logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಶಂಖವಾದ್ಯಮಾಡು
1. ಬೊಬ್ಬೆಹಾಕು. 2. (ಅಳುವಾಗ) ಬಾಯಿ ಬಡಿದುಕೊಳ್ಳು.

ಶಂಖಿನಿ
1. ಅಪ್ಸರೆ. 2. ಮುತ್ತಿನ ಚಿಪ್ಪು. 3. ದೇಹದಲ್ಲಿರುವ ಪ್ರಧಾನವಾದ ನಾಡಿಗಳಲ್ಲಿ ಒಂದು. 4. ಕಡಿಯಾಲದ ಗಿಡ. 5. (ಕಾಮಶಾಸ್ತ್ರದ ರೀತಿಯಲ್ಲಿ) ನಾಲ್ಕು ಬಗೆಯ ಸ್ತ್ರೀಜಾತಿಗಳಲ್ಲಿ ಒಂದು ಮತ್ತು ಆ ಜಾತಿಗೆ ಸೇರಿದ ಹೆಣ್ಣು.

ಶಠ
1. ದುಷ್ಟ. 2. ಮೋಸ. 3. ಕಾವ್ಯಮೀಮಾಂಸೆಯಲ್ಲಿ ಶೃಂಗಾರನಾಯಕರಲ್ಲಿ ಒಂದು ವಿಧ.

ಶಠ
ಕೆಟ್ಟತನದ.

ಶಣಸೂತ್ರ
ಸೆಣಬಿನ ಹಗ್ಗ.

ಶತ
1. ಒಂದು ಸಂಖ್ಯಾವಾಚಕ. 2. ಬಹಳ. 3. ಸಂಖ್ಯೆಯ ಸ್ಥಾನಗಳಲ್ಲಿ ಮೂರನೆಯ ಸ್ಥಾನ ಮತ್ತು ಮೂರು ಅಂಕೆಗಳನ್ನುಳ್ಳ ಒಂದು ಸಂಖ್ಯೆ.

ಶತಕ
1. ನೂರರ ಮೊತ್ತ. 2. ನೂರು ವರ್ಷಗಳ ಕಾಲಮಾನ. 3. ಸಾಮಾನ್ಯವಾಗಿ ನೂರು ಪದ್ಯಗಳುಳ್ಳ ಒಂದು ಕೃತಿ.

ಶತಕೋಟಿ
1. ಇಂದ್ರನ ಆಯುಧ. 2. ಒಂದು ಸಂಖ್ಯೆ. 3. ಸಂಖ್ಯೆಯ ಸ್ಥಾನಗಳಲ್ಲಿ ಹತ್ತನೆಯ ಸ್ಥಾನ ಮತ್ತು ಹತ್ತು ಅಂಕೆಗಳಿರುವ ಒಂದು ಸಂಖ್ಯೆ.

ಶತಕ್ರತು
1. ನೂರು ಯಾಗ. 2. ನೂರು ಯಾಗಗಳನ್ನು ಮಾಡಿದವನು.

ಶತಘ್ನಿ
1. ತೋಫು. 2. ಚೂಪಾದ ಮೊನೆಗಳಿಂದ ಕೂಡಿದ. 3. ಗುಂಡಾಗಿರುವ ಒಂದು ಬಗೆಯ ಆಯುಧ.


logo