logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಶಂಬರಾರಿ
ಕಾಮ.

ಶಬರಿ
1. ಬೇಡರ ಹೆಂಗಸು. 2. ರಾಮನ ಭಕ್ತೆಯಾದ ಒಬ್ಬ ಬೇಡರ ತಪಸ್ವಿನಿ.

ಶಬಲ
1. ಅನೇಕ ಬಣ್ಣ. 2. ಚುಕ್ಕೆಗಳಿಂದ ಕೂಡಿದುದು.

ಶಬಲ
ಅನೇಕ ಬಣ್ಣಗಳಿಂದ ಕೂಡಿರುವ.

ಶಬಳ
1. ಅನೇಕ ಬಣ್ಣ. 2. ಬೆರಕೆ.

ಶಬ್ದ
1. ಸದ್ದು. 2. ವ್ಯಾಕರಣದಲ್ಲಿ ಅಕ್ಷರಗಳ ಗುಂಪು.

ಶಬ್ದಕೋಶ
ನಿಘಂಟು.

ಶಬ್ದಚಿತ್ರ
1. (ಬಾನುಲಿಯಲ್ಲಿ) ಬಿತ್ತರಿಸುವ, ಶಬ್ದಗಳಿಂದ ಕೂಡಿದ ನಾಟಕ ಮುಂತಾದುವು. 2. ಶಬ್ದಾಲಂಕಾರ.

ಶಬ್ದಜ್ಞ
ವ್ಯಾಕರಣವನ್ನು ತಿಳಿದವನು.

ಶಬ್ದರೂಪ
1. ವ್ಯಾಕರಣಬದ್ಧವಾದ ಪದದ ರೂಪ. 2. ಶಬ್ದಪ್ರಧಾನವಾದುದು.


logo