logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವಕ್ರತೆ
1. ಕೊಂಕು. 2. ಮೋಸ.

ವಕ್ರದೃಷ್ಟಿ
1. ಓರೆಯಾದ ದೃಷ್ಟಿ. 2. ಸರಳವಲ್ಲದ ಧೋರಣೆ.

ವಕ್ರದ್ವಾರ
1. ವಂಕದರ. 2. ರಹಸ್ಯ ವಾದ ಬಾಗಿಲು.

ವಕ್ರಾಂಗಿ
1. ಊನವಾದ ಅಂಗವುಳ್ಳವನು. 2. ಒಂದು ಬಗೆಯ ಔಷಧೀಸಸ್ಯ.

ವಕ್ರಿಮ
ಡೊಂಕು.

ವಕ್ರಿಮ
1. ಬಳಸಾದ. 2. ಕೊಂಕಿದ.

ವಕ್ರಿಸು
1. ಡೊಂಕಾಗು. 2. ವಿರೋಧಿಸು. 3. (ಅಮಂಗಳವನ್ನು ಸೂಚಿಸಲು) ಕೂಗು. 4. (ಗ್ರಹಗತಿಗಳು) ಕ್ರೂರವಾಗು. 5. (ಇನ್ನೊಬ್ಬರ ಮನೆಯಲ್ಲಿ) ದಾಕ್ಷಿಣ್ಯವಿಲ್ಲದೆ ಬಂದಿರು.

ವಕ್ರೋಕ್ತಿ
1. ಕೊಂಕುಮಾತು. 2. ದ್ವಂದ್ವಾರ್ಥದ ನುಡಿ. 3. ಒಂದು ಬಗೆಯ ಅಲಂಕಾರ.

ವಕ್ಷ
ಎದೆ.

ವಕ್ಷಸ್ಥಲ(ಳ)
ವಕ್ಷ.


logo