logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಶಮಿ
1. ಶಾಂತಸ್ವಭಾವದವನು. 2. ಬನ್ನಿಯ ಮರ. 3. ಕಾಳುಗಳ ಅಥವಾ ಧಾನ್ಯಗಳ ಮೇಲಿನ ಸಿಪ್ಪೆ,- ಹೊಟ್ಟು. 4. ಕಾಯಿ. 5. ಕರಿಯ ಜಾಲಿಮರ.

ಶಮಿ
ನೆಮ್ಮದಿಯಿಂದ ಕೂಡಿದ.

ಶಮಿಸು
1. ಶಾಂತಗೊಳಿಸು. 2. ಲಯವಾಗು.

ಶಮೀಪೂಜೆ
(ವಿಜಯದಶಮಿಯ ದಿನ) ಬನ್ನಿಯ ಮರಕ್ಕೆ ಮಾಡುವ ಪೂಜೆ,- ಅರ್ಚನೆ.

ಶಮೆ
ಮನೋನಿಗ್ರಹ.

ಶಯನ
1. ಮಲಗಿರುವಿಕೆ. 2. ನಿದ್ರೆ. 3. ಹಾಸುಗೆ. 4. ಮಂಚ. 5. ಕೂಟ.

ಶಯನಸದನ
ಮಲಗುವ ಕೋಣೆ.

ಶಯನಿಸು
ಮಲಗು.

ಶಯನೋತ್ಸವ
ದೇವರ ಮೂರ್ತಿಯನ್ನು ಮಲಗಿಸುವ ಒಂದು ಪೂಜಾವಿಧಾನ.

ಶಯು
ಒಂದು ಬಗೆಯ ಹಾವು.


logo