logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಶಕ್ರತನುಜ
1. ಇಂದ್ರನ ಮಗ. 2. ಜಯಂತ. 3. ಅರ್ಜುನ. 4. ವಾಲಿ.

ಶಕ್ರುಧನು
ಶಕ್ರಚಾಪ.

ಶಕ್ವರ
ಎತ್ತು.

ಶಕ್ವರಿ
1. ವರ್ಣಛಂದಸ್ಸಿನ ಇಪ್ಪತ್ತಾರು ಬಗೆಯ ಛಂದಸ್ಸಿನಲ್ಲಿ, ಪಾದವೊಂದಕ್ಕೆ ಹದಿನಾಲ್ಕು ಅಕ್ಷರಗಳುಳ್ಳ ಒಂದು ಸಮವೃತ್ತ. 2. ಹಸು.

ಶಂಖ
1. ಸಮುದ್ರದಲ್ಲಿರುವ ಒಂದು ಬಗೆಯ ಜಲಚರಜೀವದ ಗೂಡು,- ಚಿಪ್ಪು. 2. ಮಂಗಳಕರವಾದ ಪಂಚಮಹಾವಾದ್ಯಗಳಲ್ಲಿ ಒಂದು. 3. ಕೆನ್ನೆಯ ಎಲುಬು. 4. ಹಣೆಯ ಮೂಳೆ. 5. ಕುಬೇರನ ನವನಿಧಿಗಳಲ್ಲಿ ಒಂದು. 6. ಒಂದು ಬಗೆಯ ಸುಗಂಧದ್ರವ್ಯ. 7. ಬಿಳಿದು. 8. ಸೇನಾರಚನೆಯ ಒಂz

ಶಂಖಊದು
ರಂಪಮಾಡು.

ಶಂಖಪಾಲ
1. ಅಷ್ಟಫಣಿಗಳಲ್ಲಿ ಒಂದು. 2. ಶಂಕರಪಾಳಿ. 3. ಸೂರ್ಯ.

ಶಂಖಪಾಷಾಣ
ಕಾಯಿಸಿದರೆ ಕರಗದೆ, ಬೆಳ್ಳುಳ್ಳಿಯ ವಾಸನೆಯ ಹಬೆಯನ್ನು ಹೊರ ಸೂಸುವ ಬಿಳಿಯ ಆರ್ಸನಿಕ್ ಎಂಬ ಖನಿಜ ವಸ್ತು.

ಶಂಖಪುಷ್ಟಬಳ್ಳಿ
ಬಿಳಿಯ, ನೀಲಿಯ ದೊಡ್ಡ ದೊಡ್ಡ ಹೂವುಗಳನ್ನು ಬಿಡುವ ಒಂದು ಬಗೆಯ ಬಳ್ಳಿ.

ಶಂಖಭಸ್ಮ
ಶಂಖದಿಂದ ತಯಾರಿಸಿದ ರಾಸಾಯನಿಕ ಭಸ್ಮ.


logo