logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವಕ್ಕಣೆ
1. ವಿವರಣೆ. 2. ಮಾತಿನ ಶೈಲಿ,- ಧಾಟಿ.

ವಕ್ಕರಿಸು
1. (ತಿರಸ್ಕಾರಾರ್ಥದಲ್ಲಿ) ಉಂಟಾಗು. 2. ನಷ್ಟ ಉಂಟು ಮಾಡು. 3. (ಇನ್ನೊಬ್ಬರ ಮನೆಯಲ್ಲಿ) ಅನಪೇಕ್ಷಿತವಾಗಿ ಬರು.

ವಕ್ಖಾಣ
ವಿವರಣೆ.

ವಕ್ತಾರ
1. ಚೆನ್ನಾಗಿ ಮಾತನಾಡುವವನು. 2. ಭಾಷಣಕಾರ. 3. ವಿವರಿಸುವವನು. 4. ಒಬ್ಬರ ಅಥವಾ ಒಂದು ವಿಷಯದ ಪರವಾಗಿ ಅಧಿಕೃತವಾಗಿ ಮಾತನಾಡುವ ವ್ಯಕ್ತಿ.

ವಕ್ತೃ
ವಕ್ತಾರ.

ವಕ್ತ್ರ
1. ಬಾಯಿ. 2. ಮುಖ.

ವಕ್ರ
1. ಕೊಂಕಿದುದು. 2. ಕುಟಿಲವಾದುದು. 3. ತೊಂದರೆ. 4. ಮಂಗಳಗ್ರಹ.

ವಕ್ರ
1. ಕೊಂಕಿದ. 2. ಬಳಸಾದ. 3. ಕಪಟದ. 4. ಕ್ರೂರವಾದ.

ವಕ್ರಗತಿ
1. ಡೊಂಕಾದ ಚಲನೆ,- ಗಮನ. 2. ಹೀನವಾದ ನಡತೆ. 3. (ನೀರಿನ ಪ್ರವಾಹದ) ತಿರುವು.

ವಕ್ರತುಂಡ
1. ಕೊಂಕಿದ ಸೊಂಡಿಲನ್ನುಳ್ಳ ವನು. 2. ಕೊಂಕಿದ ಕೊಕ್ಕನ್ನುಳ್ಳುದು.


logo