logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Zip file
ಜ಼ಿಪ್ ಫೈಲ್
(ರೂಪಿಸಬೇಕಿದೆ)
ಮೂಲ ಕಡತದ ಗಾತ್ರವನ್ನು ಕಡಿಮೆಮಾಡುವ ಉದ್ದೇಶದಿಂದ ನಿರ್ದಿಷ್ಟ ತಂತ್ರಾಂಶ ಬಳಸಿ ಉಳಿಸಿಡಲಾದ ಅದರ ಪ್ರತಿ
ಡಿಜಿಟಲ್ ರೂಪದ ಪ್ರತಿ ಕಡತಕ್ಕೂ ಅದರಲ್ಲಿರುವ ಮಾಹಿತಿಯ ಪ್ರಮಾಣಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಗಾತ್ರ ಇರುತ್ತದೆ. ಬಿಟ್-ಬೈಟ್‌ಗಳಲ್ಲಿ ಅಳೆಯುವುದು ಈ ಗಾತ್ರವನ್ನೇ. ಕಡತದ ಗಾತ್ರ ದೊಡ್ಡದಾದರೆ ಅದನ್ನು ಉಳಿಸಿಡಲು ಹೆಚ್ಚಿನ ಸ್ಥಳಾವಕಾಶ ಬೇಕು. ನಾವೇ ಉಳಿಸಿಟ್ಟುಕೊಳ್ಳುವುದಾದರೆ ಸರಿ; ಆದರೆ ಬೇರೆಯವರಿಗೆ ಕಳುಹಿಸಬೇಕೆಂದರೆ ತೀರಾ ದೊಡ್ಡ ಕಡತಗಳನ್ನು ಕಳುಹಿಸುವುದು ಕಷ್ಟ. ಇದಕ್ಕಾಗಿ ಬಳಕೆಯಾಗುವುದೇ ಕಡತದ ಗಾತ್ರವನ್ನು ಕಡಿಮೆಮಾಡುವ 'ಕಂಪ್ರೆಶನ್' ತಂತ್ರ. ಸಾಮಾನ್ಯ ಬಳಕೆಯಲ್ಲಿ "ಜಿಪ್ ಮಾಡುವುದು" ಎಂದು ಗುರುತಿಸುವುದು ಇದನ್ನೇ. ಯಾವುದೇ ಕಡತ ಮೆಮೊರಿಯಲ್ಲಿ ಶೇಖರವಾಗುವುದು ಹೇಗೆ? ಅದು ಮೊದಲಿಗೆ ಕಂಪ್ಯೂಟರಿಗೆ ಅರ್ಥವಾಗುವ ಒಂದು-ಸೊನ್ನೆಗಳ ಬೈನರಿ ಭಾಷೆಗೆ ಬದಲಾಗುತ್ತದೆ. ಹೀಗೆ ಬದಲಾಗುವಾಗ ಅದರಲ್ಲಿ ಒಂದೇ ಮಾಹಿತಿ ಹಲವೆಡೆ ಪುನರಾವರ್ತನೆಯಾಗಿರುವುದು ಸಾಧ್ಯ. ಅದೇ ಮಾಹಿತಿಯನ್ನು ಮತ್ತೆಮತ್ತೆ ಉಳಿಸುವ ಬದಲು ಒಮ್ಮೆ ಮಾತ್ರ ಉಳಿಸಿಟ್ಟು ಅದೇ ಮಾಹಿತಿ ಎಲ್ಲೆಲ್ಲಿ ಬರಬೇಕು ಎನ್ನುವ ಲೆಕ್ಕ ಇಟ್ಟುಕೊಂಡರೆ ಕಡತದ ಗಾತ್ರ ಕಡಿಮೆಯಾಗುತ್ತದಲ್ಲ, "ಜಿಪ್ ಮಾಡಲು" ಬಳಕೆಯಾಗುವ ಹಲವು ತಂತ್ರಾಂಶಗಳು ಇದೇ ತಂತ್ರ ಬಳಸುತ್ತವೆ; ಮೂಲ ಕಡತವನ್ನು ಜಿಪ್ ಫೈಲಿನಿಂದ ಹೊರತೆಗೆಯುವಾಗ ಈ ಹಿಂದೆ ಉಳಿಸಿಟ್ಟುಕೊಂಡ ಮಾಹಿತಿ ಬಳಸಿ ಅದರ ಮರುಸೃಷ್ಟಿ ಮಾಡುತ್ತವೆ! ಕಡತಗಳಲ್ಲಿ ಹೀಗೆ ಪುನರಾವರ್ತನೆಯಾಗಿರುವ ಮಾಹಿತಿಯ ಪ್ರಮಾಣ ಕಡಿಮೆಯಿದ್ದರೆ ಅವನ್ನು ಜಿಪ್ ಮಾಡಿದರೂ ಗಾತ್ರದಲ್ಲಿ ಗಮನಾರ್ಹ ಬದಲಾವಣೆಯೇನೂ ಕಾಣುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ (ಉದಾ: ಚಿತ್ರಗಳು) ಕಡತದ ಗಾತ್ರ ಕಡಿಮೆಮಾಡಲು ಬೇರೆ ಬೇರೆ ರೀತಿಯ ಕಂಪ್ರೆಶನ್ ವಿಧಾನಗಳು ಬಳಕೆಯಾಗುತ್ತವೆ.
">


logo