logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವ್ರತಿ
1. ನಿಯಮಬದ್ಧವಾದ ನಡವಳಿಕೆ ಯುಳ್ಳವನು. 2. ನೇಮಾನುಷ್ಠಾನಗಳನ್ನು ಆಚರಿಸುವವನು. 3. ತಪಸ್ವಿ. 4. ಯಾಗ ಮಾಡುವವನು. 5. ಜೈನಸಂನ್ಯಾಸಿ.

ವ್ರಯ
ಖರ್ಚು.

ವ್ರಾತ
1. ಗುಂಪು. 2. ದೇಹಶ್ರಮ.

ವ್ರಾತ್ಯ
1. ಉಪನಯನ ಮೊದಲಾದ ಸಂಸ್ಕಾರವಿಲ್ಲದವನು. 2. ನೀಚ.

ವ್ರೀಡೆ
ನಾಚಿಕೆ.

ವ್ರೀಹಿ
ನೆಲ್ಲು.

ವ್ರೈಹೇಯ
ಬತ್ತದ ಗದ್ದೆ.


logo