುವ ವ್ಯವಸ್ಥೆಯೂ ಇರುತ್ತದೆ
space suit
ಅಂತರಿಕ್ಷ ನಿಲ್ದಾಣ
(ಅಂವಿ) ಗಗನಯಾತ್ರಿಗಳ ದೀರ್ಘಕಾಲದ ವಾಸಕ್ಕೆ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಅನುವು ಮಾಡಿಕೊಡಲು ನಿರ್ಮಿಸಲಾದ ಒಂದು ದೊಡ್ಡ ಅಂತರಿಕ್ಷ ನೌಕೆ. ಭೂಮಿ ಯಿಂದ ತಂದ ವಿವಿಧ ಭಾಗ ಗಳನ್ನು ಜೋಡಿಸಿ ನಿರ್ಮಿಸಿದ ಈ ಅಂತರಿಕ್ಷ ನಿಲ್ದಾಣಗಳು ಭೂಮಿಯನ್ನು ಕೆಲವೇ ನೂರು ಕಿ.ಮೀ. ಎತ್ತರದಲ್ಲಿ ಸುತ್ತುತ್ತಿರುತ್ತವೆ. ಉದಾ: ಸ್ಕೈಲ್ಯಾಬ್, ಮೀರ್, ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ
space station
ಅಂತರಿಕ್ಷ ಷಟಲ್
(ಅಂವಿ) ಭೂಮಿಯಿಂದ ಕಕ್ಷೆಗೆ ಹೋಗುವ ಮತ್ತು ಮತ್ತೆ ಭೂಮಿಗೆ ಹಿಂದಿರುಗುವ ಮಾನವ ಚಾಲಿತ ಸಾರಿಗೆ ವ್ಯವಸ್ಥೆ. ಗಗನಯಾತ್ರಿಗಳನ್ನು ಮತ್ತು ಉಪಗ್ರಹ, ಸ್ವಯಂಚಾಲಿತ ಅಂತರಿಕ್ಷ ನೌಕೆ ಮುಂತಾದ ಸರಕುಗಳನ್ನು
space shuttle
ಅಂತರುಷ್ಣಕ
(ರ) ಉಷ್ಣವನ್ನು ಹೀರಿಕೊಳ್ಳುವ. ಉಷ್ಣ ಶೋಷಣೆಯೊಂದಿಗೆ ಜರಗುವ ರಾಸಾಯನಿಕ ಕ್ರಿಯೆ. ಎಂಡೊಥರ್ಮಿಕ್. ನೋಡಿ: ಬಹಿರುಷ್ಣಕ (ಎಕ್ಸೊಥರ್ಮಿಕ್)
endothermic
ಅಂತರ್ಜನ್ಯ ವರ್ತನೆ
(ಜೀ) ಹುಟ್ಟಿನಿಂದ ಬಂದ ಪ್ರವೃತ್ತಿ. ಕಲಿಯದೆ ವಂಶ ಪಾರಂಪರ್ಯವಾಗಿ ಹರಿದು ಬರುವ ನಡವಳಿಕೆ. ಉದಾ: ಹಕ್ಕಿಗಳು ಹಾಡುವುದು
innate behaviour
ಅಂತರ್ಜಲ
(ಭೂವಿ) ನೆಲದಡಿಯಲ್ಲಿ ಶಿಲಾಸ್ತರಗಳ ನಡುವೆ ಶೇಖರವಾದ ನೀರು. ಇದು ಭೂಮಿಯ ಆಳವಾದ ಆಕರ ಗಳಿಂದ ಮೇಲೆ ಬಂದದ್ದಾಗಿರಬಹುದು, ಇಲ್ಲವೇ ಮಳೆ ನೀರು ಭೂಮಿ ಯೊಳಗೆ ಜಿನುಗಿದುದರ ಪರಿಣಾಮವಾಗಿರಬಹುದು. ಭೂಜಲ
ground water
ಅಂತರ್ಜಲ ಮಟ್ಟ
(ಭೂವಿ) ನೀರಿನಿಂದ ಪರ್ಯಾಪ್ತ ಗೊಂಡಿರುವ ಭೂಸ್ತರ. ನೆಲಮಟ್ಟಕ್ಕಿಂತ ಜಲಮಟ್ಟ ಮೇಲೆ ಬಂದಾಗ ಒರತೆ, ಹೊಳೆ, ಕೆರೆ ಪ್ರಕಟವಾಗುತ್ತವೆ. ಜಲಮಟ್ಟ
water table
ಅಂತರ್ದರ್ಶಕ
(ವೈ) ನೋಡಿ : ಎಂಡೊಸ್ಕೋಪ್
endoscope
ಅಂತರ್ದಹನ ಎಂಜಿನ್
(ಭೌ) ಉಷ್ಣಶಕ್ತಿಯನ್ನು ಚಲನಶಕ್ತಿಯಾಗಿ ಮಾರ್ಪಡಿಸುವ ಸಾಧನ. ಅಗತ್ಯ ಎನಿಸುವಷ್ಟು ವಾಯುಭರಿತ ಇಂಧನ (ಪೆಟ್ರೋಲ್, ಡೀಸೆಲ್ ಮುಂತಾದವು) ಸೀಮಿತ ಆವರಣ ದೊಳಗೆ ದಹನಗೊಂಡಾಗ ಉತ್ಪತ್ತಿ ಯಾಗುವ ಅಧಿಕ ಪ್ರಮಾಣದ ದಹನಾನಿಲಗಳು ಆ ಆವರಣಕ್ಕೆ ಲಗತ್ತಿಸಿದ ಕೊಂತವನ್ನು ಅದುಮಿ ಚಲಿಸುವಂತೆ ಮಾಡುತ್ತವೆ. ಹೀಗೆ ಇಂಧನ ದಹನದಿಂದ ಚಲಿಸುವ ಶಕ್ತಿ, ಕೊಂತದ ಚಲನೆಯಲ್ಲಿ ಯಾಂತ್ರಿಕ ಶಕ್ತಿಯಾಗಿ ಮಾರ್ಪಟ್ಟಿರುತ್ತದೆ