logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವನಭೋಜನ
ವಿಹಾರಾರ್ಥವಾಗಿ ಉದ್ಯಾನ ವನದಲ್ಲಿ ಮಾಡುವ ಸಾಮೂಹಿಕ ಭೋಜನ.

ವನಮಹತ್ತರ
ಉದ್ಯಾನದ ಮೇಲ್ವಿಚಾರಕ.

ವನಮಹೋತ್ಸವ
ಕಾಡಿನ ಅಭಿವೃದ್ಧಿಗಾಗಿ ನಿರ್ದಿಷ್ಟದಿನದಂದು ಗಿಡಗಳನ್ನು ನೆಟ್ಟು ಆಚರಿಸಲು ಹಮ್ಮಿಕೊಂಡಿರುವ ಒಂದು ಕಾರ್ಯಕ್ರಮ,- ಸಮಾರಂಭ.

ವನಮಾಲಿ(ಳಿ)
ವನಮಾಲೆಯನ್ನು ಧರಿಸಿದವನು.

ವನಮಾಲೆ(ಳೆ)
1. ಕಾಡುಗಳ ಸಾಲು. 2. ಕಾಡಿನ ಹೂವುಗಳಿಂದ ರಚಿಸಿದ ಮಾಲೆ,- ಹಾರ.

ವನರಾಶಿ
1. ದಟ್ಟವಾಗಿ ಬೆಳೆದ ಮರಗಳ ಗುಂಪು. 2. ನೀರಿನ ರಾಶಿ.

ವನರುಹ
ವನಜ.

ವನರುಹನಾಭ
ವನಜನಾಭ.

ವನವಾಸ
1. ಕಾಡಿನಲ್ಲಿ ವಾಸಮಾಡುವುದು. 2. ಬಹಳ ಕಷ್ಟದ ಬದುಕು.

ವನವಾಸಿ
1. ಕಾಡಿನಲ್ಲಿ ವಾಸಮಾಡು ವವನು. 2. ತಪಸ್ವಿ. 3. ಒಂದು ನಾಡಿನ ಹೆಸರು.


logo