logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವಂದಿಗ
ಜೊತೆಯವನು.

ವಂದಿತ
1. ನಮಸ್ಕರಿಸಿದ. 2. ಸ್ತುತಿಸಿದ.

ವಂದಿಸು
1. ನಮಸ್ಕರಿಸು. 2. ಸ್ತುತಿಸು. 3. ಗೌರವಿಸು.

ವದಿಸು
ಹೇಳು.

ವಂದ್ಯ
1. ನಮಿಸಲು ಯೋಗ್ಯನಾದವನು. 2. ಹೊಗಳಲು ಅರ್ಹನಾದವನು.

ವಂದ್ಯ
ಹೊಗಳಲು ಅರ್ಹವಾದ.

ವದ್ಯ
ಮಾತನಾಡಲು ಯೋಗ್ಯವಾದ,- ಪ್ರಶಸ್ತವಾದ.

ವದ್ಯ
1. ಮಾತನಾಡುವುದು. 2. ಚಾಂದ್ರಮಾನಮಾಸದ ಎರಡನೆಯ ಪಕ್ಷ.

ವಧ(ಧೆ)
ಕೊಲ್ಲುವುದು.

ವಧಕಾರ
1. ಅಪರಾಧಿಗಳಿಗೆ ಮರಣ ದಂಡನೆ ಮುಂತಾದ ಶಿಕ್ಷೆಗಳನ್ನು ಕಾರ್ಯಗತಗೊಳಿಸಲು ನಿಯಮಿತನಾಗಿರುವವನು. 2. ಕೊಲೆ ಮಾಡುವವನು.


logo