logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವತಿ
ಕಡೆ.

ವಂತಿಗೆ
1. (ಧರ್ಮಕಾರ್ಯಕ್ಕಾಗಿ ನೀಡುವ) ಸಹಾಯಧನ. 2. (ಸಭೆ, ಸಮಾರಂಭಗಳಿಗಾಗಿ ಸಾರ್ವಜನಿಕ ರಿಂದ ವಸೂಲು ಮಾಡುವ) ಚಂದಾಹಣ.

ವತ್ಸ
1. ಎಳೆಯ ಕರು. 2. ಮಗು. 3. ಮಗ. 4. ಚಿಹ್ನೆ. 5. ವರ್ಷ.

ವತ್ಸಕುಲ
ಕರುಗಳ ಗುಂಪು,- ಸಮೂಹ.

ವತ್ಸನಾಭಿ
ಒಂದು ಬಗೆಯ ವಿಷಸಸ್ಯ ಮತ್ತು ಅದರಿಂದ ತಯಾರಿಸಿದ ವಿಷ.

ವತ್ಸರ
ವರ್ಷ.

ವತ್ಸಲ(ಳ)
ಪ್ರೀತಿಯುಳ್ಳವನು.

ವತ್ಸಲ(ಳ)
ಅಕ್ಕರೆಯಿಂದ ಕೂಡಿದ.

ವತ್ಸೆ
1. ಹೆಣ್ಣುಕರು. 2. ಮಗಳು.

ವದಂತಿ
1. ಸುದ್ದಿ. 2. ಜನರು ಆಡಿಕೊಳ್ಳುವ ಮಾತು.


logo